
ನವದೆಹಲಿ, ಜನವರಿ 8: ಪಾಕಿಸ್ತಾನದಲ್ಲಿ (Pakistan) ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಬಹಳ ಕಡಿಮೆ ಇದೆ. ಒಂದು ಅಂದಾಜು ಪ್ರಕಾರ ಅಲ್ಲಿ ನೊಂದಾಯಿತ ತೆರಿಗೆ ಪಾವತಿದಾರರ ಸಂಖ್ಯೆ ಸುಮಾರು 60 ಲಕ್ಷ ಆಸುಪಾಸು ಇರಬಹುದು. ಅದರಲ್ಲಿ ಅಧಿಕ ಆದಾಯ ತೋರಿಸಿರುವವರ ಸಂಖ್ಯೆ ಬಹಳ ಕಡಿಮೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಾಸಿಕ ಆದಾಯ ಹೊಂದಿರುವ ಪಾಕಿಸ್ತಾನೀಯರ ಸಂಖ್ಯೆ 4 ಲಕ್ಷದಿಂದ 10 ಲಕ್ಷದಷ್ಟಿರಬಹುದು ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಸರಾಸರಿ ಸಂಬಳ 39,000 ಪಿಕೆಆರ್ ಇದೆ. ಭಾರತೀಯ ರುಪಾಯಿಯಲ್ಲಿ ಪಾಕಿಸ್ತಾನದ ಸರಾಸರಿ ಮಾಸಿಕ ಸಂಬಳ ಸುಮಾರು 12,500 ರೂ ಆಗುತ್ತದೆ. ಭಾರತದ ಒಂದು ಲಕ್ಷ ರೂ ಪಾಕಿಸ್ತಾನದ 3.30 ಲಕ್ಷ ರೂಗೆ ಸಮ. ಪ್ರತೀ ಸಾವಿರ ಮಂದಿಯಲ್ಲಿ ಮೂರ್ನಾಲ್ಕು ಜನರು ಮಾತ್ರ ಇಷ್ಟು ಸಂಬಳ ಪಡೆಯುತ್ತಾರೆ.
ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?
ಪಾಕಿಸ್ತಾನದಲ್ಲಿ ಟ್ಯಾಕ್ಸ್ ಸಿಸ್ಟಂ ಇನ್ನೂ ಬಲಿಷ್ಠವಾಗಿಲ್ಲ. ಬಹಳ ಜನರು ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ತಮ್ಮ ನೈಜ ಆದಾಯವನ್ನು ಬಚ್ಚಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.
ಭಾರತದಲ್ಲಿರುವಂತೆ ಪಾಕಿಸ್ತಾನದಲ್ಲೂ ಆದಾಯ ತೆರಿಗೆಗೆ ವಿವಿಧ ಸ್ಲ್ಯಾಬ್ ರೇಟ್ಗಳಿವೆ. 6 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. 41 ಲಕ್ಷ ರೂವರೆಗಿನ ಆದಾಯಕ್ಕೆ 7 ಲಕ್ಷ ರೂವರೆಗೆ ಟ್ಯಾಕ್ಸ್ ಇದೆ. 41 ಲಕ್ಷ ರೂ ಮೇಲ್ಪಟ್ಟ ವಾರ್ಷಿಕ ಆದಾಯಕ್ಕೆ ಶೇ. 35ರಷ್ಟು ಟ್ಯಾಕ್ಸ್ ಇರುತ್ತದೆ.
ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು
ಭಾರತದಲ್ಲಿ ನೊಂದಾಯಿತ ತೆರಿಗೆ ಪಾವತಿದಾರರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಸುಮಾರು 9 ಕೋಟಿ ಸಂಖ್ಯೆಯಷ್ಟು ರಿಜಿಸ್ಟರ್ಡ್ ಟ್ಯಾಕ್ಸ್ ಪೇಯರ್ಸ್ ಭಾರತದಲ್ಲಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ 2024-25ರಲ್ಲಿ ಹತ್ತಿರಹತ್ತಿರ 13 ಲಕ್ಷ ಕೋಟಿ ರೂನಷ್ಟು ಸಂಗ್ರಹವಾಗಿತ್ತು. ಕಾರ್ಪೊರೇಟ್ ಟ್ಯಾಕ್ಸ್ ಕೂಡ ಸೇರಿಸಿದರೆ ಒಟ್ಟು ನೇರ ತೆರಿಗೆ ಸಂಗ್ರಹ ಆ ವರ್ಷ 25 ಲಕ್ಷ ಕೋಟಿ ರೂ ಮೀರಿದೆ.
ಪಾಕಿಸ್ತಾನದಲ್ಲಿ ಸುಮಾರು 10 ಲಕ್ಷ ಕೋಟಿ ಪಿಕೆಆರ್ನಷ್ಟು ನೇರ ತೆರಿಗೆ ಸಂಗ್ರಹ ಇದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಸುಮಾರು 3 ಲಕ್ಷ ಕೋಟಿ ರೂ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ