ಹೊಸ ಆಧಾರ್ ಆ್ಯಪ್ ಬಿಡುಗಡೆ; ಹೆಚ್ಚುವರಿ ಮಾಹಿತಿ ಹಂಚಿಕೆ ಇಲ್ಲದೆ ವಯಸ್ಸು ದೃಢೀಕರಣ ಸಾಧ್ಯ

New Aadhaar App launched by UIDAI: ಹೆಚ್ಚುವರಿ ಮಾಹಿತಿ ಹಂಚಿಕೆಗೆ ಅವಕಾಶ ಇಲ್ಲದೆ ಕೇವಲ ವಯಸ್ಸು ದೃಢೀಕರಣ ಮಾತ್ರ ಮಾಡುವಂತಹ ಫೀಚರ್ ಇರುವ ಹೊಸ ಆಧಾರ್ ಆ್ಯಪ್ ಬಿಡುಗಡೆ ಆಗಿದೆ. ಯುಐಡಿಎಐ ರೂಪಿಸಿರುವ ಈ ಆಧಾರ್ ಆ್ಯಪ್​ನಲ್ಲಿ ಇತರ ಫೀಚರ್​ಗಳೆಲ್ಲವೂ ಇರುತ್ತದೆ. ಆನ್ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಬಳಕೆದಾರರ ಏಜ್ ವೆರಿಫಿಕೇಶನ್ ಮಾಡಲು ಈ ಹೊಸ ಆ್ಯಪ್ ಸಹಾಯಕವಾಗುತ್ತದೆ.

ಹೊಸ ಆಧಾರ್ ಆ್ಯಪ್ ಬಿಡುಗಡೆ; ಹೆಚ್ಚುವರಿ ಮಾಹಿತಿ ಹಂಚಿಕೆ ಇಲ್ಲದೆ ವಯಸ್ಸು ದೃಢೀಕರಣ ಸಾಧ್ಯ
ಆಧಾರ್

Updated on: Jan 30, 2026 | 4:58 PM

ಯುಐಡಿಎಐ ಸಂಸ್ಥೆ ಹೊಸ ಆಧಾರ್ ಆ್ಯಪ್ (Aadhaar) ಬಿಡುಗಡೆ ಮಾಡಿದೆ. ಡಿಜಿಟಲ್ ವೈಯಕ್ತಿಕ ಡಾಟಾ ರಕ್ಷಣಾ ಕಾಯ್ದೆ ಅಡಿ ಯಾವುದೇ ಹೆಚ್ಚುವರಿ ಡಾಟಾ ಹಂಚಿಕೆ ಇಲ್ಲದೇ ಏಜ್ ವೆರಿಫಿಕೇಶನ್ ಮಾಡಲು ಈ ಹೊಸ ಆಧಾರ್ ಆ್ಯಪ್ ಸಹಾಯಕವಾಗಲಿದೆ. ಮೊನ್ನೆ ಬುಧವಾರ (ಜ. 28) ಈ ಆ್ಯಪ್ ಅನಾವರಣಗೊಂಡಿದೆ.

ಉತ್ತಮ ಆಡಳಿತಕ್ಕೆ ಆಧಾರ್ ದೃಢೀಕರಣ (ಸಮಾಜ ಕಲ್ಯಾಣ, ನಾವೀನ್ಯತೆ, ಜ್ಞಾನ) ಕಾಯ್ದೆಯ ನಿಯಮಗಳಿಗೆ (ಸ್ವಿಕ್ ರೂಲ್ಸ್) ತಿದ್ದುಪಡಿ ತರಲಾಗಿದೆ. ಈ ಕಾನೂನು ಅಡಿಯಲ್ಲಿ ಸುರಕ್ಷಿತ ರೀತಿಯಲ್ಲಿ ಆಧಾರ್ ಅಥೆಂಟಿಕೇಶನ್ ಬಳಸಿ ಸೇವೆ ಒದಗಿಲು ಖಾಸಗಿ ಸಂಸ್ಥೆಗಳಿಗೆ ಅನುವು ಮಾಡಿಕೊಡಲಾಗುತ್ತದೆ. ಈ ಮಾಹಿತಿಯನ್ನು ಹೊಸ ಆಧಾರ್ ಆ್ಯಪ್ ಬಿಡುಗಡೆ ಸಂದರ್ಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವಾಲಯದ ಕಾರ್ಯದರ್ಶಿ ಎಸ್ ಕೃಷ್ಣನ್ ತಿಳಿಸಿದರು.

ಇದನ್ನೂ ಓದಿ: ಈ ಡೇಂಜರಸ್ ಆ್ಯಪ್​ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು; ನಿಮ್ಮ ಫೋನ್​ನಲ್ಲಿ ಇವು ಇವೆಯಾ ಪರಿಶೀಲಿಸಿ…

ಆಧಾರ್ ಅನ್ನು ವಯಸ್ಸು ದೃಢೀಕರಣಕ್ಕೆ ಬಳಸಲಾಗುತ್ತದೆ. ಈ ವೇಳೆ, ಆಧಾರ್​ನ ಇತರ ಮಾಹಿತಿಯೂ ರವಾನೆಯಾಗುವ ಸಾಧ್ಯತೆ ಇರುತ್ತದೆ. ಹೊಸ ಆಧಾರ್ ಆ್ಯಪ್​ನಲ್ಲಿ ವಯಸ್ಸಿನ ದೃಢೀಕರಣ ಮಾತ್ರವೇ ಮಾಡಬಹುದು. ಸೋಷಿಯಲ್ ಮೀಡಿಯಾ, ಗೇಮ್ಸ್, ಇಕಾಮರ್ಸ್ ಇತ್ಯಾದಿ ಆನ್ಲೈನ್ ಪ್ಲಾಟ್​ಫಾರ್ಮ್​ಗಳು ತಮ್ಮ ಬಳಕೆದಾರರ ವಯಸ್ಸನ್ನು ದೃಢೀಕರಿಸಲು ಆಧಾರ್​ನ ಏಜ್ ಗೇಟಿಂಗ್ ಫೀಚರ್ ಬಳಸಬಹುದು.

ಏಜ್ ವೆರಿಫಿಕೇಶನ್ ಸಾಧ್ಯವಾದರೆ ಆನ್​ಲೈನ್ ಪ್ಲಾಟ್​ಫಾರ್ಮ್​ಗಳು ಇನ್ನಷ್ಟು ಉಪಯುಕ್ತವಾಗಿ ಸರ್ವಿಸ್ ನೀಡಬಹುದು. ಬಳಕೆದಾರರು ಮಕ್ಕಳಾಗಿದ್ದರೆ ಅವರ ವಯಸ್ಸಿಗೆ ಸೂಕ್ತವಲ್ಲದ ಕಂಟೆಂಟ್ ಅಥವಾ ಪ್ರಾಡಕ್ಟ್ ಅನ್ನು ಪ್ರದರ್ಶಿಸದಿರಬಹುದು.

ಇದನ್ನೂ ಓದಿ: ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್​ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ

ಹೊಸ ಆಧಾರ್ ಆ್ಯಪ್ ಏಜ್ ಗೇಟಿಂಗ್​ಗೆ ಮಾತ್ರವೇ ಬಳಕೆ ಆಗುವಂಥದ್ದಲ್ಲ. ವ್ಯಕ್ತಿಯ ಗುರುತಿನ ಕಾರ್ಡ್ ರೀತಿ ಡಿಜಿಟಲ್ ಅಗಿ ಬಳಸಬಹುದು. ಹೋಟೆಲ್, ಚಿತ್ರಮಂದಿರ ಇತ್ಯಾದಿ ಸ್ಥಳಗಳಲ್ಲಿ ವ್ಯಕ್ತಿಯ ಗುರುತನ್ನು ಪರಿಶೀಲಿಸಲು ಅವರ ಈ ಆಧಾರ್ ಆ್ಯಪ್ ಅನ್ನು ಪರಿಶೀಲಿಸಬಹುದು. ಭೌತಿಕವಾಗಿ ಆಧಾರ್ ದಾಖಲೆ ಕೇಳುವ ಯಾವುದೇ ಸಂಸ್ಥೆಗೂ ಡಿಜಿಟಲ್ ಆಗಿ ಆಧಾರ್ ದೃಢೀಕರಣ ಕೊಡಲು ಈ ಹೊಸ ಆ್ಯಪ್ ನೆರವಾಗುತ್ತದೆ. ಆಧಾರ್ ಕಾಯ್ದೆ ಪ್ರಕಾರ ಖಾಸಗಿ ಸಂಸ್ಥೆಗಳು ಯಾವುದೇ ವ್ಯಕ್ತಿಯ ಆಧಾರ್ ದತ್ತಾಂಶವನ್ನು ಸಂಗ್ರಹಿಸುವಂತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ