India Exports: ಒಟ್ಟಾರೆ ಮಾರುಕಟ್ಟೆ ವಸ್ತುಗಳು ಮತ್ತು ಸೇವೆಗಳ ರಫ್ತು 2022ರ ಮೇ ತಿಂಗಳಲ್ಲಿ ಶೇ 24ರಷ್ಟು ಜಿಗಿತ

| Updated By: Srinivas Mata

Updated on: Jun 15, 2022 | 5:01 PM

ಭಾರತದ ಒಟ್ಟಾರೆ ಮಾರುಕಟ್ಟೆ ವಸ್ತುಗಳು ಹಾಗೂ ಸೇವಾ ರಫ್ತು 2022ರ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದ ಜಿಗಿತವನ್ನು ದಾಖಲಿಸಿದೆ.

India Exports: ಒಟ್ಟಾರೆ ಮಾರುಕಟ್ಟೆ ವಸ್ತುಗಳು ಮತ್ತು ಸೇವೆಗಳ ರಫ್ತು 2022ರ ಮೇ ತಿಂಗಳಲ್ಲಿ ಶೇ 24ರಷ್ಟು ಜಿಗಿತ
ಸಾಂದರ್ಭಿಕ ಚಿತ್ರ
Follow us on

ಮೇ 2022*ರಲ್ಲಿ ಭಾರತದ ಒಟ್ಟಾರೆ ರಫ್ತುಗಳು (ಮಾರುಕಟ್ಟೆ ವಸ್ತುಗಳು ಮತ್ತು ಸೇವೆಗಳು ಸೇರಿ) ಯುಎಸ್​ಡಿ 62.21 ಶತಕೋಟಿ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 24.03ರಷ್ಟು ಪಾಸಿಟಿವ್ ಬೆಳವಣಿಗೆ ಆಗಿದೆ. ಮೇ 2022ರಲ್ಲಿ ಸರಕು ರಫ್ತು (Export) ಯುಎಸ್​ಡಿ 38.94 ಬಿಲಿಯನ್ ಆಗಿದ್ದು, ಅದೇ ಮೇ 2021ರಲ್ಲಿ ಯುಎಸ್​ಡಿ 32.30 ಶತಕೋಟಿ ಆಗಿತ್ತು. ಆ ಮೂಲಕ ಶೇ 20.55 ಪಾಸಿಟಿವ್ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಮೇ 2022*ರ ಸೇವಾ ರಫ್ತಿನ ಅಂದಾಜು ಮೌಲ್ಯ ಯುಎಸ್​ಡಿ 23.28 ಬಿಲಿಯನ್ ಆಗಿದ್ದು, ಮೇ 2021ಕ್ಕೆ ಹೋಲಿಸಿದರೆ ಶೇ 30.32 ಪಾಸಿಟಿವ್ ಬೆಳವಣಿಗೆಯನ್ನು ಪ್ರದರ್ಶಿಸಿದೆ (ಆಗ ಯುಎಸ್​ಡಿ 17.86 ಬಿಲಿಯನ್).

ಏಪ್ರಿಲ್-ಮೇ 2022*ರಲ್ಲಿ ಭಾರತದ ಒಟ್ಟಾರೆ ರಫ್ತುಗಳು (ಮಾರುಕಟ್ಟೆ ವಸ್ತುಗಳು ಮತ್ತು ಸೇವೆಗಳು ಸೇರಿ) ಯುಎಸ್​ಡಿ 124.59 ಶತಕೋಟಿ ಎಂದು ಅಂದಾಜಿಸಲಾಗಿದ್ದು, ಕಳೆದ ಬಾರಿ ಇದೇ ಅವಧಿಗೆ ಹೋಲಿಸಿದರೆ ಶೇ 25.90ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಏಪ್ರಿಲ್-ಮೇ 2022ರ ಅವಧಿಗೆ ಸರಕು ರಫ್ತು ಯುಎಸ್​ಡಿ 78.72 ಬಿಲಿಯನ್ ಆಗಿದ್ದು, ಏಪ್ರಿಲ್-ಮೇ 2021ರ ಅವಧಿಯಲ್ಲಿ ಆದ ಯುಎಸ್​ಡಿ 63.05 ಶತಕೋಟಿಗೆ ಹೋಲಿಸಿದರೆ ಶೇ 24.86ರಷ್ಟು ಪಾಸಿಟಿವ್ ಬೆಳವಣಿಗೆಯನ್ನು ದಾಖಲಿಸಿದೆ. ಏಪ್ರಿಲ್-ಮೇ 2022*ರ ಅಂದಾಜು ಮೌಲ್ಯದ ಸೇವೆಗಳ ರಫ್ತು ಯುಎಸ್​ಡಿ 45.87 ಬಿಲಿಯನ್ ಆಗಿದ್ದು, ಇದು ಏಪ್ರಿಲ್-ಮೇ 2021ಕ್ಕೆ ಹೋಲಿಸಿದರೆ ಶೇ 27.71ರ ಪಾಸಿಟಿವ್ ಬೆಳವಣಿಗೆಯನ್ನು ಪ್ರದರ್ಶಿಸಿದೆ (ಯುಎಸ್​ಡಿ 35.92 ಬಿಲಿಯನ್).

ಮೇ 2022*ರಲ್ಲಿ ಒಟ್ಟಾರೆ ಆಮದು (ಮಾರುಕಟ್ಟೆ ವಅ್ತುಗಳು ಮತ್ತು ಸೇವೆಗಳು ಸೇರಿ) ಯುಎಸ್​ಡಿ 77.65 ಶತಕೋಟಿ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 59.19ರಷ್ಟು ಪಾಸಿಟಿವ್ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಏಪ್ರಿಲ್-ಮೇ 2022*ರಲ್ಲಿ ಒಟ್ಟಾರೆ ಆಮದು ಯುಎಸ್​ಡಿ 151.89 ಶತಕೋಟಿ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 45.44ರಷ್ಟು ಪಾಸಿಟಿವ್ ಬೆಳವಣಿಗೆಯನ್ನು ದಾಖಲಿಸಿದೆ.

(* ಗಮನಿಸಿ: ಆರ್‌ಬಿಐನಿಂದ ಬಿಡುಗಡೆಯಾದ ಇತ್ತೀಚಿನ ಡೇಟಾವು ಏಪ್ರಿಲ್ 2022ಕ್ಕೆ ಆಗಿದೆ. ಮೇ 2022ರ ಡೇಟಾವು ಅಂದಾಜು ಆಗಿದ್ದು, ಇದನ್ನು ಆರ್‌ಬಿಐನ ನಂತರದ ಬಿಡುಗಡೆಯ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. (ii) ಏಪ್ರಿಲ್-ಮೇ 2021ರ ಡೇಟಾವನ್ನು ತ್ರೈಮಾಸಿಕ ಪಾವತಿಗಳ ಬ್ಯಾಲೆನ್ಸ್ ಡೇಟಾವನ್ನು ಬಳಸಿಕೊಂಡು ಅನುಪಾತದ ಆಧಾರದ ಮೇಲೆ ಪರಿಷ್ಕರಿಸಲಾಗಿದೆ.)

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: India’s first ever missile export: ಫಿಲಿಪೈನ್ಸ್​ಗೆ ರೂ. 2789 ಕೋಟಿ ಮೌಲ್ಯಕ್ಕೆ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ರಫ್ತು

Published On - 5:01 pm, Wed, 15 June 22