ಮುಂಬೈ, ಮೇ 15: ಷೇರು ಬ್ರೋಕರ್ ಸಂಸ್ಥೆಯಾದ ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ನೇರ ಮಾತುಗಳಿಗೆ ಹೆಸರುವಾಸಿ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಇತ್ತೀಚೆಗೆ ಅವರು ತನಗೆ ಮಗು ಯಾಕೆ ಬೇಡ ಎನ್ನುವುದನ್ನು ಹೇಳಿ ಅಚ್ಚರಿ ಮೂಡಿಸಿದ್ದರು. ಈಗ ಬೆಂಗಳೂರಿನ ಬಗ್ಗೆ ಟಿಪಿಕಲ್ ಬೆಂಗಳೂರಿಗನಂತೆ ಕಾಮೆಂಟ್ ಮಾಡಿದ್ದಾರೆ. ನಿಖಿಲ್ ಕಾಮತ್ ಬೆಂಗಳೂರಿನಲ್ಲಿಯೇ ಇರುವುದು. ತಮ್ಮ ಪೋಡ್ಕ್ಯಾಸ್ಟ್ನಲ್ಲಿ (podcast) ಮಾತನಾಡುತ್ತಾ ಅವರು ಬೆಂಗಳೂರು ಯಾಕೆ ತನಗೆ ಇಷ್ಟ ಎಂದು ಹೇಳಿದ್ದಾರೆ. ಈ ಹಿಂದೆಯೂ ಅವರು ಸಿಲಿಕಾನ್ ಸಿಟಿ ಬಗ್ಗೆ ಅನೇಕ ಬಾರಿ ಪಾಸಿಟಿವ್ ಮಾತುಗಳನ್ನು ಹೇಳಿದ್ದಾರೆ. ಇತ್ತೀಚೆಗೆ ನಡೆಸಿದ ಪೋಡ್ಕ್ಯಾಸ್ಟ್ನಲ್ಲಿ ಅವರು ಬೆಂಗಳೂರಿನ ಕೆಟ್ಟ ಟ್ರಾಫಿಕ್ ನಡುವೆಯೂ ಇಷ್ಟವಾಗುವಂತಹದ್ದು ಏನಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಬೆಂಗಳೂರಿಗರು ಹೃದಯವಂತರು ಎಂದು ಹೊಗಳಿದ್ದಾರೆ.
ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ವಿಶೇಷ ಎನಿಸಿಲು ಅದರಲ್ಲಿರುವ ಜನರು ಕಾರಣ ಎನ್ನುತ್ತಾರೆ ನಿಖಿಲ್ ಕಾಮತ್. ‘ರಸ್ತೆ, ಟ್ರಾಫಿಕ್ ಇವೆಲ್ಲವನ್ನೂ ಬಿಟ್ಹಾಕಿ. ಇವ್ಯಾವುದೂ ದೊಡ್ಡ ವಿಷಯವೇ ಅಲ್ಲ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ವಿಶೇಷ ಎನಿಸುವುದು ಅದರ ಜನರಿಂದಾಗಿಯೇ. ಇಲ್ಲಿಯ ಜನರು ಬೆಂಗಳೂರನ್ನು ಬಹಳ ಪ್ರೀತಿಸುತ್ತಾರೆ. ಬಹಳ ಆತ್ಮೀಯತೆ ತೋರುವ ಜನರು ಇವರು,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎನ್ನುವುದು ಭ್ರಮೆ; ಮಗು ಸಾಕಲು 20 ವರ್ಷ ಯಾಕೆ ಹಾಳು ಮಾಡಲಿ? ನಿಖಿಲ್ ಕಾಮತ್ ತರ್ಕಗಳಿವು…
‘ಹೈದರಾಬಾದ್ ಬಿರಿಯಾನಿಗೆ ಫೇಮಸ್ ಆಗಿದೆ. ಬಾಂಬೆಯಲ್ಲಿ ನೋಡಲು ಚಂದ ಇರುವ ಜನರಿದ್ದಾರೆ. ದೆಹಲಿಯಲ್ಲಿ ಸಾಕಷ್ಟು ಹಣ ಇರುವ ಜನರು ಸಿಗುತ್ತಾರೆ. ಬೆಂಗಳೂರು ಬಹಳ ಒಳ್ಳೆಯ ಜನರಿಗೆ ಖ್ಯಾತವಾಗಿದೆ. ಇಲ್ಲಿನ ಜನರು ಬಹಳ ಸಹಜ ಸ್ವಭಾವದವರು, ಸಂಕೋಚದ ಸ್ವಭಾವದವರು, ಸೂಕ್ಷ್ಮತೆ ಉಳ್ಳವರು.
ಸ್ಟಾರ್ಟಪ್ಗಳಿಗೆ ಅಗತ್ಯವಾಗಿರುವ ಪರಿಣಿತ ಉದ್ಯೋಗಿಗಳು ಲಭ್ಯ ಇರುವುದರಲ್ಲಿ ವಿಶ್ವದ ಯಾವುದೇ ನಗರಕ್ಕಿಂತಲೂ ಬೆಂಗಳೂರು ಕಡಿಮೆ ಅಲ್ಲ. ‘ನೀವು ಏನಾದರೂ ನಿರ್ಮಿಸಬೇಕೆಂದರೆ ಅಥವಾ ಕಂಪನಿ ಆರಂಭಿಸಬೇಕೆಂದರೆ ಬೆಂಗಳೂರಿನಲ್ಲಿ ಪರಿಣಿತರು ಸುಲಭವಾಗಿ ಸಿಗುತ್ತಾರೆ. ಇಷ್ಟು ಕಡಿಮೆ ಬೆಲೆಗೆ ವಿಶ್ವದಲ್ಲಿ ಬೇರೆಲ್ಲೂ ನಿಮಗೆ ಸಿಗಲು ಸಾಧ್ಯವಿಲ್ಲ ಎನಿಸುತ್ತದೆ,’ ಎಂದು ನಿಖಿಲ್ ಕಾಮತ್ ಹೇಳುತ್ತಾರೆ.
ಇದನ್ನೂ ಓದಿ: ಒಂದೇ ರೈಲ್ವೆ ಟಿಕೆಟ್ ಹಲವು ಸೇವೆ; ಊಟ, ಚಿಕಿತ್ಸೆ, ವಿಶ್ರಾಂತಿ ಕೊಠಡಿ, ಡಾರ್ಮಿಟರಿ, ಲಾಕರ್ ರೂಂ ಸೌಲಭ್ಯ
ನಿಖಿಲ್ ಕಾಮತ್ ಅವರಿಗೆ ಮುಂದಿನ ತಲೆಮಾರಿಗೆ ಆಸ್ತಿ ಕೂಡಿಡಬೇಕೆನ್ನುವ ಜಾಯಮಾನದವರಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ತಾನು ಗಳಿಸಿದ ಸಂಪಾದನೆಯನ್ನು ಸಮಾಜದ ಅಭ್ಯುದಯಕ್ಕೆ ಹಾಕಬೇಕೆನ್ನುವವರ ಪೈಕಿಯವರು. ಬೆಂಗಳೂರಿನಲ್ಲಿ ಗಿಡ ನೆಡುವುದರಿಂದ ಹಿಡಿದು ವಿವಿಧ ಯೋಜನೆಗಳಲ್ಲಿ ನಿಖಿಲ್ ಕಾಮತ್ ತೊಡಗಿಸಿಕೊಳ್ಳುತ್ತುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ