ಜರ್ಮನಿಯಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್; ಭಾರತ-ಜರ್ಮನಿ ಸಂಬಂಧ ಗಟ್ಟಿಗೊಳಿಸಲು ಯೋಜನೆ; ಪ್ರಧಾನಿ ಮೋದಿಯೂ ಭಾಗಿ

| Updated By: Digi Tech Desk

Updated on: Nov 20, 2024 | 6:20 PM

News9 Global Summit 2024: ಟಿವಿ9 ನೆಟ್ವರ್ಕ್ ವತಿಯಿಂದ ನ್ಯೂಸ್9 ಜಾಗತಿಕ ಶೃಂಗಸಭೆ ಜರ್ಮನಿಯಲ್ಲಿ ನಡೆಯುತ್ತಿದೆ. ಭಾರತ ಮತ್ತು ಜರ್ಮನಿಯ ಸಂಬಂಧಗಳನ್ನು ವಿವಿಧ ಸ್ತರಗಳಲ್ಲಿ ಗಟ್ಟಿಗೊಳಿಸಲು ಪೂರಕವಾಗಿ ಈ ಸಮಿಟ್ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂದ್ಯಾ ಮೊದಲಾದವರು ಈ ಸಮಿಟ್​ನಲ್ಲಿ ಭಾಷಣ ಮಾಡಲಿದ್ದಾರೆ.

ಜರ್ಮನಿಯಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್; ಭಾರತ-ಜರ್ಮನಿ ಸಂಬಂಧ ಗಟ್ಟಿಗೊಳಿಸಲು ಯೋಜನೆ; ಪ್ರಧಾನಿ ಮೋದಿಯೂ ಭಾಗಿ
ನ್ಯೂಸ್9 ಗ್ಲೋಬಲ್ ಸಮಿಟ್
Follow us on

ಸ್ಟುಟ್​ಗಾರ್ಟ್, ಜರ್ಮನಿ, ನವೆಂಬರ್ 11: ಟಿವಿ9 ನೆಟ್ವರ್ಕ್ ವತಿಯಿಂದ ನ್ಯೂಸ್9 ಜಾಗತಿಕ ಶೃಂಗಸಭೆ ಜರ್ಮನಿಯಲ್ಲಿ ನಡೆಯಲಿದೆ. ಭಾರತ ಮತ್ತು ಜರ್ಮನಿಯ ಸಂಬಂಧಗಳನ್ನು ವಿವಿಧ ಸ್ತರಗಳಲ್ಲಿ ಗಟ್ಟಿಗೊಳಿಸಲು ಪೂರಕವಾಗಿ ಈ ಸಮಿಟ್ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂದ್ಯಾ ಮೊದಲಾದವರು ಈ ಸಮಿಟ್​ನಲ್ಲಿ ಭಾಷಣ ಮಾಡಲಿದ್ದಾರೆ. ಜರ್ಮನಿಯ ಅತ್ಯುನ್ನತ ಫುಟ್ಬಾಲ್ ಟೂರ್ನಿಯಾದ ಬುಂಡೆಸ್​ಲಿಗಾದ ಫುಟ್ಬಾಲ್ ಕ್ಲಬ್ ಆದ ವಿಎಫ್​ಬಿ ಸ್ಟುಟ್​ಗಾರ್ಟ್ ಈ ಕಾರ್ಯಕ್ರಮದ ಸಹ-ಆಯೋಜಕವಾಗಿದೆ. ಜರ್ಮನಿಯ ಬೇಡನ್ ವರ್ಟನ್​ಬರ್ಗ್ ರಾಜ್ಯವೂ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದೆ.

ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್, ನ್ಯೂಸ್9 ಎಕ್ಸಿಕ್ಯೂಟಿವ್ ಎಡಿಟರ್ ಕಾರ್ತಿಕ್ ಮಲ್ಹೋತ್ರಾ, ವಿಎಫ್​ಬಿ ಸ್ಟುಟ್​ಗಾರ್ಟ್ ಮುಖ್ಯ ಸೇಲ್ಸ್ ಆಫೀಸರ್ ರೋವನ್ ಕ್ಯಾಸ್ಪರ್ (Rauven Kasper), ಎಎಂ ಗ್ರೀನ್ ಅಮೋನಿಯಾ ಸಂಸ್ಥೆಯ ಸಿಇಒ ಗೌತಮ್ ರೆಡ್ಡಿ ಮೊದಲಾದವರು ಈ ಕಾರ್ಯಕ್ರಮದ ಕರ್ಟನ್ ರೈಸರ್​ನಲ್ಲಿ ಪಾಲ್ಗೊಂಡಿದ್ದರು.

ನವೆಂಬರ್ 21ರಿಂದ 23ರವರೆಗೂ ಈ ನ್ಯೂಸ್9 ಗ್ಲೋಬಲ್ ಸಮಿಟ್ ಜರ್ಮನಿಯ ಸ್ಟುಟ್​ಗಾರ್ಟ್ ನಗರದಲ್ಲಿ ನಡೆಯಲಿದೆ. ಮೂರು ದಿನಗಳ ಕಾಲ ಎರಡೂ ದೇಶಗಳ ವಿವಿಧ ಕ್ಷೇತ್ರಗಳ ಪರಿಣಿತರು ಪಾಲ್ಗೊಂಡು ಚರ್ಚಿಸಲಿದ್ದಾರೆ.

ಭಾರತ ಮತ್ತು ಜರ್ಮನಿಯ ಕ್ರೀಡೆ, ಬಿಸಿನೆಸ್, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಕೊಡುಕೊಳ್ಳುವಿಕೆ ಇತ್ಯಾದಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಈ ಸಮಿಟ್​ನಲ್ಲಿ ಗಮನ ಹರಿಸಲಾಗುತ್ತದೆ. ಫುಟ್ಬಾಲ್​ನ ಪವರ್​ಹೌಸ್ ಆಗಿರುವ ಜರ್ಮನಿಯಿಂದ ಭಾರತದ ಫುಟ್ಬಾಲ್ ಕ್ಷೇತ್ರ ಹೇಗೆ ನೆರವು ಪಡೆದುಕೊಳ್ಳಬಹುದು ಎಂಬುದನ್ನೂ ಚರ್ಚಿಸಲಾಗುತ್ತದೆ.

ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಭಾರತದ ಹೊರಗೆ ಆಯೋಜನೆ ಆಗುತ್ತಿದೆ. ಇದರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡಿದ ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್, ಈ ಸಮಿಟ್ ಜರ್ಮನಿಯಲ್ಲಿ ಯಾಕೆ ಆಯೋಜಿಸಲಾಗುತ್ತಿದೆ ಎಂದು ಕಾರಣ ನೀಡಿದ್ದಾರೆ.

ಹಿಂದಿನ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಜರ್ಮನಿಯಿಂದ ಹೆಚ್ಚು ನಿಯೋಗ ಬಂದಿತ್ತು. ಭಾರತ ಮತ್ತು ಜರ್ಮನಿ ಮಧ್ಯೆ ಸಾಕಷ್ಟು ಪೈಪೋಟಿ ಇದೆ. ಜಿಡಿಪಿ ಅಂತರ ಕಡಿಮೆ ಇದೆ. ತಮಗೆ ವೈಯಕ್ತಿಕವಾಗಿಯೂ ಜರ್ಮನಿ ಎಂದರೆ ಇಷ್ಟ. ತಮಗೆ ಜರ್ಮನಿ ಎರಡನೇ ತವರಿನಂತಿದೆ ಎಂದು ಬರುಣ್ ದಾಸ್ ಹೇಳಿದ್ದಾರೆ.

ಸ್ಟುಟ್​ಗಾರ್ಟ್​ನಲ್ಲಿನ ಎಂಎಚ್​ಪಿ ಅರೆನಾ ಕ್ರೀಡಾಂಗಣದಲ್ಲಿ ನವೆಂಬರ್ 21ರಂದು ಸಂಜೆ 4ಗಂಟೆಗೆ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನ ಭಾಷಣ ಮಾಡಲಿದ್ದಾರೆ. ಸಾರ್ವಜನಿಕರೂ ಕೂಡ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಬಹುದು. ಸಂಪರ್ಕಿಸಬಹುದಾದ ಇಮೇಲ್ ವಿಳಾಸ: News9GlobalSummitGermany@TV9.com

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Mon, 11 November 24