ವಿಪ್ರೋದಲ್ಲಿ ಥಿಯೆರಿ ಡೆಲಾಪೋರ್ಟೆ ನಿರ್ಗಮನ; ನೂತನ ಸಿಇಒ ಶ್ರೀನಿವಾಸ್ ಪಾಲಿಯಾ ಯಾರು?

New Wipro CEO and MD Srinivas Pallia: ನಾಲ್ಕು ವರ್ಷಗಳಿಂದ ವಿಪ್ರೋ ಸಿಇಒ ಮತ್ತು ಎಂಡಿ ಆಗಿದ್ದ ಥಿಯೆರಿ ಡೆಲಾಪೋರ್ಟೆ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ಶ್ರೀನಿವಾಸ್ ಪಾಲಿಯಾ ಅವರನ್ನು ವಿಪ್ರೋ ನೇಮಕ ಮಾಡಿದೆ. ಶ್ರೀನಿವಾಸ್ ಅವರು ಬೆಂಗಳೂರಿನ ಐಐಎಸ್​ಸಿಯಲ್ಲಿ ಓದಿದವರು. ಮೂರು ದಶಕಗಳಿಂದ ವಿಪ್ರೋದಲ್ಲೇ ಕೆಲಸ ಮಾಡುತ್ತಿದ್ದಾರೆ. ಹಲವು ಹಿರಿಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ವಿಪ್ರೋದ ಛೇರ್ಮನ್ ರಿಷದ್ ಪ್ರೇಮ್​ಜಿ ಅವರಿಗೆ ರಿಪೋರ್ಟ್ ಮಾಡಲಿರುವ ನೂತನ ಸಿಇಒ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಕಚೇರಿಯಿಂದ ಕೆಲಸ ಮಾಡಲಿದ್ದಾರೆ.

ವಿಪ್ರೋದಲ್ಲಿ ಥಿಯೆರಿ ಡೆಲಾಪೋರ್ಟೆ ನಿರ್ಗಮನ; ನೂತನ ಸಿಇಒ ಶ್ರೀನಿವಾಸ್ ಪಾಲಿಯಾ ಯಾರು?
ವಿಪ್ರೋ
Follow us
|

Updated on:Apr 07, 2024 | 11:25 AM

ನವದೆಹಲಿ, ಏಪ್ರಿಲ್ 7: ವಿಪ್ರೋ ಸಂಸ್ಥೆಯ ಉನ್ನತ ಮಟ್ಟದಲ್ಲಿ ಮಹತ್ವದ ಬದಲಾವಣೆ ಆಗಿದೆ. ಸಿಇಒ ಮತ್ತು ಎಂಡಿ ಆಗಿದ್ದ ಥಿಯೆರಿ ಡೆಲಾಪೋರ್ಟೆ (Thierry Delaporte) ನಿರ್ಗಮಿಸಿದ್ದು, ಅವರ ಸ್ಥಾನಕ್ಕೆ ಶ್ರೀನಿವಾಸ್ ಪಾಲಿಯಾ (Srinivas Pallia) ಅವರನ್ನು ನೇಮಕ ಮಾಡಲಾಗಿದೆ. ವಿಪ್ರೋದಲ್ಲೇ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವ ಶ್ರೀನಿವಾಸ್ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿದ್ದುಕೊಂಡು ಸಿಇಒ ಸ್ಥಾನ ನಿಭಾಯಿಸಲಿದ್ದಾರೆ. ವಿಪ್ರೋ ಛೇರ್ಮನ್ ಆಗಿರುವ ರಿಷದ್ ಪ್ರೇಮ್​ಜಿ ಅವರಿಗೆ ಹೊಸ ಸಿಇಒ ರಿಪೋರ್ಟ್ ಮಾಡಲಿದ್ದಾರೆ.

ಏಪ್ರಿಲ್ 19ರಂದು ವಿಪ್ರೋದ ನಾಲ್ಕನೇ ತ್ರೈಮಾಸಿಕದ ಹಾಗೂ ಇಡೀ ಆರ್ಥಿಕ ವರ್ಷದ ಹಣಕಾಸು ವರದಿ ಬಿಡುಗಡೆ ಆಗಲಿದೆ. ಅದಕ್ಕಿಂತ ಕೆಲ ದಿನಗಳ ಮೊದಲು ಸಂಸ್ಥೆಯ ಉನ್ನತ ಮಟ್ಟದಲ್ಲಿ ಈ ಬದಲಾವಣೆ ಆಗಿದೆ.

ಐಟಿ ಸರ್ವಿಸ್ ಕಂಪನಿಯಾಗಿರುವ ವಿಪ್ರೋ ಇತ್ತೀಚಿನ ಕೆಲ ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ವಿಪ್ರೋದ ಬಿಸಿನೆಸ್ ಕಡಿಮೆ ಆಗುತ್ತಿದೆ. ಗಾಯದ ಮೇಲೆ ಬರೆ ಹಾಕಿದಂತೆ ಹಿರಿಯ ಹುದ್ದೆ ಮಟ್ಟದಲ್ಲಿ ಸಾಕಷ್ಟು ನಿರ್ಗಮನಗಳಾಗುತ್ತಿವೆ. ಎಕ್ಸಿಕ್ಯೂಟಿವ್ ಮಟ್ಟದ ಹುದ್ದೆಗಳನ್ನು ಹೊಂದಿದವರು ಪ್ರತಿಸ್ಪರ್ಧಿ ಕಂಪನಿಗಳತ್ತ ಮುಖ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಈ ವಿಚಾರದಲ್ಲಿ ಎದುರಾಳಿ ಕಂಪನಿಗಳ ವಿರುದ್ಧ ವಿಪ್ರೋ ಕೇಸ್ ದಾಖಲಿಸುವ ಮಟ್ಟಕ್ಕೆ ಇದು ಹೋಗಿದೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್​ಗೆ ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ

ಈಗ ಸಿಇಒ ಸ್ಥಾನದಿಂದ ಹೊರಹೋಗಿರುವ ಥಿಯೆರಿ ಡೆಲಾಪೋರ್ಟೆ ಕಳೆದ ನಾಲ್ಕು ವರ್ಷಗಳಿಂದ ಆ ಹುದ್ದೆಯಲ್ಲಿರುವವರು. ಅವರು ಬೇರೆ ಐಟಿ ಕಂಪನಿ ಸೇರುತ್ತಿಲ್ಲ. ತಮ್ಮ ವೈಯಕ್ತಿಕ ಅಭಿಲಾಷೆಗಳ ಕಡೆಗೆ ವಾಲಿದ್ದಾರೆ.

ಶ್ರೀನಿವಾಸ್ ಪಾಲಿಯಾ ಹಳೆಯ ವಿಪ್ರೋ ಹುಲಿ

ಶ್ರೀನಿವಾಸ್ ಪಾಲಿಯಾ ಎಂಜಿನಿಯರ್ ಆಗಿದ್ದು, ಬೆಂಗಳೂರಿನ ಐಐಎಸ್​ಸಿಯಲ್ಲಿ ಮ್ಯಾನೇಜ್ಮೆಂಟ್ ಸ್ಟಡೀಸ್​ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ಹಾರ್ವರ್ಡ್​ನಲ್ಲಿ ಬಿಸಿನೆಸ್ ಉನ್ನತ ವ್ಯಾಸಂಗ ಮಾಡಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಭಾರತ ವಿರೋಧಿ ಸರ್ಕಾರ ಇದ್ದರೂ ಆ ದೇಶಕ್ಕೆ ಅವಶ್ಯಕ ವಸ್ತುಗಳ ಸರಬರಾಜು ಹೆಚ್ಚಿಸಲು ಭಾರತ ಸಮ್ಮತಿ

1992ರಲ್ಲಿ ವಿಪ್ರೋ ಸೇರಿದವರು. ಮೂರು ದಶಕಗಳ ಕಾಲದಿಂದ ವಿಪ್ರೋದಲ್ಲಿದ್ದಾರೆ. ವಿವಿಧ ಸ್ತರಗಳಿಂದ ಮೇಲೇರಿದವರು. ವಿಪ್ರೋ ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯರಾಗಿರುವ ಅವರು ವಿಪ್ರೋ ಕನ್ಸೂಮರ್ ಬಿಸಿನೆಸ್ ಯೂನಿಟ್​ನ ಅಧ್ಯಕ್ಷ ಸ್ಥಾನ, ವಿಪ್ರೋ ಬಿಸಿನೆಸ್ ಅಪ್ಲಿಕೇಶನ್ ಸರ್ವಿಸಸ್​ನ ಗ್ಲೋಬಲ್ ಹೆಡ್ ಇತ್ಯಾದಿ ಸ್ಥಾನಗಳನ್ನು ನಿಭಾಯಿಸಿದ್ದಾರೆ. ವಿಪ್ರೋದ ಅಮೆರಿಕಾಸ್1 ವಿಭಾಗಕ್ಕೆ ಸಿಇಒ ಕೂಡ ಆಗಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Sun, 7 April 24

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ