ಭಾರತದ ಹಳೇ ಕ್ರಿಪ್ಟೊಕರೆನ್ಸಿ ವಹಿವಾಟಿನ ಪ್ಲಾಟ್ಫಾರ್ಮ್ ಯುನೋಕಾಯಿನ್ (UnoCoin). ಅದೀಗ ಬಳಕೆದಾರರಿಗೆ ಬಿಟ್ ಕಾಯಿನ್ಗಳನ್ನು ಬಳಸಿಕೊಂಡು ಡಾಮಿನೋಸ್ ಪಿಜ್ಜಾ, ಬಾಸ್ಕಿನ್ ರಾಬಿನ್ ಐಸ್ಕ್ರೀಮ್ಸ್, ಕೆಫೆ ಕಾಫೀ ಡೇಯಿಂದ ಕಾಫೀ ಖರೀದಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ, ಬಿಟ್ ಕಾಯಿನ್ ಬಳಸಿ 90 ವಿವಿಧ ಬ್ರ್ಯಾಂಡ್ಗಳ ವಸ್ತುಗಳ ಖರೀದಿ ಮಾಡಬಹುದು, ಸೇವೆಯನ್ನು ಪಡೆಯಬಹುದು. ಯುನಿಕಾಯಿನ್ನ ನೋಂದಾಯಿತ ಬಳಕೆದಾರರು ಕನಿಷ್ಠ 100 ರೂಪಾಯಿ ಮೌಲ್ಯದಷ್ಟು ಬಿಟ್ಕಾಯಿನ್ನಾದರೂ ಅಥವಾ 5000 ರೂಪಾಯಿ ಮೌಲ್ಯದಷ್ಟಾದರೂ ಬಳಸಬಹುದು ಎಂದು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ತಿಳಿಸಿದೆ. ಅದಕ್ಕಾಗಿ ಬ್ರ್ಯಾಂಡ್ಗಳಿಂದ ಬಿಟ್ಕಾಯಿನ್ಸ್ ಮೂಲಕ ವೋಚರ್ ಖರೀದಿಸಬೇಕು. “ಬಿಟ್ಕಾಯಿನ್ ಎಂಬುದು ಬದಲಿ ಆಸ್ತಿ. ಇದನ್ನು ವಿಶ್ವದಾದ್ಯಂತ ಹತ್ತಾರು ಲಕ್ಷ ಬಳಕೆದಾರರು ಸ್ವೀಕರಿಸುತ್ತಾರೆ ಮತ್ತು ವಹಿವಾಟು ನಡೆಸುತ್ತಾರೆ. ಈಗಿನ ಆರಂಭದಿಂದ ಬಹು-ಆಯಾಮದ ಕ್ರಿಪ್ಟೊಕರೆನ್ಸಿ ಬಗ್ಗೆ ಭಾರತೀಯರಿಗೆ ತಿಳಿವಳಿಕೆ ಮೂಡಿಸಲು ನಾವು ಇಚ್ಛಿಸುತ್ತೇವೆ,” ಎಂದು ಯುನೊಕಾಯಿನ್ ಸಿಇಒ ಹಾಗೂ ಸಹ-ಸಂಸ್ಥಾಪಕ ಸಾತ್ವಿಕ್ ವಿಶ್ವನಾಥ ಹೇಳಿದ್ದಾರೆ.
“ಅಮೆರಿಕದಂಥ ದೇಶದಲ್ಲಿ ಹತ್ತಾರು ಸಾವಿರ ಭೌತಿಕ ಔಟ್ಲೆಟ್ಗಳು ಹಾಗೂ ಇ-ಕಾಮರ್ಸ್ ಪೋರ್ಟಲ್ಗಳು ಬಿಟ್ಕಾಯಿನ್ ಮೂಲಕ ಪಾವತಿಯನ್ನು ಸ್ವೀಕರಿಸುತ್ತಿವೆ. ನಮ್ಮ ದೇಶದಲ್ಲೂ ಇನ್ನೂ ಅಂಥ ಸ್ವೀಕಾರ ಇಲ್ಲ. ಭಾರತದಲ್ಲಿ ಬಿಟ್ಕಾಯಿನ್ ಅನ್ನು ಎಲ್ಲಿ ಖರ್ಚು ಮಾಡಬಹುದು ಎಂಬುದಕ್ಕೆ ನಮ್ಮ ಆಫರಿಂಗ್ ಉತ್ತರ ನೀಡಲಿದೆ,” ಎಂದೂ ಹೇಳಿದ್ದಾರೆ. ಅಂದಹಾಗೆ ಬಿಟ್ಕಾಯಿನ್ ಅನ್ನು ಪ್ರಯಾಣ, ರೆಸ್ಟೋರೆಂಟ್ಗಳು, ಲೈಫ್ಸ್ಟೈಲ್ ಕಂಪೆನಿಗಳು, ಬಟ್ಟೆಗಳು, ಆಕ್ಸೆಸರೀಸ್, ಹೋಟೆಲ್ಗಳು ಇತರ ವಲಯಗಳಲ್ಲಿ ನಗದು ಬದಲಿಗೆ ಬಿಟ್ಕಾಯಿನ್ಸ್ ನೀಡಲು ಈ ಟ್ರೇಡಿಂಗ್ ಪ್ಲಾಟ್ಫಾರ್ಮ್ ಅವಕಾಶ ಮಾಡಿಕೊಡುತ್ತದೆ.
ಬಿಟ್ಕಾಯಿನ್ ಬಳಸಿ ವೋಚರ್ ಖರೀದಿಸಲು ವಿವಿಧ ಹಂತಗಳು:
1. ಯುನೊಕಾಯಿನ್ ಖಾತೆಗೆ ಲಾಗ್ ಇನ್ ಆಗಬೇಕು ಮತ್ತು BTC ಪುಟಕ್ಕೆ ತೆರಳಬೇಕು.
2. ಪುಟದಲ್ಲಿ “Shop” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಯುನೊಕಾಯಿನ್ ಆ್ಯಪ್ ಬಳಸುತ್ತಿದ್ದಲ್ಲಿ ಆ ನಂತರ ಶಾಪ್ ಬಟನ್ ಡ್ಯಾಶ್ಬೋರ್ಡ್ನಲ್ಲಿ ಮತ್ತು More ವಿಭಾಗದಲ್ಲಿ ಕಾಣಸಿಗುತ್ತದೆ.
3. ಡಾಮಿನೋಸ್, ಸಿಸಿಡಿ, ಬಾಸ್ಕಿನ್ ಅಂಡ್ ರಾಬಿನ್ಸ್, ಹಿಮಾಲಯ, ಪ್ರೆಸ್ಟೀಜ್ ಒಳಗೊಂಡಂತೆ 90ಕ್ಕೂ ಹೆಚ್ಚು ಆಯ್ಕೆಗಳಿಂದ ಆರಿಸಿಕೊಳ್ಳಬೇಕು.
4. ಯಾವ ಬ್ರ್ಯಾಂಡ್ ಬೇಕು ಎಂದು ಆರಿಸಿಕೊಂಡ ಮೇಲೆ ವೋಚರ್ ಖರೀದಿಗೆ ಭಾರತದ ರೂಪಾಯಿ ಮೌಲ್ಯದ ವಿವಿಧ ಮುಖಬೆಲೆಯಲ್ಲಿ ಡ್ರಾಪ್ಡೌನ್ ಮೆನು ಬರುತ್ತದೆ.
5. ಅದಕ್ಕೆ ಎಷ್ಟು ಮೌಲ್ಯದ ಬಿಟ್ಕಾಯಿನ್ ಎಂಬುದು ಸಹ ಕಾಣುತ್ತದೆ.
6. ಮೊತ್ತವನ್ನು ಪಾವತಿಸಿದ ಮೇಲೆ ಬಳಕೆದಾರರಿಗೆ ವೋಚರ್ ಕೋಡ್ ಬರುತ್ತದೆ.
7. ಮಾಹಿತಿಯನ್ನು ಎಲೆಕ್ಟ್ರಾನಿಕಲಿ ದಾಟಿಸುವ ಮೂಲಕ ಇ-ವೋಚರ್ಗಳನ್ನು ಕೊಡುಗೆ ನೀಡಬಹುದು ಅಥವಾ ಪ್ರಿಂಟಿಂಗ್ ಮಾಡುವ ಮೂಲಕ ವೋಚರ್ ಕಾಪಿಯನ್ನು ನೀಡಬಹುದು.
(Now Pizza Ice Cream CCD Coffee Can Be Purchased Through Bitcoins In India Know How)
Published On - 1:47 pm, Thu, 12 August 21