ಅಕ್ಟೋಬರ್​ನಲ್ಲಿ ಕಾರುಗಳ ಮಾರಾಟದಲ್ಲಿ ಹೆಚ್ಚಳ; ಗರಿಗೆದರಿದ ಆಟೊಮೊಬೈಲ್ ಉದ್ಯಮ

Car sales in 2024 October: ಅಕ್ಟೋಬರ್ ತಿಂಗಳಲ್ಲಿ ಪ್ಯಾಸೆಂಜರ್ ವಾಹನಗಳ ರೀಟೇಲ್ ಮಾರಾಟ ಭರ್ಜರಿಯಾಗಿ ಏರಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ದೇಶಾದ್ಯಂತ 4 ಲಕ್ಷಕ್ಕೂ ಹೆಚ್ಚು ಪಿವಿಗಳ ಸೇಲ್ ಆಗಿದೆ. ಇದರಲ್ಲಿ ಮಾರುತಿ ಸುಜುಕಿಯ ಪಾಲೇ ಎರಡು ಲಕ್ಷಕ್ಕೂ ಹೆಚ್ಚಿದೆ. ಎಸ್​ಯುವಿಗಳ ಮಾರಾಟದಲ್ಲೂ ಮಾರುತಿ ಸುಜುಕಿ ಮುಂದಿದೆಯಾದರೂ ಮಹೀಂದ್ರ ಅಂಡ್ ಮಹೀಂದ್ರ ಎಸ್​ಯುವಿಗಳ ಮಾರಾಟದಲ್ಲಿ ಶೇ. 25ರಷ್ಟು ಹೆಚ್ಚಳವಾಗಿದೆ.

ಅಕ್ಟೋಬರ್​ನಲ್ಲಿ ಕಾರುಗಳ ಮಾರಾಟದಲ್ಲಿ ಹೆಚ್ಚಳ; ಗರಿಗೆದರಿದ ಆಟೊಮೊಬೈಲ್ ಉದ್ಯಮ
ಎಸ್​ಯುವಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2024 | 3:50 PM

ನವದೆಹಲಿ, ನವೆಂಬರ್ 3: ಹಬ್ಬದ ಋತುವಿನಲ್ಲಿ ಡಿಸ್ಕೌಂಟ್ ಇತ್ಯಾದಿ ಆಕರ್ಷಣೆ ದೆಸೆಯಿಂದಾಗಿ ವಾಹನಗಳ ಮಾರಾಟ ಪ್ರಮಾಣ ಹೆಚ್ಚಾಗಿದೆ. ದ್ವಿಚಕ್ರ ವಾಹನ ಮತ್ತು ಕಾರುಗಳ ರೀಟೇಲ್ ಮಾರಾಟ ಅಕ್ಟೋಬರ್​ನಲ್ಲಿ ಗಣನೀಯವಾಗಿ ಹೆಚ್ಚಿದೆ. ಆದರೆ, ರೀಟೇಲ್ ಮಳಿಗೆಗಳಿಗೆ ವಾಹನಗಳ ಸರಬರಾಜು ಪ್ರಮಾಣದಲ್ಲಿ ಅಲ್ಪ ಹೆಚ್ಚಳವಾಗಿದೆ. ವರದಿ ಪ್ರಕಾರ ಕಾರುಗಳ ಹೋಲ್​ಸೇಲ್ ಮಾರಾಟ ಪ್ರಮಾಣ 4,01,447 ಯುನಿಟ್ ಇದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಇದರ ಮಾರಾಟದಲ್ಲಿ ಹೆಚ್ಚಳ ಆಗಿರುವುದು ಶೇ. 1.8 ಮಾತ್ರ. ಆಟೊಮೊಬೈಲ್ ಕಂಪನಿಗಳು ಸರಕು ಸಂಗ್ರಹ ತಗ್ಗಿಸುವ ಉದ್ದೇಶದಿಂದ ಮುಂಗಡವಾಗಿ ಕಾರು ತಯಾರಿಕೆಯನ್ನು ಕಡಿಮೆ ಮಾಡಿದೆ. ಪರಿಣಾಮವಾಗಿ, ರೀಟೇಲ್ ಮಳಿಗೆಗಳಿಗೆ ಕಾರುಗಳ ಸರಬರಾಜು ಪ್ರಮಾಣದಲ್ಲಿ ಹೆಚ್ಚೇನೂ ಏರಿಕೆ ಆಗಿಲ್ಲ.

ಆದರೆ, ರೀಟೇಲ್ ಮಳಿಗೆಗಳಲ್ಲಿ ಕಾರುಗಳ ಮಾರಾಟ ಅಕ್ಟೋಬರ್​ನಲ್ಲಿ ಏರಿದೆ. ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ದೇಶದ ಅಗ್ರಗಣ್ಯ ಸಂಸ್ಥೆಯಾದ ಮಾರುತಿ ಸುಜುಕಿ ಅಕ್ಟೋಬರ್​ನಲ್ಲಿ 2,02,402 ಯೂನಿಟ್​ಗಳನ್ನು ಮಾರಾಟ ಮಾಡಿದೆ. ಇದು ಯಾವುದೇ ತಿಂಗಳಲ್ಲಿ ಭಾರತೀಯ ಸಂಸ್ಥೆಯೊಂದು ಮಾರಿದ ಗರಿಷ್ಠ ಪ್ಯಾಸೆಂಜರ್ ವಾಹನಗಳ ಸಂಖ್ಯೆ. ಮಾರುತಿಯ ರೀಟೇಲ್ ಮಾರಾಟ ಸಂಖ್ಯೆ 1,59,591 ಇದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಭಾರತದಲ್ಲಿ ಕಲ್ಲಿದ್ದಲು, ಕಬ್ಬಿಣ ಅದಿರು ಉತ್ಪಾದನೆ, ವಿದ್ಯುತ್ ಬಳಕೆ ಹೆಚ್ಚಳ; ಪ್ರಬಲ ಆರ್ಥಿಕತೆಯ ಸೂಚಕ

ಟೊಯೊಟಾ, ಕಿಯಾ ಮೋಟಾರ್ಸ್, ಮಹೀಂದ್ರ ಅಂಡ್ ಮಹೀಂದ್ರಾ ಸಂಸ್ಥೆಗಳು ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಶೇ. 25ರಿಂದ 41ರಷ್ಟು ಹೆಚ್ಚಳ ಕಂಡಿವೆ.

ಅಕ್ಟೋಬರ್​ನಲ್ಲಿ ಅತಿಹೆಚ್ಚು ಪ್ಯಾಸೆಂಜರ್ ವಾಹನ ಮಾರಿದ ಸಂಸ್ಥೆಗಳು

  1. ಮಾರುತಿ ಸುಜುಕಿ: 1,59,591 ಯುನಿಟ್
  2. ಹ್ಯುಂಡೈ: 55,568
  3. ಮಹೀಂದ್ರ ಅಂಡ್ ಮಹೀಂದ್ರ: 54,504
  4. ಟಾಟಾ ಮೋಟಾರ್ಸ್: 48,131
  5. ಟೊಯೊಟಾ: 30,845
  6. ಕಿಯಾ: 28,545

ಇದನ್ನೂ ಓದಿ: ಅಕ್ಟೋಬರ್​ನಲ್ಲಿ 1.87 ಲಕ್ಷ ಕೋಟಿ ರೂ ಮೊತ್ತದ ಜಿಎಸ್​ಟಿ ಸಂಗ್ರಹ; ಆರು ತಿಂಗಳಲ್ಲೇ ಗರಿಷ್ಠ ಮಟ್ಟ

ಎಸ್​ಯುವಿ ಕಾರುಗಳ ಮಾರಾಟದಲ್ಲಿ ಸಖತ್ ಏರಿಕೆ

ಪ್ಯಾಸೆಂಜರ್ ವಾಹನ ಮಾರುಕಟ್ಟೆಯಲ್ಲಿ ಎಸ್​ಯುವಿಗಳ ಮಾರಾಟ ಭರ್ಜರಿಯಾಗಿದೆ. ಸಣ್ಣ ಕಾರುಗಳಿಗಿಂತ ಎಸ್​ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಿದಂತಿದೆ. ಎಸ್​ಯುವಿ ಮಾರಾಟದಲ್ಲಿ ಮಾರುತಿ ಸುಜುಕಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಮಹೀಂದ್ರ ಅಂಡ್ ಮಹೀಂದ್ರ 54,000ಕ್ಕೂ ಹೆಚ್ಚು ಎಸ್​ಯುವಿಗಳನ್ನು ಮಾರಾಟ ಮಾಡಿದೆ. ಯಾವುದೇ ತಿಂಗಳಲ್ಲಿ ಮಹೀಂದ್ರ ಕಾರುಗಳ ಅತಿಹೆಚ್ಚು ಮಾರಾಟವಾದ ದಾಖಲೆ ಅದು. ಥಾರ್ ರಾಕ್ಸ್ ಎನ್ನುವ ಹೊಸ ಮಾಡಲ್​ನಿಂದಾಗಿ ಮಹೀಂದ್ರ ಕಾರುಗಳ ಮಾರಾಟ ಭರ್ಜರಿಯಾಗಿ ನಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್