Netweb: ನೆಟ್ವೆಬ್ ಟೆಕ್ನಾಲಜೀಸ್ ಐಪಿಒದಲ್ಲಿ ಷೇರುಪಡೆದವರಿಗೆ ಭರ್ಜರಿ ಸುಗ್ಗಿ; ನಿಮಗೆ ಷೇರು ಸಿಕ್ಕಿದೆಯಾ ಪರಿಶೀಲಿಸುವುದು ಹೇಗೆ?
Netweb Technologies Share Allotment Today: ಜುಲೈ 17ರಿಂದ 19ರವರೆಗೆ ಐಪಿಒ ಆಫರ್ ಕೊಟ್ಟಿದ್ದ ನೆಟ್ವೆಬ್ ಟೆಕ್ನಾಲಜೀಸ್ ಸಂಸ್ಥೆ ಇಂದು ಷೇರು ಅಲಾಟ್ಮೆಂಟ್ ನಿರ್ಧರಿಸಲಿದೆ. ಜುಲೈ 27ರಂದು ಷೇರುಗಳು ಬಿಎಸ್ಇನಲ್ಲಿ ಲಿಸ್ಟ್ ಆಗಲಿವೆ.
ಮುಂಬೈ, ಜುಲೈ 24: ಕಳೆದ ವಾರ ಐಪಿಒ ಅಫರ್ ಕೊಟ್ಟ ನೆಟ್ವೆಬ್ ಟೆಕ್ನಾಲಜೀಸ್ ಸಂಸ್ಥೆ ಇಂದು (ಜುಲೈ 24) ಷೇರುಗಳನ್ನು ಹಂಚಿಕೆ ಮಾಡುತ್ತಿದೆ. ಅಂದರೆ, ಐಪಿಒದಲ್ಲಿ ಷೇರುಗಳಿಗೆ ಬಿಡ್ ಸಲ್ಲಿಸಿದವರ ಪೈಕಿ ಯಾರೆ ಷೇರುಗಳ ಅಲಾಟ್ಮೆಂಟ್ ಮಾಡಲಾಗುತ್ತದೆ ಎಂಬುದು ಇಂದು ತಿಳಿಯಲಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನೆಟ್ವೆಬ್ ಟೆಕ್ನಾಲಜೀಸ್ ಸಂಸ್ಥೆಯ ಷೇರುಗಳು ಲಿಸ್ಟ್ ಆಗಲಿವೆ.
ಕುತೂಹಲದ ಸಂಗತಿ ಎಂದರೆ ನೆಟ್ವೆಬ್ ಟೆಕ್ನಾಲಜೀಸ್ (Netweb Technologies) ಐಪಿಒದಲ್ಲಿ ಇದ್ದುದ್ದಕ್ಕಿಂತ ಹೆಚ್ಚಿನ ಬೆಲೆಯ ಜಿಎಂಪಿ ಇದೆ. ಗ್ರೇ ಮಾರ್ಕೆಟ್ ಪ್ರೀಮಿಯಮ್ನಲ್ಲಿ (GMP) ನೆಟ್ವೆಬ್ ಟೆಕ್ನಾಲಜೀಸ್ 368 ರೂ ಬೆಲೆ ಪಡೆದಿದೆ. ಇದರ ಐಪಿಒ 375ರಿಂದ 400 ರೂ ಆಫರ್ ಇತ್ತು. ಜಿಎಂಪಿ ದರವಾದ 368 ರೂ ಅನ್ನು ಗಮನಿಸಿದರೆ ನೆಟ್ವೆಬ್ ಟೆಕ್ನಾಲಜೀಸ್ ಸಂಸ್ಥೆ ಬಿಎಸ್ಇನಲ್ಲಿ 868 ರೂಪಾಯಿಗೆ ಲಿಸ್ಟ್ ಆಗುವ ಸಾಧ್ಯತೆ ಇದೆ. ಅಂದರೆ ನೆಟ್ವೆಬ್ ಸಂಸ್ಥೆಯ ಐಪಿಒ ಆಫರ್ನಲ್ಲಿ ಷೇರುಖರೀದಿಸಿದವರೆ ಒಮ್ಮೆಗೇ ಶೇ. 75ರಷ್ಟು ಲಾಭ ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: BSE 148 Years: ಆಲದ ಮರದ ಕೆಳಗೆ ಶುರುವಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ 148 ವರ್ಷಗಳ ಇಂಟರೆಸ್ಟಿಂಗ್ ಇತಿಹಾಸ
ನೆಟ್ವೆಬ್ ಟೆಕ್ನಾಲಜೀಸ್ 41 ಲಕ್ಷ ರೀಟೇಲ್ ಷೇರುಗಳು
ನೆಟ್ವೆಬ್ ಟೆಕ್ನಾಲಜೀಸ್ ಸಂಸ್ಥೆ ಜುಲೈ 17ರಿಂದ 19ರವರೆಗೆ ಐಪಿಒ ಆಫರ್ ಕೊಟ್ಟಿತ್ತು. ಒಟ್ಟು 1,26,20,000 ಷೇರುಗಳನ್ನು ಮಾರಾಟಕ್ಕಿಡಲಾಗಿತ್ತು. ಇದರಲ್ಲಿ 41,20,000 ರೀಟೇಲ್ ಷೇರುಗಳಾಗಿದ್ದವು. ಉಳಿದವು ಇತರ ದೊಡ್ಡ ಹೂಡಿಕೆದಾರರಿಗೆ ಆಫರ್ ಕೊಡಲಾಗಿದೆ. ನೆಟ್ವೆಬ್ ಟೆಕ್ನಾಲಜೀಸ್ ಸಂಸ್ಥೆ ಒಟ್ಟು 5,09,23,980 (5.1 ಕೋಟಿ) ಷೇರುಗಳನ್ನು ಹೊಂದಿದೆ.
ನೆಟ್ವೆಬ್ ಟೆಕ್ನಾಲಜೀಸ್ ಐಪಿಒ ಅಲಾಟ್ಮೆಂಟ್ ಆಗಿದೆಯಾ ಪರಿಶೀಲಿಸುವ ವಿಧಾನ
ನೀವು ನೆಟ್ವೆಬ್ ಐಪಿಒದಲ್ಲಿ ಷೇರುಗಳಿಗೆ ಬಿಡ್ ಸಲ್ಲಿಸಿದ್ದರೆ ಇವತ್ತು ಅಲಾಟ್ಮೆಂಟ್ ಘೋಷಣೆಯಲ್ಲಿ ನಿಮಗೆ ಷೇರು ಹಂಚಿಕೆ ಆಗಿದೆಯಾ ಎಂಬುದನ್ನು ತಿಳಿಯಬಹುದು. ಬಿಎಸ್ಇ ವೆಬ್ಸೈಟ್ನಲ್ಲಿ ಈ ನೇರ ಲಿಂಕ್ಗಳ ಮೂಲಕ ಪರಿಶೀಲನೆ ನಡೆಸಬಹುದು.
www.bseindia.com/investors/appli_check.aspx
linkintime.co.in/mipo/ipoallotment.html
ಇದನ್ನೂ ಓದಿ: Reliance: ಆರ್ಐಎಲ್ನಿಂದ ಡೀಮರ್ಜ್ ಆದ ಜಿಯೋ ಫೈನಾನ್ಷಿಯಲ್; 273 ರೂ ಷೇರುಬೆಲೆ ಪಡೆದ ಜೆಎಫ್ಎಸ್ಎಲ್
ಇಲ್ಲಿ ಐಪಿಒ ಅಪ್ಲಿಕೇಶನ್ ನಂಬರ್, ಪ್ಯಾನ್ ಇತ್ಯಾದಿ ವಿವರ ಕೊಟ್ಟು ಸಬ್ಮಿಟ್ ಮಾಡಿದರೆ ನಿಮಗೆ ಷೇರು ಅಲಾಟ್ ಆಗಿದೆಯಾ ಇಲ್ಲವಾ ಎಂಬುದು ತಿಳಿಯುತ್ತದೆ.
ಒಂದು ವೇಳೆ ನಿಮಗೆ ಷೇರು ಅಲಾಟ್ ಆಗದೇ ಇದ್ದರೆ ಜುಲೈ 25, ಮಂಗಳವಾರ ನಿಮ್ಮ ಹಣ ರೀಫಂಡ್ ಆಗುತ್ತದೆ. ಒಂದು ವೇಳೆ ಷೇರು ಅಲಾಟ್ಮೆಂಟ್ ಆಗಿದ್ದರೆ ಜುಲೈ 26ರಂದು ನಿಮ್ಮ ಡೀಮ್ಯಾಟ್ ಖಾತೆಗೆ ಷೇರುಗಳು ಕ್ರೆಡಿಟ್ ಆಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ