Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಭೂಮಿ ಮಾರಿದಾಗ ಸಿಗುವ ಹಣಕ್ಕೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ವಿವರ

Tax on Agricultural Land Sale: ನೆಲದ ಮಾಲಕತ್ವವನ್ನು ಕ್ಯಾಪಿಟಲ್ ಅಸೆಟ್ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಲಾಭ ತೆರಿಗೆ ಅಥವಾ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಆದರೆ, ಕೃಷಿಭೂಮಿಯಾದರೆ ತೆರಿಗೆ ಇರುತ್ತದಾ ಎಂಬುದು ಪ್ರಶ್ನೆ. ಗ್ರಾಮೀಣ ಭಾಗದ ಕೃಷಿಭೂಮಿಯ ಮಾರಾಟದಿಂದ ಸಿಗುವ ಹಣಕ್ಕೆ ಕ್ಯಾಪಿಟಲ್ ಗೇನ್ ತೆರಿಗೆ ಇರುವುದಿಲ್ಲ. ನಗರ ಭಾಗದ ಕೃಷಿಭೂಮಿಗೆ ಈ ತೆರಿಗೆ ಅನ್ವಯ ಆಗುತ್ತದೆ.

ಕೃಷಿ ಭೂಮಿ ಮಾರಿದಾಗ ಸಿಗುವ ಹಣಕ್ಕೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ವಿವರ
ಕೃಷಿಭೂಮಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 11, 2023 | 1:06 PM

ಊರಿನಲ್ಲಿರುವ ನಿಮ್ಮ ಕೃಷಿ ಜಮೀನನ್ನು (Agricultural land) ಮಾರುತ್ತಿದ್ದೀರಾ? ಅದಕ್ಕೆ ಮುನ್ನ ಈ ವರದಿ ಓದಿ. ಒಂದು ಸ್ಥಿರಾಸ್ತಿಯನ್ನು ಮಾರಿದಾಗ ಅದಕ್ಕೆ ತೆರಿಗೆ ಅನ್ವಯ ಆಗುತ್ತದೆ ಎಂಬುದು ಗೊತ್ತಿರುವ ವಿಚಾರ. ಸ್ಥಿರಾಸ್ತಿಗಳಿಗೆ ಸಾಮಾನ್ಯವಾಗಿ ಲಾಭ ತೆರಿಗೆ ಅಥವಾ ಕ್ಯಾಪಿಟಲ್ ಗೈನ್ ಟ್ಯಾಕ್ಸ್ (Capital Gain Tax) ಇರುತ್ತದೆ. ಆದರೆ, ಕೃಷಿ ಜಮೀನಿಗೂ ಇದು ಅನ್ವಯ ಆಗುತ್ತದಾ ಎಂಬ ಗೊಂದಲ ಹಲವರಲ್ಲಿದೆ. ಕೃಷಿ ಭೂಮಿ ಎಲ್ಲಿದೆ, ಯಾವ ಉದ್ದೇಶಕ್ಕೆ ಮಾರಲಾಗುತ್ತಿದೆ ಎಂಬುದರ ಮೇಲೆ ತೆರಿಗೆ ಅನ್ವಯ ಆಗುತ್ತದಾ ಇಲ್ಲವಾ ಎಂಬುದು ನಿರ್ಧಾರ ಆಗುತ್ತದೆ.

ಮನೆ, ಕಾರು, ಷೇರು, ಬಾಂಡ್ ಇತ್ಯಾದಿಗಳಂತೆ ಸ್ಥಿರಾಸ್ತಿಯನ್ನೂ ಕ್ಯಾಪಿಟಲ್ ಅಸೆಟ್ (Capital Asset) ಎಂದು ಪರಿಗಣಿಸಲಾಗುತ್ತದೆ. ಒಂದು ಸ್ಥಿರಾಸ್ತಿ ಮಾರಿದಾಗ ಸಿಗುವ ಲಾಭದ ಪ್ರಮಾಣದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇರುತ್ತದೆ. ಹಾಗೆಯೇ, ನೀವು ಆ ಆಸ್ತಿ ಪಡೆದು ಎಷ್ಟು ವರ್ಷಕ್ಕೆ ಅದನ್ನು ಮಾರುತ್ತಿದ್ದೀರಿ ಎಂಬುದರ ಮೇಲೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅಥವಾ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ.

ಇದನ್ನೂ ಓದಿ: Sovereign Gold Bond: ಎರಡನೇ ಸರಣಿಯ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಇಂದಿನಿಂದ 5 ದಿನ

ಇನ್ನು, ಕೃಷಿ ಜಮೀನಿನ ವಿಚಾರಕ್ಕೆ ಬರುವುದಾದರೆ, ಭಾರತದಲ್ಲಿ ಗ್ರಾಮೀಣ ಭಾಗದಲ್ಲಿರುವ ಕೃಷಿ ಜಮೀನಿನ ಆಸ್ತಿಯನ್ನು ಕ್ಯಾಪಿಟಲ್ ಅಸೆಟ್ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಈ ಆಸ್ತಿ ಮಾರಿದಾಗ ಲಭ ತೆರಿಗೆ ಅನ್ವಯ ಆಗುವುದಿಲ್ಲ.

ನಗರದ ಕೃಷಿ ಜಮೀನಿನ ಮಾರಾಟಕ್ಕೆ ತೆರಿಗೆ ಇರುತ್ತದೆ

ಭಾರತದಲ್ಲಿ ಕೃಷಿ ಭೂಮಿ ಎಲ್ಲಿದೆ ಎನ್ನುವುದರ ಮೇಲೆ ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ನಗರಸಭೆ, ಪುರಸಭೆ ಇತ್ಯಾದಿ ವ್ಯಾಪ್ತಿಗೆ ಬರದ ಪ್ರದೇಶದಲ್ಲಿರುವ ಜಮೀನನ್ನು ಗ್ರಾಮೀನ ಕೃಷಿ ಜಮೀನು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಪ್ಯಾರಿಸ್ ಒಪ್ಪಂದದ ಹವಾಮಾನ ಗುರಿ ಈಡೇರಿಸಲು ಅಭಿವೃದ್ಧಿಶೀಲ ದೇಶಗಳಿಗೆ ಬೇಕು 5.9 ಟ್ರಿಲಿಯನ್ ಡಾಲರ್: ಜಿ20 ಸಭೆ ಅನಿಸಿಕೆ

10,000 ಜನಸಂಖ್ಯೆಗಿಂತ ಹೆಚ್ಚಿರುವ ಮುನ್ಸಿಪಾಲಿಟಿಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿನ ಕೃಷಿಭೂಮಿಯನ್ನು ನಗರ ಕೃಷಿಜಮೀನು ಎಂದು ಪರಿಗಣಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ