Nuclear Energy: ಪರಮಾಣ ವಿದ್ಯುತ್ ಉತ್ಪಾದನೆ; ಹೂಡಿಕೆ ಮಾಡುವಂತೆ ಅದಾನಿ, ರಿಲಾಯನ್ಸ್, ಟಾಟಾ ಕಂಪನಿಗಳಿಗೆ ಸರ್ಕಾರದ ಮಾತುಕತೆ

|

Updated on: Feb 20, 2024 | 4:42 PM

Nuclear Power Generation: ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಣು ವಿದ್ಯುತ್ ಕ್ಷೇತ್ರದತ್ತ ಸರ್ಕಾರ ಗಮನ ಕೊಟ್ಟಿದೆ. ಪರಮಾಣ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ 26 ಬಿಲಿಯನ್ ಡಾಲರ್ ಹೂಡಿಕೆ ಮಾಡುವಂತೆ ಖಾಸಗಿ ಕಂಪನಿಗಳಿಗೆ ಕರೆ ನೀಡಿರುವ ಸರ್ಕಾರ, ಮಾತುಕತೆ ನಡೆಸುತ್ತಿದೆ. ಸದ್ಯ, ಪರಿಸರ ಸ್ನೇಹಿ ಎನಿಸಿರುವ ವಿದ್ಯುತ್ ಉತ್ಪಾದನೆ ಭಾರತದಲ್ಲಿ ಶೇ. 42ರಷ್ಟಿದೆ. ಇದನ್ನು 2030ರೊಳಗೆ ಶೇ. 50ಕ್ಕೆ ಏರಿಸುವುದು ಸರ್ಕಾರದ ಗುರಿ.

Nuclear Energy: ಪರಮಾಣ ವಿದ್ಯುತ್ ಉತ್ಪಾದನೆ; ಹೂಡಿಕೆ ಮಾಡುವಂತೆ ಅದಾನಿ, ರಿಲಾಯನ್ಸ್, ಟಾಟಾ ಕಂಪನಿಗಳಿಗೆ ಸರ್ಕಾರದ ಮಾತುಕತೆ
ಅಣು ವಿದ್ಯುತ್
Follow us on

ನವದೆಹಲಿ, ಫೆಬ್ರುವರಿ 20: ಪೆಟ್ರೋಲಿಯಂ ಅವಲಂಬನೆಯಿಂದ (dependency on fossil fuel) ಮುಕ್ತಗೊಳ್ಳಲು ಪ್ರಯತ್ನಿಸುತ್ತಿರುವ ಸರ್ಕಾರ ಪರ್ಯಾಯ ಇಂಧನಗಳತ್ತ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಅಣು ವಿದ್ಯುತ್ ವಲಯಕ್ಕೆ (Nuclear energy sector) ಪುಷ್ಟಿ ಕೊಡುವ ಪ್ರಯತ್ನ ನಡೆದಿದೆ. ಈ ಕ್ಷೇತ್ರದಲ್ಲಿ 26 ಬಿಲಿಯನ್ ಡಾಲರ್ ಹೂಡಿಕೆ ಮಾಡವಂತೆ ಖಾಸಗಿ ವಲಯದ ಕಂಪನಿಗಳಿಗೆ ಸರ್ಕಾರ ಆಹ್ವಾನ ಕೊಡಲು ಯೋಜಿಸುತ್ತಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ಇದರ ಪ್ರಕಾರ ಸರ್ಕಾರ ಕನಿಷ್ಠ ಐದು ಖಾಸಗಿ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿರುವುದು ತಿಳಿದುಬಂದಿದೆ. ಟಾಟಾ ಪವರ್, ಅದಾನಿ ಪವರ್, ರಿಲಾಯನ್ಸ್ ಇಂಡಸ್ಟ್ರೀಸ್, ವೇದಾಂತ ಮೊದಲಾದ ಕಂಪನಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ.

ಭಾರತದ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ಅಣು ಶಕ್ತಿ ಪಾಲು ಶೇ. 2ಕ್ಕಿಂತಲೂ ಕಡಿಮೆ ಇದೆ. ಕಾರ್ಬನ್ ಡೈ ಆಕ್ಸೈಡ್ ಹೊರಹಾಕದ ಪರಿಸರಸ್ನೇಹಿ ವಿದ್ಯುತ್ ಆಗಿರುವ ಅಣು ಶಕ್ತಿಯನ್ನು ಹೆಚ್ಚೆಚ್ಚು ಉತ್ಪಾದಿಸಬೇಕೆನ್ನುವ ಗುರಿ ಸರ್ಕಾರದ್ದು. 2030ರೊಳಗೆ ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಬಳಕೆ ಇಲ್ಲದೇ ಬೇರೆ ವಿವಿಧ ಮೂಲಗಳಿಂದ ಕನಿಷ್ಠ ಶೇ. 50ರಷ್ಟಾದರೂ ವಿದ್ಯುತ್ ಉತ್ಪಾದನೆ ವ್ಯವಸ್ಥೆ ನಿರ್ಮಿಸಲು ಸರ್ಕಾರ ಯೋಜಿಸಿದೆ. ಸದ್ಯಕ್ಕೆ ಈ ಪ್ರಮಾಣ ಶೇ. 42ರಷ್ಟಿದೆ. ಇನ್ನು ಆರು ವರ್ಷದಲ್ಲಿ ಪರ್ಯಾಯ ವಿದ್ಯುತ್ ಉತ್ಪಾದನಾ ಪ್ರಮಾಣ ಶೇ. 50 ಮುಟ್ಟಬೇಕು.

ಇದನ್ನೂ ಓದಿ: ಸಿಡಿದೆದ್ದಿದ್ದ ಝೀ ಮತ್ತು ಸೋನಿ ಮಧ್ಯೆ ಮತ್ತೆ ಮಾತುಕತೆ ಶುರು; ವಿಲೀನ ಯತ್ನ ಈ ಬಾರಿ ಯಶಸ್ವಿಯಾಗುತ್ತಾ?

ಕಳೆದ ಒಂದು ವರ್ಷದಿಂದಲೂ ಕೇಂದ್ರದ ಅಣು ಶಕ್ತಿ ಇಲಾಖೆ ಮತ್ತು ಪರಮಾಣು ಶಕ್ತಿ ನಿಗಮ (ಎನ್​ಪಿಸಿಐಎಲ್) ವಿವಿಧ ಖಾಸಗಿ ಕಂಪನಿಗಳ ಜೊತೆ ಹಲವು ಸುತ್ತುಗಳ ಮಾತುಕತೆ ನಡೆಸಿದೆ. ಒಂದು ವೇಳೆ ನಿರೀಕ್ಷೆಯಂತೆ 26 ಬಿಲಿಯನ್ ಡಾಲರ್​ನಷ್ಟು ಹೂಡಿಕೆಯಾದಲ್ಲಿ 2040ರ ವೇಳೆಗೆ ಭಾರತದಲ್ಲಿ 11,000 ಮೆಗ್ಯಾವ್ಯಾಟ್ ಹೊಸ ಪರಮಾಣ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ನಿರ್ಮಾಣವಾಗುವ ಆಶಯ ಇದೆ.

ಎನ್​ಪಿಸಿಐಎಲ್ ಸದ್ಯ ನಡೆಸುತ್ತಿರುವ ಪರಮಾಣ ವಿದ್ಯುತ್ ಉತ್ಪಾದನಾ ಘಟಕದಲ್ಲಿ 7,500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಇದರ ಜೊತೆಗೆ ಇನ್ನೂ 1,300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ವ್ಯವಸ್ಥೆ ನಿರ್ಮಿಸುತ್ತಿದೆ. ಖಾಸಗಿ ಹೂಡಿಕೆಗಳು ಈ ವಲಯಕ್ಕೆ ಬಂದರೆ ಈಗಿರುವ ಉತ್ಪಾದನಾ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: ಜಿಯೋ, ಏರ್ಟೆಲ್ ಪ್ರಾಬಲ್ಯ ತಡೆಯಲು ಬಿಎಸ್​ಎನ್​ಎಲ್​ನಿಂದ ಭರ್ಜರಿ ‘ವೊಡಾಫೋನ್’ ಐಡಿಯಾ

ಒಂದು ವೇಳೆ ರಿಲಾಯನ್ಸ್, ಅದಾನಿ ಮೊದಲಾದ ಕಂಪನಿಗಳು ಪರಮಾಣು ವಿದ್ಯುತ್ ವಲಯಕ್ಕೆ ಬಂಡವಾಳ ಹಾಕಲು ಬಂದರೂ ಅಣು ಸ್ಥಾವರಗಲನ್ನು ನಿರ್ಮಿಸಿ ನಿರ್ವಹಿಸುವ ಹಕ್ಕು ಪರಮಾಣು ಶಕ್ತಿ ನಿಗಮದ ಬಳಿಯೇ ಇರುತ್ತದೆ. ಬಂಡವಾಳ ಹಾಕುವ ಕಂಪನಿಗಳು ಈ ವಿದ್ಯುತ್ ಮಾರಾಟದಿಂದ ಬರುವ ಆದಾಯವನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ