ಪತ್ನಿ ಕೈಗೆ ದೊಡ್ಡ ಬಿಸಿನೆಸ್ ಇತ್ತ ಮುಕೇಶ್ ಅಂಬಾನಿ; 70,000 ಕೋಟಿ ರೂ ಸಂಸ್ಥೆಯ ಒಡತಿ ನೀತಾ ಅಂಬಾನಿ ಅಡಿಯಲ್ಲಿ ಮೂವರು ಸಿಇಒಗಳು

|

Updated on: Nov 18, 2024 | 12:03 PM

Viacom18 Disney Star India post merger scenerio: ವಯಾಕಾಮ್18 ಮತ್ತು ಡಿಸ್ನಿ ಸ್ಟಾರ್ ಇಂಡಿಯಾದ ವಿಲೀನದಿಂದ ಹುಟ್ಟಿರುವ ಹೊಸ ಕಂಪನಿಗೆ ನೀತಾ ಅಂಬಾನಿ ಮುಖ್ಯಸ್ಥೆಯಾಗಿದ್ದಾರೆ. ಎಂಟರ್ಟೈನ್ಮೆಂಟ್, ಡಿಜಿಟಲ್ ಮತ್ತು ಸ್ಪೋರ್ಟ್ಸ್ ಈ ಮೂರು ವಿಭಾಗಗಳಿಗೆ ಪ್ರತ್ಯೇಕ ಮೂವರು ಸಿಇಒಗಳಿದ್ದಾರೆ. ಮೊದಲ ಬಾರಿಗೆ ಬುಸಿನೆಸ್ ಅಗ್ನಿಪರೀಕ್ಷೆ ಎದುರಿಸುತ್ತಿರುವ ನೀತಾ ಮುಂದಿರುವ ಸವಾಲುಗಳೇನು, ಎನ್ನುವ ವಿವರ ಇಲ್ಲಿದೆ...

ಪತ್ನಿ ಕೈಗೆ ದೊಡ್ಡ ಬಿಸಿನೆಸ್ ಇತ್ತ ಮುಕೇಶ್ ಅಂಬಾನಿ; 70,000 ಕೋಟಿ ರೂ ಸಂಸ್ಥೆಯ ಒಡತಿ ನೀತಾ ಅಂಬಾನಿ ಅಡಿಯಲ್ಲಿ ಮೂವರು ಸಿಇಒಗಳು
ನೀತಾ ಅಂಬಾನಿ
Follow us on

ಮುಂಬೈ, ನವೆಂಬರ್ 18: ವಯಾಕಾಂ18 ಮತ್ತು ಡಿಸ್ನಿ ಸ್ಟಾರ್ ಇಂಡಿಯಾ ಸಂಸ್ಥೆಗಳು ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. ರಿಲಾಯನ್ಸ್ ಗ್ರೂಪ್​ಗೆ ಸೇರುವ ಈ ಹೊಸ ಕಂಪನಿ 70,000 ಕೋಟಿ ರೂನಷ್ಟು ಬೃಹತ್ ಗಾತ್ರದ್ದಾಗಿದೆ. ಈ ದೈತ್ಯ ಕಂಪನಿಯ ಚುಕ್ಕಾಣಿಯನ್ನು ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅವರ ಸುಪರ್ದಿಗೆ ಒಪ್ಪಿಸಿದ್ದಾರೆ. ರಿಲಾಯನ್ಸ್ ಫೌಂಡೇಶನ್ ಮುಖ್ಯಸ್ಥೆಯಾಗಿ ಸಮಾಜಮುಖಿ ಕೈಂಕರ್ಯಗಳನ್ನು ಮಾಡಿ ಪಳಗಿರುವ ನೀತಾ ಅಂಬಾನಿ ಅವರು ಈಗ ನಿಜವಾದ ಬುಸಿನೆಸ್ ಅಖಾಡಕ್ಕೆ ಇಳಿದಿದ್ದಾರೆ.

ವಯಾಕಾಮ್18 ಮತ್ತು ಡಿಸ್ನಿ ಸ್ಟಾರ್ ಇಂಡಿಯಾ ವಿಲೀನದ ನಂತರದ ಕಂಪನಿಯಲ್ಲಿ ರಿಲಾಯನ್ಸ್ ಷೇರುಪಾಲು ಶೇ. 65.16ರಷ್ಟಿರುತ್ತದೆ. ಉಳಿದ ಶೇ. 36.84ರಷ್ಟು ಪಾಲು ಡಿಸ್ನಿ ಸಂಸ್ಥೆಯ ಬಳಿ ಇರಲಿದೆ. ಎರಡು ಒಟಿಟಿ ಪ್ಲಾಟ್​ಫಾರ್ಮ್​ಗಳು, 120 ಚಾನಲ್​ಗಳು ಹಾಗೂ 75 ಕೋಟಿ ವೀಕ್ಷಕರ ಬಳಗವನ್ನು ಹೊಂದಲಿರುವ ಹೊಸ ಸಂಸ್ಥೆಯ ವಾರ್ಷಿಕ ಆದಾಯ ಬರೋಬ್ಬರಿ 26,000 ಕೋಟಿ ರೂ ಇರಬಹುದು ಎನ್ನುವ ಅಂದಾಜಿದೆ.

ಇದನ್ನೂ ಓದಿ: ಹೂಡಿಕೆದಾರರಿಗೆ ಅಮೆರಿಕ ಬಿಟ್ಟರೆ ಭಾರತವೇ ಮೊದಲ ಆದ್ಯತೆ: ಸಿಟಿ ಗ್ರೂಪ್ ವೈಸ್ ಛೇರ್ಮನ್ ವಿಶ್ವಾಸ್ ರಾಘವನ್

ಮೂವರು ಸಿಇಒಗಳು ನೀತಾಗೆ ರಿಪೋರ್ಟಿಂಗ್…

ನೀತಾ ಅಂಬಾನಿ ತಮ್ಮ ಜೀವಮಾನದಲ್ಲಿ ಮೊದಲ ಬಾರಿಗೆ ನಿಜವಾದ ಬಿಸಿನೆಸ್ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ಐಪಿಎಲ್ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ಅನ್ನು ಸಮರ್ಥವಾಗಿ ನಿಭಾಯಿಸಿದ ಅವರು ಈಗ ದೊಡ್ಡ ಮೀಡಿಯಾ ಸಾಮ್ರಾಜ್ಯವನ್ನು ನಿರ್ವಹಿಸುವ ಪರೀಕ್ಷೆ ಎದುರಿಸುತ್ತಿದ್ದಾರೆ. ಎಂಟರ್ಟೈನ್ಮೆಂಟ್ ಕ್ಷೇತ್ರದ ದಿಗ್ಗಜರೆನಿರುವ ಸೋನಿ, ನೆಟ್​ಫ್ಲಿಕ್ಸ್, ಅಮೇಜಾನ್ ಮೊದಲಾದ ಸಂಸ್ಥೆಗಳ ಪೈಪೋಟಿಯನ್ನು ಎದುರಿಸುವುದು ಬಹುದೊಡ್ಡ ಸವಾಲಾಗಿರುತ್ತದೆ.

ಇದನ್ನೂ ಓದಿ: ಕಾಣದೇ ಮಾಯವಾಗಿದ್ದ ಡಬ್ಬಾ ಟ್ರೇಡಿಂಗ್ ಮತ್ತೆ ಚಾಲ್ತಿಗೆ; ದಿನಕ್ಕೆ 100 ಲಕ್ಷಕೋಟಿ ರೂ ವಹಿವಾಟು; ಏನಿದು ಡಬ್ಬಾ? ಇಲ್ಲಿದೆ ಮಾಹಿತಿ

ನೀತಾ ಅಂಬಾನಿ ಅವರ ಅಡಿಯಲ್ಲಿ ಮೂವರು ಸಿಇಒಗಳಿರುತ್ತಾರೆ. ಎಂಟರ್ಟೈನ್ಮೆಂಟ್ ವಿಭಾಗದ ಸಿಇಒ ಕೆವಿನ್ ವಾಜ್ ಇದ್ದಾರೆ. ಡಿಜಿಟಲ್ ವಿಭಾಗದ ಸಿಇಒ ಕಿರಣ್ ಮಣಿ ಇದ್ದಾರೆ. ಇನ್ನು ಸಂಜೋಗ್ ಗುಪ್ತಾ ಅವರು ಕ್ರೀಡಾ ವಿಭಾಗದ ಸಿಇಒ ಆಗಿರುತ್ತಾರೆ. ಈ ಮೂವರು ಸಿಇಒಗಳು ನೀತಾಗೆ ರಿಪೋರ್ಟಿಂಗ್ ಮಾಡುತ್ತಾರೆ. ನೀತಾಗೆ ಬಲ ನೀಡುವ ಮತ್ತೊಬ್ಬರೆಂದರೆ ಉದಯ್ ಶಂಕರ್. ಇವರು ಹೊಸ ವೈಸ್ ಛೇರ್ಮನ್ ಆಗಿ ನೀತಾಗೆ ಸಪೋರ್ಟ್ ಮಾಡಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ