
ನವದೆಹಲಿ, ಅಕ್ಟೋಬರ್ 27: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ರಜಾದಿನಗಳನ್ನು (Bank holidays) ಕಂಡ ಬ್ಯಾಂಕುಗಳಿಗೆ ನವೆಂಬರ್ನಲ್ಲಿ ಹೆಚ್ಚಿನ ರಜೆಗಳಿಲ್ಲ. ಆರ್ಬಿಐ (RBI) ಕ್ಯಾಲಂಡರ್ ಪ್ರಕಾರ ನವೆಂಬರ್ ತಿಂಗಳಲ್ಲಿ 11 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳೂ ಒಳಗೊಂಡಿವೆ. ಪ್ರಾದೇಶಿಕ ವಿಶೇಷ ರಜೆಗಳೂ ಸೇರಿವೆ. ಗುರುನಾನಕ್ ಜಯಂತಿ, ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ ಇತ್ಯಾದಿ ಹಬ್ಬ, ಹರಿದಿನ, ಉತ್ಸವಗಳು ನವೆಂಬರ್ನಲ್ಲಿ ಇವೆ. ನವೆಂಬರ್ನಲ್ಲಿ ಐದು ಶನಿವಾರ ಮತ್ತು ಐದು ಭಾನುವಾರಗಳಿವೆ. ಈ ಪೈಕಿ ಎರಡು ಶನಿವಾರಗಳು ಬ್ಯಾಂಕುಗಳಿಗೆ ರಜೆ ಇವೆ.
ಇದನ್ನೂ ಓದಿ: ನಿಮ್ಮನ್ನು ಬೇಡ ಎನ್ನುವ ಜಾಗದಲ್ಲಿ ಯಾಕಿರುತ್ತೀರಿ, ಭಾರತಕ್ಕೆ ಬನ್ನಿ: ಅನಿವಾಸಿ ಭಾರತೀಯರಿಗೆ ಶ್ರೀಧರ್ ವೆಂಬು ಕರೆ
ಕರ್ನಾಟಕದಲ್ಲಿ ಏಳು ಭಾನುವಾರ ಮತ್ತು ಶನಿವಾರಗಳನ್ನೂ ಸೇರಿಸಿ ಒಟ್ಟು 9 ದಿನಗಳು ರಜೆ ಇವೆ. ನವೆಂಬರ್ 1ರಂದು ರಾಜ್ಯೋತ್ಸವ ನಿಮಿತ್ತ ರಜೆ ಇದೆ. ನವೆಂಬರ್ 5, ಬುಧವಾರ ಗುರುನಾನಕ್ ಜಯಂತಿಗೂ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಇದನ್ನೂ ಓದಿ: ಬೆಂಗಳೂರಿಗೆ ಹೋಗಿ ಬಂದಾಗೆಲ್ಲಾ ಉತ್ಸಾಹ ಇಮ್ಮಡಿಸುತ್ತೆ: ಮರ್ಸಿಡಸ್ ಬೆಂಜ್ ಸಿಇಒ ಒಲಾ ಕ್ಯಾಲೆನಿಯಸ್
ಬ್ಯಾಂಕುಗಳಿಗೆ ರಜೆ ಇದ್ದರೂ ಆನ್ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಸೇವೆಗಳು ಅಬಾಧಿತವಾಗಿ ಮುಂದುವರಿಯುತ್ತವೆ. ಎಟಿಎಂಗಳೂ ಕೂಡ ತೆರೆದಿರುತ್ತವೆ. ರಜಾ ದಿನಗಳಲ್ಲಿ ಬ್ಯಾಂಕ್ ಕಚೇರಿ ಮಾತ್ರವೇ ಬಂದ್ ಆಗಿರುತ್ತದೆ. ಹೆಚ್ಚಿನ ಬ್ಯಾಂಕ್ ಸೇವೆಗಳು ಆನ್ಲೈನ್ನಲ್ಲೇ ಲಭ್ಯ ಇರುತ್ತದೆ. ಕ್ಯಾಷ್ ಡೆಪಾಸಿಟ್, ಆರ್ಟಿಜಿಎಸ್ ಟ್ರಾನ್ಸ್ಫರ್, ಅಕೌಂಟ್ ಓಪನಿಂಗ್ ಇತ್ಯಾದಿ ಕಾರ್ಯಗಳಿಗೆ ಬ್ಯಾಂಕ್ ಕಚೇರಿ ತೆರೆಯುವವರೆಗೂ ಕಾಯಬೇಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ