Zee-Sony: ಸಿಡಿದೆದ್ದಿದ್ದ ಝೀ ಮತ್ತು ಸೋನಿ ಮಧ್ಯೆ ಮತ್ತೆ ಮಾತುಕತೆ ಶುರು; ವಿಲೀನ ಯತ್ನ ಈ ಬಾರಿ ಯಶಸ್ವಿಯಾಗುತ್ತಾ?

ಜಪಾನ್ ಮೂಲದ ಸೋನಿ ಎಂಟರ್ಟೈನ್ಮೆಂಟ್ ಕಂಪನಿ ತನ್ನ ಭಾರತದ ವಿಭಾಗವನ್ನು ಝೀ ಜೊತೆ ವಿಲೀನಗೊಳಿಸಲು ಮತ್ತೊಮ್ಮೆ ಪ್ರಯತ್ನ ಮಾಡುತ್ತಿದೆ. ಝೀ ಮತ್ತು ಸೋನಿ ಪ್ರತಿನಿಧಿಗಳು ಮಾತುಕತೆಗೆ ಕೂತಿದ್ದು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಎರಡು ವರ್ಷದ ಹಿಂದೆಯೇ 10 ಬಿಲಿಯನ್ ಡಾಲರ್ ಮೊತ್ತದ ವಿಲೀನಕ್ಕೆ ಒಪ್ಪಂದ ಆಗಿತ್ತು. ಸಕಾಲಕ್ಕೆ ಅದು ಅಂತಿಮಗೊಂಡಿಲ್ಲ. ಸೋನಿ ಈ ಒಪ್ಪಂದದಿಂದ ಹಿಂದಕ್ಕೆ ಸರಿದಿತ್ತು.

Zee-Sony: ಸಿಡಿದೆದ್ದಿದ್ದ ಝೀ ಮತ್ತು ಸೋನಿ ಮಧ್ಯೆ ಮತ್ತೆ ಮಾತುಕತೆ ಶುರು; ವಿಲೀನ ಯತ್ನ ಈ ಬಾರಿ ಯಶಸ್ವಿಯಾಗುತ್ತಾ?
ಝೀ ಸೋನಿ ವಿಲೀನ
Follow us
|

Updated on:Feb 20, 2024 | 3:52 PM

ನವದೆಹಲಿ, ಫೆಬ್ರುವರಿ 20: ಝೀ ಎಂಟರ್ಟೈನ್ಮೆಂಟ್ (ZEEL) ಮತ್ತು ಸೋನಿ ಇಂಡಿಯಾ ಸಂಸ್ಥೆಗಳು ಮತ್ತೊಮ್ಮೆ ವಿಲೀನಕ್ಕೆ ಪ್ರಯತ್ನಿಸುತ್ತಿವೆ. ಒಪ್ಪಂದದಿಂದ ಹಿಂದಕ್ಕೆ ಸರಿದಿದ್ದ ಸೋನಿ ಗ್ರೂಪ್ ಈಗ ಝೀ ಜೊತೆ ಮಾತುಕತೆಗೆ ಕೂರಲು ನಿರ್ಧರಿಸಿದೆ. ಎರಡೂ ಸಂಸ್ಥೆಗಳ ಪ್ರತಿನಿಧಿಗಳು ಮಾತುಕತೆಗಳನ್ನು ನಡೆಸುತ್ತಿದ್ದ ಭಿನ್ನಾಭಿಪ್ರಾಯಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಒಂದು ವೇಳೆ ಈ ಮಾತುಕತೆ ಫಲಪ್ರದವಾದರೆ ಝೀ ಮತ್ತು ಸೋನಿ ವಿಲೀನದಿಂದ 10 ಬಿಲಿಯನ್ ಡಾಲರ್ ಕಂಪನಿ ಸೃಷ್ಟಿಯಾಗಲಿದೆ.

ಎರಡು ವರ್ಷದ ಹಿಂದೆಯೇ ಝೀ ಎಂಟರ್ಟೈನ್ಮೆಂಟ್ ಎಂಟರ್​ಪ್ರೈಸಸ್ ಲಿ ಮತ್ತು ಸೋನಿ ಇಂಡಿಯಾ ಪ್ರೈ ಲಿ ಸಂಸ್ಥೆಗಳು ವಿಲೀನಕ್ಕೆ ಒಪ್ಪಂದ ಮಾಡಿಕೊಂಡಿದ್ದವು. ನಿರ್ದಿಷ್ಟ ಅವಧಿಯೊಳಗೆ ಎಲ್ಲಾ ಭಿನ್ನಾಭಿಪ್ರಾಯಗಳು ಶಮನಗೊಂಡು ಒಪ್ಪಂದ ಜಾರಿಗೆ ಬರಬೇಕು ಎಂದು ನಿಯಮ ಹಾಕಲಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ವಿಲೀನಗೊಂಡ ಬಳಿಕ ಸೃಷ್ಟಿಯಾಗುವ ಹೊಸ ಕಂಪನಿಗೆ ಪುನೀತ್ ಗೋಯಂಕಾ ಸಿಇಒ ಆಗಬಾರದು ಎನ್ನುವುದು ಸೋನಿ ಷರತ್ತಾಗಿದೆ. ಈ ವಿಚಾರದಲ್ಲಿ ಎರಡೂ ಕಂಪನಿಗಳು ಒಮ್ಮತಕ್ಕೆ ಬಾರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಬಡ್ಡಿದರ ಇನ್ನಷ್ಟು ಕಡಿಮೆ ಮಾಡಿದ ಚೀನಾ; ವಿಶ್ವದಲ್ಲಿ ಅತ್ಯಂತ ಕಡಿಮೆ ಬಡ್ಡಿ ಇರುವ ದೇಶಗಳ ಪಟ್ಟಿ ಇದು

ಒಪ್ಪಂದ ನೆರವೇರಲು ಇರಿಸಲಾಗಿದ್ದ ಡೆಡ್​ಲೈನ್ ಮುಗಿಯುತ್ತಿರುವಂತೆಯೇ ಸೋನಿ ಈ ಒಪ್ಪಂದದಿಂದ ಹಿಂದಕ್ಕೆ ಸರಿಯಿತು. ಝೀ ಈ ಒಪ್ಪಂದ ನಿಯಮಗಳನ್ನು ಮುರಿದಿದೆ ಎಂದು ಸೋನಿ ಕೋರ್ಟ್ ಮೆಟ್ಟಿಲೇರಿತು. ಸೋನಿಯೇ ಈ ಒಪ್ಪಂದದಿಂದ ಹಿಂದಕ್ಕೆ ಸರಿದಿದೆ. ಅದು ಒಪ್ಪಂದಕ್ಕೆ ಬದ್ಧವಾಗುವಂತೆ ಮಾಡಿ ಎಂದು ಝೀ ಕೂಡ ಕೋರ್ಟ್ ಮೆಟ್ಟಿಲೇರಿತು.

ಕೋರ್ಟ್​ನಲ್ಲಿ ಇದರ ವಿಚಾರಣೆ ನಡೆಯುತ್ತಿರುವಂತೆಯೇ ಈಗ ಎರಡೂ ಕಂಪನಿಗಳು ಮತ್ತೊಮ್ಮೆ ಮಾತುಕತೆಗೆ ಕೂತು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವ ಇರಾದೆ ತೋರಿವೆ.

‘ವಿಲೀನ ಖಂಡಿತವಾಗಿ ಆಗಬೇಕು ಎನ್ನುತ್ತಿದ್ದವ ನಾನು. ಈ ನಿಟ್ಟಿನಲ್ಲಿ ನಾವು ಹಲವು ನಿರ್ಧಾರಗಳನ್ನು ಕೈಗೊಂಡೆವು. ಹೂಡಿಕೆ ಹಿಂತೆಗೆತ ಇರಬಹುದು, ಅಥವಾ ಕೆಲ ಲಾಭದಾಯ ವ್ಯವಹಾರಗಳನ್ನು ನಿಲ್ಲಿಸುವುದಾಗಿರಬಹುದು ನಾವು ವಿವಿಧ ಕ್ರಮ ಕೈಗೊಂಡೆವು. ಸೋನಿ ಸಂಸ್ಥೆಯ ಬೇಡಿಕೆಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಹಲವು ಪ್ರಸ್ತಾವ ಮತ್ತು ಪರಿಹಾರಗಳನ್ನು ನಾನೇ ವೈಯಕ್ತಿಕವಾಗಿ ಒದಗಿಸಿದ್ದೇನೆ. ಆದರೆ, ಅವೆಲ್ಲವೂ ಸ್ವೀಕೃತವಾಗಲಿಲ್ಲ. ಈಗ ಪ್ರಕರಣವು ನ್ಯಾಯಾಲಯದ ಪರಿಧಿಯಲ್ಲಿ ಇರುವುದರಿಂದ ಹೆಚ್ಚೇನೂ ಹೇಳಲು ಬಯಸುವುದಿಲ್ಲ. ಕಾನೂನಿನ ಪ್ರಕಾರ ಹೆಜ್ಜೆ ಇಡಲಾಗುತ್ತದೆ,’ ಎಂದು ಪುನೀತ್ ಗೋಯಂಕಾ ಹೇಳಿದ್ದಾರೆ.

ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಕೆಟ್ಟುಹೋದ ವಸ್ತುಗಳ ದುರಸ್ತಿ ಜವಾಬ್ದಾರಿ ಯಾರದ್ದು? ಈ ಕಾನೂನು ತಿಳಿದಿರಿ

ಪುನೀತ್ ಗೋಯಂಕಾ ಅವರು ಅವ್ಯವಹಾರ ಪ್ರಕರಣವೊಂದರಲ್ಲಿ ಆರೋಪ ಎದುರಿಸುತ್ತಿದ್ದು ಕೋರ್ಟ್​ನಲ್ಲಿ ಅದರ ಪ್ರಕರಣ ಇದೆ. ಹೀಗಾಗಿ, ಸೋನಿ ಮತ್ತು ಝೀ ವಿಲೀನದ ನಂತರದ ಕಂಪನಿಗೆ ಪುನೀತ್ ಗೋಯಂಕಾ ಸಿಇಒ ಆಗಬಾರದು ಎಂಬುದು ಸೋನಿ ಪಟ್ಟು. ಸೋನಿ ಎಂಟರ್ಟೈನ್ಮೆಂಟ್ ಜಪಾನ್ ಮೂಲದ ಮನರಂಜನಾ ಮಾಧ್ಯಮ ಸಂಸ್ಥೆಯಾಗಿದೆ. ಭಾರತದ ವ್ಯವಹಾರಗಳನ್ನು ಝೀ ಜೊತೆ ವಿಲೀನಗೊಳಿಸಲು ಅದು ಒಪ್ಪಂದ ಮಾಡಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Tue, 20 February 24

ತಾಜಾ ಸುದ್ದಿ
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್