ನವದೆಹಲಿ, ಸೆಪ್ಟೆಂಬರ್ 11: ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅಧ್ಯಕ್ಷ ಮಸಸುಗು ಅಸಾಕಾವ (Masasugu Asakawa) ಅವರು ನಿನ್ನೆ ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಜಿ20 ನಾಯಕರ ಶೃಂಗಸಭೆಗೆ ಅವರಿಬ್ಬರು ರಾಷ್ಟ್ರರಾಜಧಾನಿಗೆ ಆಗಮಿಸಿದ್ದರು. ಈ ವೇಳೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಜಿ20 ಸಭೆ (G20 Leaders Summit 2023) ಯಶಸ್ವಿಯಾಗಿ ನಡೆಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಎರಡು ಭೇಟಿಯ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದ ಎಕ್ಸ್ ಖಾತೆಯಲ್ಲಿ ವಿವರ ಪ್ರಕಟಿಸಲಾಗಿದೆ.
ಎಡಿಬಿ ಅಧ್ಯಕ್ಷ ಮಸಾಸುಗು ಅಸಾಕಾವ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಬ್ಬರೂ ಕೂಡ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆಯ ಪರಿಣಾಮಗಳು ಹಾಗೂ ಜಿ20 ಕಾರ್ಯಗಳಿಗೆ ಎಡಿಬಿ ಬ್ಯಾಂಕ್ನ ಕೊಡುಗೆ ಬಗ್ಗೆ ಮಾತನಾಡಿದರು. ಈ ವೇಳೆ, ಕೇಂದ್ರ ಸರ್ಕಾರದ ಪಿಎಂ ಗತಿಶಕ್ತಿ, ಗಿಫ್ಟ್ ಸಿಟಿ, ಗ್ರೀನ್ ಹೈಡ್ರೋಜನ್ ಹಬ್ ಇತ್ಯಾದಿ ಯೋಜನೆಗಳಿಗೆ ಧನಸಹಾಯದ ಭರವಸೆಯನ್ನು ನೀಡಿದರೆಂದು ಹೇಳಲಾಗಿದೆ.
ಇದನ್ನೂ ಓದಿ: ಭಾರತದ ಜಿ20 ನಾಯಕತ್ವದ ಎಫೆಕ್ಟ್; ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್ನಿಂದ ಹೊರಬಿದ್ದ ಇಟಲಿ
ಇನ್ನು, ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗಾ ಅವರು ಸಾಮಾಜಿಕ ಕಾರ್ಪೊರೇಟ್ ಜವಾಬ್ದಾರಿ (ಸಿಎಸ್ಆರ್) ಯೋಜನೆಗೆ ಮಾರುಕಟ್ಟೆ ಸ್ವರೂಪವನ್ನು ತಂದು ಆ ಮೂಲಕ ಸಾಮಾಜಿಕ ಪರಿಣಾಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಗಳ ಜೊತೆ ಸೇರಿ ಕೆಲಸ ಮಾಡಲು ಒಪ್ಪಿದ್ದಾರೆ.
Union Finance Minister Smt. @nsitharaman met Asian Development Bank President Mr. Masasugu Asakawa @ADBPresident , who is in India for the #G20 Leaders’ Summit, today in New Delhi.
Mr. Asakawa @ADBPresident congratulated India for successful organisation of #G20 Leaders’ Summit… pic.twitter.com/L0sGL8zOjT
— Ministry of Finance (@FinMinIndia) September 10, 2023
Union Finance Minister Smt. @nsitharaman met World Bank @WorldBank President Mr. Ajay Banga, who is in India for the #G20 Leaders’ Summit, today in New Delhi.
Mr. Ajay Banga congratulated the #G20India Presidency for a constructive and successful Presidency. The two leaders… pic.twitter.com/uSno9Ks8hV
— Ministry of Finance (@FinMinIndia) September 10, 2023
ಇನ್ನು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು (ಎಂಡಿಬಿ) ಬಲಪಡಿಸಲು ಸ್ವತಂತ್ರ ತಜ್ಞರ ಗುಂಪಿನ ಮೊದಲ ಸಂಚಿಕೆಯಲ್ಲಿ ತಿಳಿಸಲಾಗಿರುವ ಮೂರು ಅಜೆಂಡಾದ ಶಿಫಾರಸುಗಳನ್ನು ಅಜಯ್ ಬಾಂಗಾ ಅವರು ಪರಿಗಣಿಸಿ ಮುಂದುವರಿಸುತ್ತಾರೆಂದು ಈ ವೇಳೆ ನಿರ್ಮಲಾ ಸೀತಾರಾಮನ್ ನಿರೀಕ್ಷಿಸಿದ್ದಾರೆ.
ಇದನ್ನೂ ಓದಿ: G20 Summit Budget: ಜಿ-20 ಶೃಂಗಸಭೆಗೆ ವ್ಯಯಿಸಿದ ಹಣವೆಷ್ಟು? ಇಲ್ಲಿದೆ ಮಾಹಿತಿ
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಷದ ಜಿ20 ಶೃಂಗಸಭೆ ಹಲವು ವಿಚಾರಗಳಿಗೆ ಹೆಸರುಪಡೆದುಕೊಂಡಿದೆ. ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ಜಿ20 ನಾಯಕರ ಶೃಂಗಸಭೆ ನಡೆದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮುಂದಿನ ವರ್ಷದ ಜಿ20 ಸಭೆ ಬ್ರೆಜಿಲ್ ದೇಶದ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:56 am, Mon, 11 September 23