
ನವದೆಹಲಿ, ಜೂನ್ 2: ಭಾರತದ ಹೊಸ ಎಲೆಕ್ಟ್ರಿಕ್ ವಾಹನ ನೀತಿಯಿಂದಾಗಿ (New EV policy) ಹಲವು ದೇಶಗಳ ಕಂಪನಿಗಳು ಭಾರತದಲ್ಲಿ ಇವಿಗಳನ್ನು ತಯಾರಿಸಲು ಆಸಕ್ತಿ ತೋರಿಸಿವೆ. ಹ್ಯುಂಡಾಯ್, ಮರ್ಸಿಡೆಸ್ ಬೆಂಜ್, ಸ್ಕೋಡಾ ವೋಸ್ವ್ಯಾಗನ್, ಕಿಯಾ ಮೊದಲಾದ ಕಂಪನಿಗಳು ಭಾರತದಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಆಸಕ್ತವಾಗಿವೆ ಎಂದು ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಎಲೆಕ್ಟ್ರಿಕ್ ಪ್ರಯಾಣಿಕ ಕಾರುಗಳ ತಯಾರಿಕೆಗೆ ಉತ್ತೇಜಿಸುವ SPMEPCI ಯೋಜನೆ ಅಡಿ ಶೀಘ್ರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಈ ಸ್ಕೀಮ್ನಲ್ಲಿ ಸರ್ಕಾರವು ಕಾರ್ ತಯಾರಕ ಕಂಪನಿಗಳಿಗೆ ಕೆಲವಿಷ್ಟು ವಿನಾಯಿತಿಗಳನ್ನು ನೀಡುತ್ತದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಮಾಡುವ ಮತ್ತು ಹೂಡಿಕೆ ಮಾಡಲು ಒಪ್ಪುವ ಕಂಪನಿಗೆ ಈ ಸ್ಕೀಮ್ನ ಲಾಭ ಸಿಗುತ್ತದೆ. ಈ ಸ್ಕೀಮ್ನಲ್ಲಿ ಒಪ್ಪಂದ ಮಾಡಿಕೊಂಡ ಬಳಿಕ ಮೂರು ವರ್ಷದೊಳಗೆ ಕಾರು ತಯಾರಿಕೆ ಆರಂಭಿಸಬೇಕು ಎನ್ನುವ ನಿಯಮ ಇದೆ.
ಇದನ್ನೂ ಓದಿ: ಡಬ್ಲ್ಯುಟಿಒದಲ್ಲಿ ಭಾರತ ನೀಡಿದ ನೋಟೀಸ್ಗೆ ಅಮೆರಿಕದ ನಿರ್ಲಕ್ಷ್ಯ; ಭಾರತದಿಂದ ಪ್ರತಿಸುಂಕ ವಿಧಿಸುವ ಸಾಧ್ಯತೆ
‘ಈ ಸ್ಕೀಮ್ನಿಂದ ಭಾರತವು ಜಾಗತಿಕ ಇವಿ ತಯಾರಿಕೆಯ ಕೇಂದ್ರವಾಗಲು ಸಾಧ್ಯವಾಗುತ್ತದೆ. ಅರ್ಜಿಗಳ ಸಲ್ಲಿಕೆಗೆ ಶೀಘ್ರದಲ್ಲೇ ಅವಕಾಶ ನೀಡಲಾಗುವುದು’ ಎಂದು ಮಾಜಿ ಕರ್ನಾಟಕ ಮುಖ್ಯಮಂತ್ರಿಯೂ ಆದ ಕುಮಾರಸ್ವಾಮಿ ತಿಳಿಸಿದ್ದಾರೆ.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಸ್ಕೋಡಾ-ವೋಲ್ಸ್ವ್ಯಾಗನ್ ಮತ್ತು ಮರ್ಸಿಡೆಸ್ ಬೆಂಜ್ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಸದ್ಯದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ.
ಎಸ್ಪಿಎಂಎಪಿಸಿಐ ಸ್ಕೀಮ್ ಅಡಿಯಲ್ಲಿ ಆಸಕ್ತ ಕಂಪನಿಗಳು ಕನಿಷ್ಠ 4,150 ಕೋಟಿ ರೂ ಹೂಡಿಕೆ ಮಾಡಬೇಕು. ಎಲೆಕ್ಟ್ರಿಕ್ ಕಾರುಗಳ ಬ್ಯುಲ್ಟ್-ಇನ್ ಯುನಿಟ್ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ, 35,000 ಡಾಲರ್ ಕನಿಷ್ಠ ಆಮದು ಇರಬೇಕು. ವರ್ಷಕ್ಕೆ 8,000ಕ್ಕಿಂತ ಹೆಚ್ಚು ಇವಿಗಳ ಆಮದಿಗೆ ಅವಕಾಶ ಇರುವುದಿಲ್ಲ. ಹೀಗಿದ್ದಾಗ ಆಮದು ಸುಂಕವನ್ನು ಶೇ. 15ಕ್ಕೆ ಇಳಿಸಲಾಗುತ್ತದೆ.
ಇದನ್ನೂ ಓದಿ: ಬ್ರಹ್ಮಪುತ್ರ ನದಿಯನ್ನು ಚೀನಾ ತಡೆದರೆ ಭಾರತಕ್ಕೆ ಎಂಥ ಹಾನಿ? ಚೀನಾದಿಂದ ಭಾರತಕ್ಕೆ ಹರಿದುಬರುವ ಬೇರೆ ನದಿಗಳ್ಯಾವುವು?
ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಆಸಕ್ತಿ ಹೊಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಭಾರತದಲ್ಲಿ ಶೋರೋಮುಗಳನ್ನು ತೆರೆದು, ತನ್ನ ಆಮದಿಗ ಕಾರುಗಳನ್ನು ಮಾರಾಟ ಮಾಡುವ ಆಲೋಚನೆಯಲ್ಲಿದೆ ಎಂದೂ ಎಚ್ಡಿಕೆ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ