ಓಮನ್ ಜೊತೆಗಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಭಾರತಕ್ಕೆ ಆಗುವ ಲಾಭಗಳೇನು?

Benefits for India from FTA with Oman: ಓಮನ್ ದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಭಾರತ ಹಾಗು ಓಮನ್ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡಲಿದೆ. ಮಸ್ಕಟ್​ನಲ್ಲಿ ಎರಡೂ ದೇಶಗಳು ಸಮಗ್ರ ಆರ್ಥಿಕ ಸಹಕಾರ ಒಪ್ಪಂದಕ್ಕೆ ಸಹಿ ಮಾಡಲಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ಕೆಲವಾರು ದೇಶಗಳು ಹಾಗೂ ಗುಂಪುಗಳ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.

ಓಮನ್ ಜೊತೆಗಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಭಾರತಕ್ಕೆ ಆಗುವ ಲಾಭಗಳೇನು?
ಓಮನ್ ಉಪಪ್ರಧಾನಿ ಜೊತೆ ನರೇಂದ್ರ ಮೋದಿ

Updated on: Dec 18, 2025 | 1:35 PM

ನವದೆಹಲಿ, ಡಿಸೆಂಬರ್ 18: ನರೇಂದ್ರ ಮೋದಿ (Narendra Modi) ಅವರು ಇಂದು ಓಮನ್​ಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಭಾರತ ಹಾಗು ಓಮನ್ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲಿವೆ. ನಾಲ್ಕು ದಿನದ ವಿದೇಶೀ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ನಿನ್ನೆ ಓಮನ್ ರಾಜಧಾನಿ ಮಸ್ಕಟ್​ಗೆ ಹೋಗಿದ್ದಾರೆ. ಇವತ್ತು ಅಲ್ಲಿ ಎರಡೂ ದೇಶಗಳ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಅಂಕಿತ ಸಿಗುವ ನಿರೀಕ್ಷೆ ಇದೆ.

ಸಿಇಪಿಎ ಎಂಬುದು ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಓಮನ್ ದೇಶದ ಜೊತೆ ಎಫ್​​ಟಿಎ ಮಾಡಿಕೊಂಡಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಲಿದೆ. ವಿವಿಧ ದೇಶಗಳ ಅಂತಾರಾಷ್ಟ್ರೀಯ ಸಂಘಟನೆಗಳೊಂದಿಗೆ ಓಮನ್ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಆದರೆ, ವೈಯಕ್ತಿಕ ದೇಶಗಳಲ್ಲಿ ಸಿಂಗಾಪುರ ಮತ್ತು ಅಮೆರಿಕದ ಜೊತೆ ಮಾತ್ರ ಓಮನ್ ಎಫ್​ಟಿಎ ಹೊಂದಿದೆ. ಈಗ ಭಾರತದೊಂದಿಗೂ ಅದು ಒಪ್ಪಂದ ಮಾಡಿಕೊಳ್ಳುತ್ತಿರುವುದು ಗಮನಾರ್ಹ.

ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

ಓಮನ್ ದೇಶದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದರಿಂದ ಭಾರತಕ್ಕೆ ಹೆಚ್ಚಿನ ಮಾರುಕಟ್ಟೆ ಪ್ರವೇಶದ ಅವಕಾಶ ಹೆಚ್ಚುತ್ತದೆ. ಹೂಡಿಕೆಗಳು ಹೆಚ್ಚು ಹರಿದುಬರಬಹುದು. ಪ್ರಮುಖ ಸೆಕ್ಟರ್​ಗಳಲ್ಲಿ ಪರಸ್ಪರ ಸಹಕಾರ ಹೆಚ್ಚಲಿದೆ. ಭಾರತಕ್ಕೆ ತನ್ನ ರಫ್ತನ್ನು ವಿಸ್ತರಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.

ಕೆಲ ವರ್ಷಗಳಿಂದ ಹಲವು ದೇಶಗಳೊಂದಿಗೆ ಭಾರತದ ಎಫ್​ಟಿಎ

ಭಾರತವು ಯುಎಇ ಜೊತೆ 2022ರಲ್ಲಿ ಸಿಇಪಿಎ ಒಪ್ಪಂದ ಮಾಡಿಕೊಂಡಿದೆ. 2021ರಲ್ಲಿ ಮಾರಿಷಸ್, 2022ರಲ್ಲಿ ಯುಎಇ ಮತ್ತು ಆಸ್ಟ್ರೇಲಿಯಾ; 2024ರಲ್ಲಿ ಯೂರೋಪ್​ನ ಇಎಫ್​ಟಿಎ, ಯುನೈಟೆಡ್ ಕಿಂಗ್ಡಂ ದೇಶಗಳ ಜೊತೆ ಭಾರತವು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ.

ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್​ಗೆ ತಕ್ಕ ಉತ್ತರ; ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ

ಭಾರತವು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡ ಪರಿಣಾಮ, ಟ್ಯಾರಿಫ್​ಗಳು ಬಹುತೇಕ ತಗ್ಗಿವೆ. ಮಾರುಕಟ್ಟೆ ಅವಕಾಶ ಹೆಚ್ಚುತ್ತದೆ. ಹೆಚ್ಚೆಚ್ಚು ಹೂಡಿಕೆಗಳು ಆಗಮಿಸುತ್ತವೆ. ಮಾರಿಷಸ್​ನೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿರುವುದು, ಆಫ್ರಿಕ್ ಖಂಡದ ಇತರ ರಾಷ್ಟ್ರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಭಾರತಕ್ಕೆ ಸಹಕಾರಿಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Thu, 18 December 25