ಒಟಿಟಿ (ಓವರ್ ದ ಟಾಪ್) ಪ್ಲಾಟ್ಫಾರ್ಮ್ ಆದ ನೆಟ್ಫ್ಲಿಕ್ಸ್ ಇಂಡಿಯಾವು ಎಲ್ಲ ಸಬ್ಸ್ಕ್ರಿಪ್ಷನ್ಗಳ ದರವನ್ನು ಇಳಿಕೆ ಮಾಡಿದೆ. ಡಿಸ್ನಿ+ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ಹಾಗೂ ಸಬ್ಸ್ಕ್ರಿಪ್ಷನ್ ವಿಡಿಯೋ ಆನ್ ಡಿಮ್ಯಾಂಡ್ (SVOD) ಪ್ಲೇಯರ್ಸ್ ಹೋಸ್ಟ್ ಸ್ಪರ್ಧೆಯ ಹಿನ್ನೆಲೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಇಂಥ ಹೆಜ್ಜೆ ಇಟ್ಟಿದೆ. ನೆಟ್ಫ್ಲಿಕ್ಸ್ನ ಜನಪ್ರಿಯ ಯೋಜನೆಯಾದ ತಿಂಗಳಿಗೆ 199 ರೂಪಾಯಿಯದನ್ನು 149 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇನ್ನು ಬೇಸಿಕ್ ಪ್ಲಾನ್ ತಿಂಗಳಿಗೆ 499 ರೂಪಾಯಿಯ ಬದಲಿಗೆ 199 ರೂಪಾಯಿ ಆಗಿದೆ. ಸ್ಟ್ಯಾಂಡರ್ಡ್ ಪ್ಲಾನ್ ಈ ವರೆಗೆ ತಿಂಗಳಿಗೆ 649 ರೂಪಾಯಿ ಇದ್ದದ್ದು 499 ರೂ.ಗೆ ಇಳಿಕೆ ಆಗಿದೆ. ಇನ್ನು ಪ್ರೀಮಿಯಂ ಪ್ಲಾನ್ ತಿಂಗಳಿಗೆ 799 ರೂ.ನಿಂದ 649 ರೂ.ಗೆ ಇಳಿಕೆ ಮಾಡಲಾಗಿದೆ. ಇನ್ನು ನೆಟ್ಫ್ಲಿಕ್ಸ್ ಸ್ಪರ್ಧಿಗಳಾದ ಅಮೆಜಾನ್ ಪ್ರೈಮ್ ತಿಂಗಳ ಪ್ಲಾನ್ ರೂ. 129 ಇದ್ದರೆ, ವರ್ಷಕ್ಕೆ 999 ರೂ ಇದ್ದದ್ದನ್ನು 1499ಕ್ಕೆ ಹೆಚ್ಚಿಸಲಾಗಿದೆ. ಡಿಸ್ನಿ+ ಹಾಟ್ಸ್ಟಾರ್ ಶುಲ್ಕವು ಪ್ರೀಮಿಯಂ ಸೇವೆಗಳಿಗೆ ವರ್ಷಕ್ಕೆ 1499 ರೂಪಾಯಿ ಇದ್ದರೆ, ಡಿಸ್ನಿ+ಹಾಟ್ಸ್ಟಾರ್ ಮೊಬೈಲ್ ರೂ. 499 ಇದೆ.
ನೆಟ್ಫ್ಲಿಕ್ಸ್ನ ಹೊಸ ಪ್ಲಾನ್ ಅನ್ನು “ಹ್ಯಾಪಿ ನ್ಯೂ ಪ್ರೈಸಸ್” ಎಂದು ಕರೆಯುತ್ತಿದ್ದು, ಡಿಸೆಂಬರ್ 14, 2021ರಿಂದ ಜಾರಿಗೆ ಬರಲಿದೆ. ನೆಟ್ಫ್ಲಿಕ್ಸ್ ಇಂಡಿಯಾ, ಕಂಟೆಂಟ್ ಉಪಾಧ್ಯಕ್ಷರಾದ ಮೋನಿಕಾ ಶೆರ್ಗಿಲ್ ಮಾಧ್ಯಮಗಳ ಜತೆ ಮಾತನಾಡಿ, ಕಳೆದ ಮೂರು ವಾರಗಳಿಂದ ದೊಡ್ಡ ಟೈಟಲ್ಗಳನ್ನು ತರುತ್ತಿದ್ದೇವೆ. ನೆಟ್ಫ್ಲಿಕ್ಸ್ ಕ್ಯಾಲೆಂಡರ್ ಪ್ರಕಾರ, ಸರಣಿಗಳು (ಸಿರೀಸ್) ಮತ್ತು ಸಿನಿಮಾಗಳನ್ನು ನಿಯಮಿತವಾಗಿ ಹೊರತರುತ್ತಿದ್ದೇವೆ. ಈ ಕಂಟೆಂಟ್ಗಳು ದೊಡ್ಡ ಪ್ರಮಾಣದ ವೀಕ್ಷಕರಿಗಾಗಿ ಆಗಿರುವಂಥದ್ದು. ಇದೀಗ ಇನ್ನಷ್ಟು ಆಳವಾಗಿ ಮತ್ತು ಅಪಾರ ಪ್ರಮಾಣದ ವೀಕ್ಷಕರನ್ನು ತಲುಪುವ ಸಮಯ. ಮನರಂಜನೆ ಮೂಲಕ ಮೌಲ್ಯ ಸೃಷ್ಟಿಸಬೇಕು, ಆದರೆ ಅದು ಕೂಡ ಅದ್ಭುತ ಬೆಲೆಗೆ ಸಿಗಬೇಕು ಎಂದಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಆ್ಯಕ್ಷನ್ ಥ್ರಿಲ್ಲರ್ಗಳಾದ ರೆಡ್ ನೋಟಿಸ್, ದ ಹಾರ್ಡರ್ ದೇ ಫಾಲ್, ದ ಪ್ರಿನ್ಸೆಸ್ ಸ್ವಿಚ್ ಜತೆಗೆ ಭಾರತದಲ್ಲಿನ ಎರಡು ಒರಿಜಿನಲ್ ಟೈಟಲ್ ಧಮಾಕಾ, ಮೀನಾಕ್ಷಿ ಸುಂದರೇಶ್ವರ್ ನವೆಂಬರ್ನಲ್ಲಿ ಬಿಡುಗಡೆ ಆಗಿದೆ. ಆರ್.ಮಾಧವನ್ ಹಾಗೂ ಸುರ್ವಿನ್ ಚಾವ್ಲಾ ಅವರ ಡಿ ಕಪಲ್ಡ್ ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಆದ್ದರಿಂದ ಲಾಭಕ್ಕಿಂತ ಹೆಚ್ಚಾಗಿ ನೆಟ್ಫ್ಲಿಕ್ಸ್ನಿಂದ ಹೊಸ ಚಂದಾದಾರರ ಕಡೆಗೆ ಗಮನ ಹರಿಸಲಾಗುತ್ತಿದೆ.
ನೆಟ್ಫ್ಲಿಕ್ಸ್ಗೆ ಸಬ್ಸ್ಕ್ರೈಬ್ ಆಗುವುದು ಹೇಗೆ?
ಆಂಡ್ರಾಯ್ಡ್
1 ಆಂಡ್ರಾಯ್ಡ್ ಸಾಧನದಿಂದ ಸೈನ್ ಅಪ್ ಮಾಡಲು ಮೊಬೈಲ್ ಬ್ರೌಸರ್ನಿಂದ netflix.com/signupಗೆ ಭೇಟಿ ನೀಡಿ.
2. ನೀವು Google Play ಸ್ಟೋರ್ನಿಂದ Netflix ಅಪ್ಲಿಕೇಷನ್ ಹೊಂದಿದ್ದರೆ ಅಪ್ಲಿಕೇಷನ್ನಿಂದ ಸೈನ್-ಅಪ್ ಅನ್ನು ಪ್ರಾರಂಭಿಸಬಹುದು.
3. ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ.
4. Netflix Android ಅಪ್ಲಿಕೇಷನ್ ಅನ್ನು ಬಳಸುತ್ತಿದ್ದರೆ ಮೊಬೈಲ್ ಬ್ರೌಸರ್ ಅನ್ನು ಬಳಸಿಕೊಂಡು Netflix.com ನಲ್ಲಿ ಸೈನ್-ಅಪ್ ಪೂರ್ಣಗೊಳಿಸಲು ಲಿಂಕ್ನೊಂದಿಗೆ ನೀವು Netflixನಿಂದ ಇಮೇಲ್ ಸ್ವೀಕರಿಸಬಹುದು.
5. ಸೂಕ್ತವಾದ ಯೋಜನೆಯನ್ನು ಆರಿಸಿ. ನೀವು ಯಾವುದೇ ಸಮಯದಲ್ಲಿ ಡೌನ್ಗ್ರೇಡ್ ಮಾಡಬಹುದು ಅಥವಾ ಅಪ್ಗ್ರೇಡ್ ಮಾಡಬಹುದು.
6. ಪಾವತಿ ವಿಧಾನವನ್ನು ನಮೂದಿಸಿ.
ಕಂಪ್ಯೂಟರ್
1. netflix.com/signupಗೆ ಭೇಟಿ ನೀಡಿ.
2. ಸೂಕ್ತವಾದ ಯೋಜನೆಯನ್ನು ಆರಿಸಿ. ನೀವು ಯಾವಾಗ ಬೇಕಾದರೂ ಡೌನ್ಗ್ರೇಡ್ ಮಾಡಬಹುದು ಅಥವಾ ಅಪ್ಗ್ರೇಡ್ ಮಾಡಬಹುದು.
3. ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ.
4. ಪಾವತಿ ವಿಧಾನವನ್ನು ನಮೂದಿಸಿ.
ಐಫೋನ್, ಐಪ್ಯಾಡ್ ಅಥವಾ ಐಪಾಡ್ ಟಚ್
1. ಮೊಬೈಲ್ ಬ್ರೌಸರ್ನಿಂದ netflix.com/signupಗೆ ಭೇಟಿ ನೀಡಿ.
ಗಮನಿಸಿ: Netflix iOS ಅಪ್ಲಿಕೇಶನ್ನಲ್ಲಿ ಸೈನ್ ಅಪ್ ಸಪೋರ್ಟ್ ಮಾಡಲ್ಲ
2. ಸೂಕ್ತವಾದ ಯೋಜನೆಯನ್ನು ಆರಿಸಿ. ಯಾವಾಗ ಬೇಕಾದರೂ ಡೌನ್ಗ್ರೇಡ್ ಮಾಡಬಹುದು ಅಥವಾ ಅಪ್ಗ್ರೇಡ್ ಮಾಡಬಹುದು.
3. ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ.
4. ಪಾವತಿ ವಿಧಾನವನ್ನು ನಮೂದಿಸಿ.
5. iOS 13.0 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಸಾಧನದಲ್ಲಿ Netflix ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮತ್ತು ಸೈನ್ ಇನ್ ಮಾಡಿ.
ಸ್ಮಾರ್ಟ್ ಟಿವಿ ಮತ್ತು ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ಗಳು
1. ನೆಟ್ಫ್ಲಿಕ್ಸ್ ಅಪ್ಲಿಕೇಷನ್ ತೆರೆಯಿರಿ.
ಸೂಚನೆ: ಅಪ್ಲಿಕೇಷನ್ ಹುಡುಕಲು ಸಹಾಯ ಬೇಕಾದರೆ ಸಾಧನದ ಬ್ರ್ಯಾಂಡ್ ಹೆಸರನ್ನು (ಉದಾ. Samsung, Roku, Xbox) ನಂತರ “Netflix ಅನ್ನು ಬಳಸುವುದು”ಗಾಗಿ ನೆಟ್ಫ್ಲಿಕ್ಸ್ ಸಹಾಯ ಕೇಂದ್ರವನ್ನು ಹುಡುಕಿ. ಕೆಲವು ಸಾಧನಗಳು ತಮ್ಮ ರಿಮೋಟ್ ಕಂಟ್ರೋಲ್ನಲ್ಲಿ ನೆಟ್ಫ್ಲಿಕ್ಸ್ ಬಟನ್ ಅನ್ನು ಸಹ ಹೊಂದಿವೆ.
2. ಹೆಚ್ಚಿನ ಸ್ಮಾರ್ಟ್ ಟಿವಿಗಳು ಮತ್ತು ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ಗಳಲ್ಲಿ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ಒದಗಿಸುವ ಮೂಲಕ ಪ್ರಾರಂಭಿಸಬೇಕಾಗುತ್ತದೆ.
– ಒಮ್ಮೆ ಒದಗಿಸಿದ ನಂತರ ಸೈನ್ಅಪ್ ಹರಿವನ್ನು ಮುಂದುವರಿಸಲು ಸಕ್ರಿಯಗೊಳಿಸುವ ಲಿಂಕ್ನೊಂದಿಗೆ ಇಮೇಲ್ ಅಥವಾ SMS ಟೆಕ್ಸ್ಟ್ ಸಂದೇಶವನ್ನು ಸ್ವೀಕರಿಸುತ್ತೀರಿ.
3. ಸೂಕ್ತವಾದ ಯೋಜನೆಯನ್ನು ಆರಿಸಿ. ಯಾವಾಗ ಬೇಕಾದರೂ ಡೌನ್ಗ್ರೇಡ್ ಮಾಡಬಹುದು ಅಥವಾ ಅಪ್ಗ್ರೇಡ್ ಮಾಡಬಹುದು.
4. ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ.
5. ಪಾವತಿ ವಿಧಾನವನ್ನು ನಮೂದಿಸಿ.
ಸೆಟ್-ಟಾಪ್ ಬಾಕ್ಸ್
1. ನೆಟ್ಫ್ಲಿಕ್ಸ್ ಅಪ್ಲಿಕೇಷನ್ ತೆರೆಯಿರಿ.
ಸೂಚನೆ: ಅಪ್ಲಿಕೇಷನ್ ಹುಡುಕಲು ಸಹಾಯ ಬೇಕಾದರೆ ನಿಮ್ಮ ಸಾಧನದ ಬ್ರ್ಯಾಂಡ್ ಹೆಸರನ್ನು (ಉದಾ. Samsung, Roku, Xbox) ನಂತರ “Netflix ಅನ್ನು ಬಳಸುವುದು”ಗಾಗಿ ನೆಟ್ಫ್ಲಿಕ್ಸ್ ಹೆಲ್ಪ್ ಸೆಂಟರ್ ಹುಡುಕಿ. ಕೆಲವು ಸಾಧನಗಳು ತಮ್ಮ ರಿಮೋಟ್ ಕಂಟ್ರೋಲ್ನಲ್ಲಿ ನೆಟ್ಫ್ಲಿಕ್ಸ್ ಬಟನ್ ಅನ್ನು ಸಹ ಹೊಂದಿವೆ.
2. ಸೂಕ್ತವಾದ ಯೋಜನೆಯನ್ನು ಆರಿಸಿ. ಯಾವಾಗ ಬೇಕಾದರೂ ಡೌನ್ಗ್ರೇಡ್ ಮಾಡಬಹುದು ಅಥವಾ ಅಪ್ಗ್ರೇಡ್ ಮಾಡಬಹುದು.
3. ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಪಾಸ್ವರ್ಡ್ ಹಾಕುವ ಮೂಲಕ ಖಾತೆಯನ್ನು ಸೃಷ್ಟಿಸಿ.
4. ಪಾವತಿ ವಿಧಾನವನ್ನು ನಮೂದಿಸಿ.
ಇದನ್ನೂ ಓದಿ: Money Heist 5: ಉದ್ಯೋಗಿಗಳಿಗೆ ನೆಟ್ಫ್ಲಿಕ್ಸ್ ಸಬ್ಸ್ಕ್ರಿಪ್ಶನ್ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ