ವಿಜ್ಞಾನ, ತಂತ್ರಜ್ಞಾನ, ಗಣಿತ, ಎಂಜಿನಿಯರಿಂಗ್ ಕ್ಷೇತ್ರಕ್ಕೆ ಬನ್ನಿ: ಹುಡುಗಿಯರಿಗೆ ಅಂಬಾನಿ ಮಗಳ ಕರೆ

Isha Ambani at 'Girls in Information and Communications Technology Day India 2024': ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಮತ್ತು ಮ್ಯಾಥ್ಸ್ ಕ್ಷೇತ್ರಗಳಿಗೆ ಹೆಚ್ಚೆಚ್ಚು ಹುಡುಗಿಯರು ಪ್ರವೇಶಿಸಬೇಕು ಎಂದು ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಕರೆ ನೀಡಿದ್ದಾರೆ. ಟೆಕ್ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಶೇ. 36ರಷ್ಟಿದೆ. ಆದರೆ, ಎಕ್ಸಿಕ್ಯೂಟಿವ್ ಮಟ್ಟದ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ಶೇ. 7 ಮಾತ್ರವೇ ಇರುವುದು ಎಂದು ರಿಲಾಯನ್ಸ್ ಇಂಡಸ್ಟ್ರೀಸ್​ನ ನಿರ್ದೇಶಕರಲ್ಲೊಬ್ಬರಾದ ಅವರು ವಾಸ್ತವ ಬಿಚ್ಚಿಟ್ಟಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ಗಣಿತ, ಎಂಜಿನಿಯರಿಂಗ್ ಕ್ಷೇತ್ರಕ್ಕೆ ಬನ್ನಿ: ಹುಡುಗಿಯರಿಗೆ ಅಂಬಾನಿ ಮಗಳ ಕರೆ
ಇಶಾ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 15, 2024 | 6:17 PM

ನವದೆಹಲಿ, ಮೇ 15: ಭಾರತ ಪ್ರಜ್ವಲಿಸಬೇಕಾದರೆ ಹೆಚ್ಚೆಚ್ಚು ಹುಡುಗಿಯರು ಸ್ಟೆಮ್ (STEM- ವಿಜ್ಞಾನ ತಂತ್ರಜ್ಞಾನ ಎಂಜಿನಿಯರಿಂಗ್, ಗಣಿತ) ವ್ಯಾಪ್ತಿಗೆ ಬರಬೇಕು. ತಂತ್ರಜ್ಞಾನ ವೃತ್ತಿ ಆಯ್ದುಕೊಳ್ಳಬೇಕು ಎಂದು ರಿಲಾಯನ್ಸ್ ಇಂಡಸ್ಟ್ರೀಸ್​ನ ನಿರ್ದೇಶಕಿ ಇಶಾ ಅಂಬಾನಿ (Isha Ambani) ಕರೆ ನೀಡಿದ್ದಾರೆ. ಗರ್ಲ್ಸ್ ಇನ್ ಇನ್ಫಾರ್ಮೇಶನ್ ಅಂಡ್ ಕಮ್ಯೂನಿಕೇಶನ್ಸ್ ಟೆಕ್ನಾಲಜಿ ಡೇ ಇಂಡಿಯಾ 2024 (Girls in ICT India) ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದ ಇಶಾ ಅಂಬಾನಿ, ‘ನಮ್ಮ ಕನಸಿನ ಭಾರತವನ್ನು ನಿರ್ಮಿಸಲು ಹೊರಡುವುದಾದರೆ ತಂತ್ರಜ್ಞಾನವು ನಮಗೆ ಶಕ್ತಿಯಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಪೂರ್ಣವಾಗಿ ಕ್ಷಮತೆ ತೋರಬೇಕು. ಭವಿಷ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲೇ ಹೆಚ್ಚಿನ ಉದ್ಯೋಗಸೃಷ್ಟಿ ಇರುತ್ತದೆ’ ಎಂದು ಕಿವಿ ಮಾತು ಹೇಳಿದ್ದಾರೆ.

ತಂತ್ರಜ್ಞಾನ ಉದ್ಯಮ ಸದಾ ಬದಲಾಗುತ್ತಿದ್ದರೂ ಉದ್ಯೋಗಿಗಳ ಪೈಕಿ ಮಹಿಳೆಯರ ಪ್ರಮಾಣ ಕಡಿಮೆಯೇ ಇದೆ. ಇದು ವಾಸ್ತವ. ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿರುವ ಅಂತರವು ಲಿಂಗ ತಾರತಮ್ಯತೆಯನ್ನು ಸೂಚಿಸುವುದಷ್ಟೇ ಅಲ್ಲ, ನಾವೀನ್ಯತೆಯ ಹಾದಿಗೆ ತಡೆಯೂ ಆಗಿದೆ. ಈ ಅಂತರವನ್ನು ಕಡಿಮೆ ಮಾಡುವುದು ಉದ್ಯಮಕ್ಕೆ ಮಾತ್ರವಲ್ಲ ಸಾಮಾಜಿಕ ಪ್ರಗತಿಊ ಅಗತ್ಯ ಎಂದು ಮುಕೇಶ್ ಅಂಬಾನಿ ಅವರ ಮಗಳೂ ಆದ ಇಶಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮುಂಬೈನವರು ನೋಡಲು ಚಂದ, ಆದರೆ ಬೆಂಗಳೂರಿಗರು…? ನಿಖಿಲ್ ಕಾಮತ್​ಗೆ ಸಿಲಿಕಾನ್ ಸಿಟಿ ಯಾಕೆ ಇಷ್ಟ ಗೊತ್ತಾ? ಝೀರೋಧ ಮುಖ್ಯಸ್ಥರ ನೇರ ಮಾತು

ಉನ್ನತ ಮಟ್ಟದ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ವಿರಳ

ದೂರ ಸಂಪರ್ಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಷಣ ಮಾಡಿದ ಇಶಾ ಅಂಬಾನಿ ಅವರು ಟೆಕ್ ಇಂಡಸ್ಟ್ರಿಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕಡಿಮೆ ಇದ್ದರೂ ಉನ್ನತ ಮಟ್ಟದಲ್ಲಿ ಸಂಖ್ಯೆ ಇನ್ನೂ ಕಡಿಮೆ ಇದೆ ಎನ್ನುವ ಸಂಗತಿಯನ್ನು ಎತ್ತಿ ತೋರಿಸಿದ್ದಾರೆ.

ಇಶಾ ಅಂಬಾನಿ ಮಾತನಾಡಿರುವ ವಿಡಿಯೋ

ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ. 36ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಸಿಇಒ, ಸಿಎಫ್​ಒ ಇತ್ಯಾದಿ ಎಕ್ಸಿಕ್ಯೂಟಿವ್ ಮಟ್ಟದ ಹುದ್ದೆಗಳಲ್ಲಿ ಶೇ. 7ರಷ್ಟು ಮಾತ್ರವೇ ಮಹಿಳೆಯರು ಇರುವುದು. ನಿರ್ದೇಶಕರ ಮಟ್ಟದ ಹುದ್ದೆಗಳಲ್ಲಿ ಶೇ. 13, ಮಧ್ಯಮ ಮಟ್ಟದ ಮ್ಯಾನೇಜರ್ ಹುದ್ದೆಗಳಲ್ಲಿ ಶೇ. 17ರಷ್ಟು ಮಾತ್ರವೇ ಮಹಿಳಾ ಉದ್ಯೋಗಿಗಳಿದ್ದಾರೆ ಎಂದು ನಾಸ್​ಕಾಮ್ ದತ್ತಾಂಶ ಉಲ್ಲೇಖಿಸಿ ಇಶಾ ಅಂಬಾನಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ದಾರೆ.

ಇದನ್ನೂ ಓದಿ: ಎಷ್ಟು ಅಂತ ಸಬ್ಸಿಡಿ ಕೊಡ್ತೀರಿ..! ಹಳೆಯ 28ಎನ್​ಎಂ ಚಿಪ್ ತಯಾರಿಸಿಕೊಂಡು ಏನ್ ಮಾಡ್ತೀರಿ?: ರಘುರಾಮ್ ರಾಜನ್

ನಾಯಕತ್ವ ವಿಚಾರದಲ್ಲಿ ಮತ್ತು ಪರಿವರ್ತನೆ ತರುವ ವಿಚಾರದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ. ಆದರೂ ಕೂಡ ಮಹಿಳೆಯೊಬ್ಬಳು ಉನ್ನತ ಸ್ಥಾನಕ್ಕೆ ಏರುವ ಹಾದಿ ಪುರುಷನದಕ್ಕಿಂತ ಕಠಿಣವಾಗಿರುತ್ತದೆ. ನಾಯಕರಾಗಿ ಪುರುಷರಿಗಿಂತ ಮಹಿಳೆಯರೇ ಒಂದು ಮಟ್ಟ ಮೇಲೆ ಇರುತ್ತಾರೆ ಎಂಬುದು ತನ್ನ ವೈಯಕ್ತಿಕ ಭಾವನೆ. ಮಹಿಳೆಯರಲ್ಲಿರುವ ಕರುಣೆಯ ಸ್ವಭಾವವು ಅವರನ್ನು ಉತ್ತಮ ನಾಯಕರನ್ನಾಗಿ ಮಾಡುತ್ತದೆ ಎಂದು ಇಶಾ ಅಂಬಾನಿ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Wed, 15 May 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ