ನವದೆಹಲಿ, ಮಾರ್ಚ್ 12: ದೇಶದ ಪ್ರಮುಖ ಷೇರು ವಿನಿಮಯ ಕೇಂದ್ರವೆನಿಸಿರುವ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ತನ್ನ ಪ್ಲಾಟ್ಫಾರ್ಮ್ನಲ್ಲಿ ಟ್ರಾನ್ಸಾಕ್ಷನ್ ಚಾರ್ಜ್ನಲ್ಲಿ ಇಳಿಕೆ ಮಾಡಿದೆ. ಕ್ಯಾಷ್ ಈಕ್ವಿಟಿ ಮತ್ತು ಈಕ್ವಿಟಿ ಡಿರೈವೇಟಿವ್ಗಳ (Equity derivatives) ವಹಿವಾಟು ಶುಲ್ಕವನ್ನು ಶೇ. 1ರಷ್ಟು ಇಳಿಸಿದೆ. 2024ರ ಏಪ್ರಿಲ್ 1ರಿಂದ ನೂತನ ದರ ಜಾರಿಗೆ ಬರಲಿದೆ. ಈ ಶುಲ್ಕ ದರ ಇಳಿಕೆಯಿಂದ ಎನ್ಎಸ್ಇಗೆ ಬರುತ್ತಿದ್ದ ಆದಾಯದಲ್ಲಿ 130 ಕೋಟಿ ರೂನಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಮಾರ್ಚ್ 11, ಸೋಮವಾರದಂದು ಎನ್ಎಸ್ಇಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕ್ಯಾಷ್ ಈಕ್ವಿಟಿಯ ವಹಿವಾಟು ಶುಲ್ಕ ಶೇ. 0.00335 ಇದ್ದು, ಅದನ್ನು ಶೇ. 0.00325ಕ್ಕೆ ಇಳಿಸಲಾಗಿದೆ. ಅಂದರೆ, ಪ್ರತೀ ಒಂದು ಲಕ್ಷ ರೂ ಮೊತ್ತದ ವಹಿವಾಟಿಗೆ 3.35 ರೂನಷ್ಟು ಶುಲ್ಕವನ್ನು ವಿಧಿಸುತ್ತದೆ ಎನ್ಎಸ್ಇ.
ಹಾಗೆಯೇ, ಡಿರೈವೇಟಿವ್ಸ್ ಟ್ರಾನ್ಸಾಕ್ಷನ್ ಶುಲ್ಕ ಈಗ ಶೇ. 0.0019ರಷ್ಟಿರಲಿದೆ. ಅಂದರೆ, ಪ್ರತೀ ಒಂದು ಲಕ್ಷ ರೂ ಮೊತ್ತದ ಡಿರೈವೇಟಿವ್ಸ್ ಟ್ರಾನ್ಸಾಕ್ಷನ್ಗೆ 1.9 ರೂ ಶುಲ್ಕವನ್ನು ಎನ್ಎಸ್ಇ ವಿಧಿಸುತ್ತದೆ.
2022ರಲ್ಲಿ ಎನ್ಎಸ್ಇ ಟ್ರಾನ್ಸಾಕ್ಷನ್ ಶುಲ್ಕವನ್ನು ಶೇ. 6ರಷ್ಟು ಹೆಚ್ಚಿಸಿತ್ತು. 2023ರಲ್ಲಿ ಹೆಚ್ಚಳವನ್ನು ಹಿಂಪಡೆದುಕೊಂಡಿತು. ಈಗ ಮತ್ತಷ್ಟು ಶೇ. 1ರಷ್ಟು ಶುಲ್ಕ ಇಳಿಸಿದೆ.
ಇದನ್ನೂ ಓದಿ: ಎರಡು ವಾರದಲ್ಲಿ ಶೇ. 33ರಷ್ಟು ಕುಸಿತ ಕಂಡ ಜೆಟಿಎಲ್ ಷೇರು; ಇದನ್ನು ಖರೀದಿಸಲು ಸಕಾಲವಾ? ತಜ್ಞರ ಸಲಹೆ ಇದು
1993ರಲ್ಲಿ ಸ್ಥಾಪನೆಯಾದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಕಂಪನಿ ಕೇವಲ ಷೇರು ವಿನಿಮಯ ಕೇಂದ್ರ ಮಾತ್ರವಲ್ಲ, ಬೇರೆ ಹಲವು ಬಿಸಿನೆಸ್ಗಳನ್ನು ಹೊಂದಿದೆ. ಷೇರು ಮಾರುಕಟ್ಟೆಗೆ ಸಂಬಂಧಿಸದ ನಾನ್-ಕೋರ್ ಬಿಸಿನೆಸ್ಗಳಿಂದ ಹೊರಬರಲು ಎನ್ಎಸ್ಇ ನಿರ್ಧರಿಸಿದೆ. ಡಿಜಿಟಲ್ ಟೆಕ್ನಾಲಜಿ ಮತ್ತು ಶಿಕ್ಷಣದ ಬಿಸಿನೆಸ್ಗಳನ್ನು ಮಾರುವ ನಿರ್ಧಾರಕ್ಕೆ ಬಂದಿದೆ.
ಇದನ್ನೂ ಓದಿ: ಎನ್ಎಲ್ಸಿ ಇಂಡಿಯಾದ ಶೇ. 7ರಷ್ಟು ಪಾಲನ್ನು ಮಾರುತ್ತಿರುವ ಸರ್ಕಾರ; ಎರಡು ಸಾವಿರ ಕೋಟಿ ರೂ ಆದಾಯ ಗಳಿಕೆ ನಿರೀಕ್ಷೆ
ಎನ್ಎಸ್ಇಐಟಿ ಯುಎಸ್, ಔಜಸ್ ಸೈಬರ್ ಸೆಕ್ಯೂರಿಟಿ ಲಿ, ಸಿಎಕ್ಸ್ಐಒ ಟೆಕ್ನಾಲಜೀಸ್ ಲಿ ಸಂಸ್ಥೆಗಳನ್ನು ಇನ್ವೆಸ್ಟ್ಕಾರ್ಪ್ ಸಂಸ್ಥೆಗೆ 1,000 ಕೋಟಿ ರೂ ಮೊತ್ತಕ್ಕೆ ಮಾರಲಾಗುತ್ತಿರುವುದು ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ