ಮ್ಯುಚುವಲ್ ಫಂಡ್ನಲ್ಲಿ ನಿಮ್ಮ ಹಣ ಎಲ್ಲೆಲ್ಲಿ ಹೂಡಿಕೆಯಾಗಬೇಕು ಎಂದು ನಿರ್ಧರಿಸುವವರು ಯಾರು? ಇದರ ನಿರ್ವಹಣೆ ಹೇಗೆ? ಇಲ್ಲಿದೆ ಡೀಟೇಲ್ಸ್
Mutual Fund Managers: ಭಾರತದಲ್ಲಿ ಹೂಡಿಕೆದಾರರ ಲಕ್ಷಾಂತರ ಕೋಟಿ ರೂ ಹಣ ಮ್ಯೂಚುವಲ್ ಫಂಡ್ಗಳಲ್ಲಿ ಇವೆ. ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು ವಿವಿಧ ಮ್ಯುಚುವಲ್ ಫಂಡ್ಗಳನ್ನು ರೂಪಿಸುತ್ತವೆ. ಈ ಫಂಡ್ಗಳಲ್ಲಿನ ಹೂಡಿಕೆಯನ್ನು ನಿರ್ವಹಿಸಲು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು ಫಂಡ್ ಮ್ಯಾನೇಜರುಗಳನ್ನು ನೇಮಿಸಿಕೊಳ್ಳುತ್ತವೆ. ಕ್ಷೇತ್ರದಲ್ಲಿ ಪರಿಣಿತರಾಗಿರುವ ಈ ಮ್ಯಾನೇಜರುಗಳು ಸಾಕಷ್ಟು ಮಾರುಕಟ್ಟೆ ಅಧ್ಯಯನಗಳನ್ನು ನಡೆಸಿ ಯಾವ ಕಂಪನಿ ಉತ್ತಮವಾಗಿ ಬೆಳೆಯಬಲ್ಲುದು ಎಂದು ಅಂದಾಜು ಮಾಡುತ್ತಾರೆ.
ಸದ್ಯ ಅತ್ಯಂತ ಜನಪ್ರಿಯವಾಗಿರುವ ಹೂಡಿಕೆ ಯೋಜನೆಗಳಲ್ಲಿ (Investments) ಮ್ಯೂಚುವಲ್ ಫಂಡ್ ಒಂದು. ಭಾರತದಲ್ಲಿ ನೂರಾರು ಮ್ಯೂಚುವಲ್ ಫಂಡ್ಗಳು (Mutual Fund) ಕಾರ್ಯನಿರತವಾಗಿವೆ. ಇಲ್ಲೆಲ್ಲಾ ಹೂಡಿಕೆದಾರರ ಲಕ್ಷಾಂತರ ಕೋಟಿ ರೂ ಹಣ ನಿರ್ವಹಣೆ ಆಗುತ್ತಿದೆ. ಮ್ಯೂಚುವಲ್ ಫಂಡ್ಗಳಲ್ಲಿ ನೀವು ಹೂಡಿಕೆ ಮಾಡುವ ಹಣವು ವಿವಿಧ ಷೇರುಗಳಲ್ಲಿ, ಬಾಂಡ್ ಮತ್ತಿತರ ವೈವಿಧ್ಯ ಸೆಕ್ಯೂರಿಟಿ ಮಾರುಕಟ್ಟೆಗಳಲ್ಲಿ ತೊಡಗುತ್ತದೆ. ಅಂದರೆ, ಮ್ಯೂಚುವಲ್ ಫಂಡ್ ಸಂಸ್ಥೆ ನಿಮ್ಮ ಹಣವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡುತ್ತದೆ. ಅದರಿಂದ ಬರುವ ಲಾಭವನ್ನು ನಿಮಗೆ ವರ್ಗಾಯಿಸುತ್ತದೆ. ಮ್ಯೂಚುವಲ್ ಫಂಡ್ ಸಂಸ್ಥೆಗೆ ಕಮಿಷನ್ ಮೂಲಕ ಸಿಗುವ ಹಣವೇ ಆದಾಯ ಮೂಲ.
ಮ್ಯುಚುವಲ್ ಫಂಡ್ಗಳನ್ನು ಹೇಗೆ ನಿರ್ವಹಿಸಲಾಗುತ್ತದೆ?
ಮ್ಯುಚುವಲ್ ಫಂಡ್ನಲ್ಲಿರುವ ಹೂಡಿಕೆಯನ್ನು ನಿರ್ವಹಿಸುವುದು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು (AMC- Asset Management Company). ಈ ಕಂಪನಿಗಳು ಸೆಬಿಯಿಂದ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತವೆ. ಹೂಡಿಕೆದಾರರ ಪರವಾಗಿ ಈ ಎಎಂಸಿಗಳು ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಎಂದು ನಿರ್ಧರಿಸುತ್ತವೆ. ಈ ಫಂಡ್ ನಿರ್ವಹಣೆಗೆ ಶುಲ್ಕ ಇರುತ್ತದೆ.
ಮ್ಯೂಚುವಲ್ ಫಂಡ್ಗಳಲ್ಲಿ ಬೇರೆ ಬೇರೆ ರೀತಿಯದ್ದಿರುತ್ತದೆ. ವಿಶೇಷವಾಗಿ ವರ್ಗೀಕರಣ ಕೂಡ ಮಾಡಲಾಗಿರುತ್ತದೆ. ಈಕ್ವಿಟಿ, ಡೆಟ್, ಹೈಬ್ರಿಡ್ ಪ್ರಾಕಾರದ ಮ್ಯೂಚುವಲ್ ಫಂಡ್ಗಳಿರುತ್ತವೆ. ಈಕ್ವಿಟಿ ಮ್ಯೂಚುವಲ್ ಫಂಡ್ಗಳು ತಮ್ಮಲ್ಲಿರುವ ಹೂಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಷೇರುಗಳ ಮೇಲೆ ಹಾಕಿರುತ್ತವೆ. ಹಾಗೆಯೇ, ಥಿಮ್ಯಾಟಿಕ್ ಫಂಡ್ಗಳೂ ಇರುತ್ತವೆ. ಉದಾಹರಣೆಗೆ, ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿರುವ ಸಂಸ್ಥೆಗಳ ಷೇರುಗಳ ಮೇಲೆ ಹಣ ತೊಡಗಿಸುವ ಮ್ಯುಚುವಲ್ ಫಂಡ್ಗಳು ಇರುತ್ತವೆ. ಮರುಬಳಕೆ ಇಂಧನ ಉತ್ಪಾದಿಸುವ ಕಂಪನಿಗಳ ಷೇರುಗಳ ಮೇಲೆ ಹಣ ಹಾಕುವ ಫಂಡ್ಗಳಿರುತ್ತವೆ.
ಇದನ್ನೂ ಓದಿ: ಸರ್ಕಾರಿ ನೌಕರರು ಷೇರು ವಹಿವಾಟು ನಡೆಸಬಹುದೇ? ನಿಯಮಗಳು ಏನು ಹೇಳುತ್ತವೆ?
ಮ್ಯೂಚುವಲ್ ಫಂಡ್ಗಳನ್ನು ಯಾರು ನಿರ್ವಹಿಸುತ್ತಾರೆ?
ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳಲ್ಲಿ ಹೂಡಿಕೆ ಹಣವನ್ನು ನಿರ್ವಹಿಸಲು ಫಂಡ್ ಮ್ಯಾನೇಜರುಗಳನ್ನು ನೇಮಿಸಲಾಗಿರುತ್ತದೆ. ಒಂದು ಕಂಪನಿಯಲ್ಲಿ ಈ ರೀತಿ ಮ್ಯಾನೇಜರುಗಳ ಒಂದು ತಂಡವೇ ಇರುತ್ತದೆ. ಈ ಕಂಪನಿಯ ವಿವಿಧ ಮ್ಯೂಚುವಲ್ ಫಂಡ್ಗಳನ್ನು ಇವರು ನಿರ್ವಹಿಸುತ್ತಾರೆ. ಇವರೆಲ್ಲಾ ಪಕ್ಕಾ ವೃತ್ತಿಪರರಾಗಿದ್ದು, ಎಲ್ಲಾ ಕಂಪನಿಗಳ ಬಗ್ಗೆ ಸಂಶೋಧನೆ ಕೈಗೊಳ್ಳುವುದು, ಮಾರುಕಟ್ಟೆಯ ಪರಸ್ಥಿತಿ ಇತ್ಯಾದಿ ಎಲ್ಲವನ್ನೂ ಅವಲೋಕಿಸುತ್ತಾರೆ. ಉತ್ತಮವಾಗಿ ಬೆಳೆಯಬಲ್ಲ ಕಂಪನಿಗಳನ್ನು ಗುರುತಿಸಿ ಅದರ ಷೇರುಗಳ ಮೇಲೆ ಹಣ ಹೂಡಿಕೆ ಮಾಡಲು ನಿರ್ಧರಿಸುತ್ತಾರೆ.
ಮ್ಯೂಚುವಲ್ ಫಂಡ್ನಲ್ಲಿ ಹಣ ಹಾಕುವವರು ಅದರ ಫಂಡ್ ಮ್ಯಾನೇಜರುಗಳ ಬಗ್ಗೆ ಸಂಶೋಧನೆ ನಡೆಸುವುದು ಉತ್ತಮ. ಫಂಡ್ ಮ್ಯಾನೇಜರ್ ನಿರ್ವಹಿಸಿದ ವಿವಿಧ ಮ್ಯೂಚುವಲ್ ಫಂಡ್ಗಳು ವರ್ಷಂಪ್ರತಿ ಎಷ್ಟು ರಿಟರ್ನ್ ನೀಡಿವೆ ಎಂಬುದನ್ನು ಅವಲೋಕಿಸಿ ಆ ನಂತರ ನಿರ್ಧಾರ ತೆಗೆದುಕೊಳ್ಳುವುದು ಸಮಂಜಸ.
ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ
ಆದರೂ ಕೂಡ ಕೆಲ ವರ್ಷ ಚೆನ್ನಾಗಿ ಲಾಭ ಮಾಡಿದ ಮ್ಯೂಚುವಲ್ ಫಂಡ್ಗಳು ಮುಂದಿನ ವರ್ಷವೂ ಲಾಭ ತರುತ್ತದೆ ಎಂದು ಖಾತ್ರಿಯಿಂದ ಹೇಳಲು ಸಾಧ್ಯವಿಲ್ಲ. ಷೇರುಮಾರುಕಟ್ಟೆಯಲ್ಲಿ ಇರುವಂತೆ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲೂ ರಿಸ್ಕ್ ಇರುತ್ತದೆ. ದೀರ್ಘಾವಧಿಯ ಹೂಡಿಕೆಯಾಗಿದ್ದರೆ ತುಸು ಉತ್ತಮ ಎನಿಸುವ ಮಟ್ಟದಲ್ಲಿ ಲಾಭ ನಿರೀಕ್ಷಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ