AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಗುಂಪಲ್ಲಿ ಭಾರತವೇ ಸೂಪರ್​ಸ್ಟಾರ್; 2024ರ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಂ. 1

Indian economic growth story: ವಿಶ್ವದ ಬಹುಪಾಲು ಆರ್ಥಿಕತೆ ನೆಲೆಗೊಂಡಿರುವ ಜಿ20 ದೇಶಗಳದು ವಿಶ್ವದ ಪ್ರಮುಖ ಗುಂಪು. ಅಮೆರಿಕ, ಚೀನಾ, ಜರ್ಮನಿ, ಬ್ರಿಟನ್ ಇತ್ಯಾದಿ ಪ್ರಮುಖ ರಾಷ್ಟ್ರಗಳಿವೆ. ಈ ಮಹತ್ವದ ಟಾಪ್ 20 ದೇಶಗಳಲ್ಲಿ ಅತಿಹೆಚ್ಚು ಜಿಡಿಪಿ ಬೆಳವಣಿಗೆ ದರ ಹೊಂದಿರುವುದು ಭಾರತವೇ. ಭಾರತ ನಂತರದ ಸ್ಥಾನ ಇಂಡೋನೇಷ್ಯಾ, ಚೀನಾ ಮತ್ತು ರಷ್ಯಾದ್ದು.

ಜಿ20 ಗುಂಪಲ್ಲಿ ಭಾರತವೇ ಸೂಪರ್​ಸ್ಟಾರ್; 2024ರ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಂ. 1
ಜಿಡಿಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 18, 2024 | 3:21 PM

Share

ನವದೆಹಲಿ, ನವೆಂಬರ್ 18: ಜಾಗತಿಕವಾಗಿ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಕಳೆದ ಕೆಲ ವರ್ಷಗಳಿಂದ ಅತಿವೇಗದ ಜಿಡಿಪಿ ಬೆಳವಣಿಗೆ ಕಾಣುತ್ತಿದೆ. ಇದು 2024ರಲ್ಲೂ ಮುಂದುವರಿಯಲಿದೆ. ಈ ಕ್ಯಾಲಂಡರ್ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎನ್ನುವ ಅಂದಾಜು ಇದೆ. ಇದು ತೀರಾ ಹೆಚ್ಚಿನ ಮಟ್ಟದ ದರ ಅಲ್ಲದಿದ್ದರೂ ಪ್ರಮುಖ ಆರ್ಥಿಕತೆಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳ ಗುಂಪಾಗಿರುವ ಜಿ20ಯಲ್ಲಿ ಭಾರತ ಸೂಪರ್ ಸ್ಟಾರ್ ಎನಿಸಿದೆ.

ಸರ್ಕಾರದ ಎಕ್ಸ್ ಪೋಸ್ಟ್​ವೊಂದರಲ್ಲಿ ಜಿ20 ಗುಂಪಿನ ದೇಶಗಳ ಜಿಡಿಪಿ ದರಗಳನ್ನು ತುಲನೆ ಮಾಡಿ ಮಾಹಿತಿ ಹಾಕಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದು ಸ್ಪಷ್ಟವಾಗಿದೆ ಎಂದು ಆ ಪೋಸ್ಟ್​ನಲ್ಲಿ ಬರೆಯಲಾಗಿದೆ.

ಜಿ20 ಗುಂಪಿನಲ್ಲಿರುವ ದೇಶಗಳಲ್ಲಿ ವಿಶ್ವದ ಬಹುಪಾಲು ಆರ್ಥಿಕತೆ ಇದೆ. 2024ರಲ್ಲಿ ಏಳು ದೇಶ ಅಥವಾ ಪ್ರದೇಶಗಳು ಶೇ. 3 ಹಾಗೂ ಹೆಚ್ಚು ಜಿಡಿಪಿ ಬೆಳವಣಿಗೆ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ನಾಲ್ಕು ದೇಶಗಳು ಶೇ. 1ಕ್ಕಿಂತಲೂ ಕಡಿಮೆ ಜಿಡಿಪಿ ದರ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಅರ್ಜೆಂಟೀನಾ ಶೇ. 3.5ರಷ್ಟು ಜಿಡಿಪಿ ನಷ್ಟ ಕಾಣಬಹುದು ಎನ್ನಲಾಗಿದೆ.

ಇದನ್ನೂ ಓದಿ: ಹೂಡಿಕೆದಾರರಿಗೆ ಅಮೆರಿಕ ಬಿಟ್ಟರೆ ಭಾರತವೇ ಮೊದಲ ಆದ್ಯತೆ: ಸಿಟಿ ಗ್ರೂಪ್ ವೈಸ್ ಛೇರ್ಮನ್ ವಿಶ್ವಾಸ್ ರಾಘವನ್

ಜಿ20 ದೇಶಗಳು ಹಾಗು 2024ರ ಅಂದಾಜು ಜಿಡಿಪಿ ದರ

  1. ಭಾರತ: ಜಿಡಿಪಿ ದರ ಶೇ. 7
  2. ಇಂಡೋನೇಷ್ಯಾ: ಜಿಡಿಪಿ ದರ ಶೇ. 5
  3. ಚೀನಾ: ಜಿಡಿಪಿ ದರ ಶೇ. 4.8
  4. ರಷ್ಯಾ: ಜಿಡಿಪಿ ದರ ಶೇ. 3.6
  5. ಬ್ರಜಿಲ್: ಜಿಡಿಪಿ ದರ ಶೇ. 3
  6. ಆಫ್ರಿಕಾ: ಜಿಡಿಪಿ ದರ ಶೇ. 3
  7. ಟರ್ಕಿ: ಜಿಡಿಪಿ ದರ ಶೇ. 3
  8. ಅಮೆರಿಕ: ಜಿಡಿಪಿ ದರ ಶೇ. 2.8
  9. ಕೊರಿಯಾ: ಜಿಡಿಪಿ ದರ ಶೇ. 2.5
  10. ಮೆಕ್ಸಿಕೋ: ಜಿಡಿಪಿ ದರ ಶೇ. 1.5
  11. ಸೌದಿ ಅರೇಬಿಯಾ: ಜಿಡಿಪಿ ದರ ಶೇ. 1.5
  12. ಕೆನಡಾ: ಜಿಡಿಪಿ ದರ ಶೇ. 1.3
  13. ಆಸ್ಟ್ರೇಲಿಯಾ: ಜಿಡಿಪಿ ದರ ಶೇ. 1.2
  14. ಫ್ರಾನ್ಸ್: ಜಿಡಿಪಿ ದರ ಶೇ. 1.1
  15. ಐರೋಪ್ಯ ಒಕ್ಕೂಟ: ಜಿಡಿಪಿ ದರ ಶೇ. 1.1
  16. ಯುಕೆ: ಜಿಡಿಪಿ ದರ ಶೇ. 1.1
  17. ಸೌತ್ ಆಫ್ರಿಕಾ: ಜಿಡಿಪಿ ದರ ಶೇ. 1.1
  18. ಇಟಲಿ: ಜಿಡಿಪಿ ದರ ಶೇ. 0.7
  19. ಜಪಾನ್: ಜಿಡಿಪಿ ದರ ಶೇ. 0.3
  20. ಜರ್ಮನಿ: ಜಿಡಿಪಿ ದರ ಶೇ. 0
  21. ಅರ್ಜೆಂಟೀನಾ: ಜಿಡಿಪಿ ದರ ಮೈನಸ್ 3.5

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ