Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ವಿಶ್ವಬ್ಯಾಂಕ್, ಎಡಿಬಿ ಮುಖ್ಯಸ್ಥರು

Union Finance Minister Nirmala Sitharaman: ನವದೆಹಲಿಯಲ್ಲಿ ನಡೆದ ಜಿ20 ನಾಯಕರ ಶೃಂಗಸಭೆಯ ಬಳಿಕ ವಿಶ್ವ ಬ್ಯಾಂಕ್ ಮುಖ್ಯಸ್ಥ ಅಜಯ್ ಬಾಂಗ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮುಖ್ಯಸ್ಥ ಮಸಸುಗು ಅಸಾಕಾವ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಈ ವೇಳೆ ಭಾರತದ ಅಭಿವೃದ್ಧಿ ಕಾರ್ಯಗಳಲ್ಲಿ ಈ ಎರಡು ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆಗಳ ಪಾತ್ರದ ಬಗ್ಗೆ ಮಾತನಾಡಲಾಗಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ವಿಶ್ವಬ್ಯಾಂಕ್, ಎಡಿಬಿ ಮುಖ್ಯಸ್ಥರು
ನಿರ್ಮಲಾ ಸೀತಾರಾಮನ್, ಅಜಯ್ ಬಾಂಗ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 11, 2023 | 11:57 AM

ನವದೆಹಲಿ, ಸೆಪ್ಟೆಂಬರ್ 11: ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅಧ್ಯಕ್ಷ ಮಸಸುಗು ಅಸಾಕಾವ (Masasugu Asakawa) ಅವರು ನಿನ್ನೆ ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಜಿ20 ನಾಯಕರ ಶೃಂಗಸಭೆಗೆ ಅವರಿಬ್ಬರು ರಾಷ್ಟ್ರರಾಜಧಾನಿಗೆ ಆಗಮಿಸಿದ್ದರು. ಈ ವೇಳೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಜಿ20 ಸಭೆ (G20 Leaders Summit 2023) ಯಶಸ್ವಿಯಾಗಿ ನಡೆಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಎರಡು ಭೇಟಿಯ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದ ಎಕ್ಸ್ ಖಾತೆಯಲ್ಲಿ ವಿವರ ಪ್ರಕಟಿಸಲಾಗಿದೆ.

ಎಡಿಬಿ ಅಧ್ಯಕ್ಷ ಮಸಾಸುಗು ಅಸಾಕಾವ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಬ್ಬರೂ ಕೂಡ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆಯ ಪರಿಣಾಮಗಳು ಹಾಗೂ ಜಿ20 ಕಾರ್ಯಗಳಿಗೆ ಎಡಿಬಿ ಬ್ಯಾಂಕ್​ನ ಕೊಡುಗೆ ಬಗ್ಗೆ ಮಾತನಾಡಿದರು. ಈ ವೇಳೆ, ಕೇಂದ್ರ ಸರ್ಕಾರದ ಪಿಎಂ ಗತಿಶಕ್ತಿ, ಗಿಫ್ಟ್ ಸಿಟಿ, ಗ್ರೀನ್ ಹೈಡ್ರೋಜನ್ ಹಬ್ ಇತ್ಯಾದಿ ಯೋಜನೆಗಳಿಗೆ ಧನಸಹಾಯದ ಭರವಸೆಯನ್ನು ನೀಡಿದರೆಂದು ಹೇಳಲಾಗಿದೆ.

ಇದನ್ನೂ ಓದಿ: ಭಾರತದ ಜಿ20 ನಾಯಕತ್ವದ ಎಫೆಕ್ಟ್; ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್​ನಿಂದ ಹೊರಬಿದ್ದ ಇಟಲಿ

ಇನ್ನು, ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗಾ ಅವರು ಸಾಮಾಜಿಕ ಕಾರ್ಪೊರೇಟ್ ಜವಾಬ್ದಾರಿ (ಸಿಎಸ್​ಆರ್) ಯೋಜನೆಗೆ ಮಾರುಕಟ್ಟೆ ಸ್ವರೂಪವನ್ನು ತಂದು ಆ ಮೂಲಕ ಸಾಮಾಜಿಕ ಪರಿಣಾಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಗಳ ಜೊತೆ ಸೇರಿ ಕೆಲಸ ಮಾಡಲು ಒಪ್ಪಿದ್ದಾರೆ.

ಇನ್ನು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು (ಎಂಡಿಬಿ) ಬಲಪಡಿಸಲು ಸ್ವತಂತ್ರ ತಜ್ಞರ ಗುಂಪಿನ ಮೊದಲ ಸಂಚಿಕೆಯಲ್ಲಿ ತಿಳಿಸಲಾಗಿರುವ ಮೂರು ಅಜೆಂಡಾದ ಶಿಫಾರಸುಗಳನ್ನು ಅಜಯ್ ಬಾಂಗಾ ಅವರು ಪರಿಗಣಿಸಿ ಮುಂದುವರಿಸುತ್ತಾರೆಂದು ಈ ವೇಳೆ ನಿರ್ಮಲಾ ಸೀತಾರಾಮನ್ ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: G20 Summit Budget: ಜಿ-20 ಶೃಂಗಸಭೆಗೆ ವ್ಯಯಿಸಿದ ಹಣವೆಷ್ಟು? ಇಲ್ಲಿದೆ ಮಾಹಿತಿ

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಷದ ಜಿ20 ಶೃಂಗಸಭೆ ಹಲವು ವಿಚಾರಗಳಿಗೆ ಹೆಸರುಪಡೆದುಕೊಂಡಿದೆ. ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ಜಿ20 ನಾಯಕರ ಶೃಂಗಸಭೆ ನಡೆದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮುಂದಿನ ವರ್ಷದ ಜಿ20 ಸಭೆ ಬ್ರೆಜಿಲ್ ದೇಶದ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:56 am, Mon, 11 September 23

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ