FASTag: ಇನ್ನೂ ಪೇಟಿಎಂ ಫಾಸ್​ಟ್ಯಾಗ್ ಬಳಸುತ್ತಿದ್ದೀರಾ? ಕೂಡಲೇ ಬೇರೆ ಟ್ಯಾಗ್ ಖರೀದಿಸಿ

|

Updated on: Mar 13, 2024 | 4:50 PM

PayTM FASTag Users: ಪೇಟಿಎಂ ಫಾಸ್​ಟ್ಯಾಗ್ ಬಳಕೆದಾರರು ಮಾರ್ಚ್ 15ರೊಳಗೆ ಬೇರೆ ಬ್ಯಾಂಕುಗಳಿಂದ ಫಾಸ್​ಟ್ಯಾಗ್ ಪಡೆಯಬೇಕೆಂದು ಸೂಚಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಹೇಳಿಕೆ ನೀಡಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್​ಟ್ಯಾಗ್​ಗೆ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಮೊದಲೇ ರೀಚಾರ್ಜ್ ಮಾಡಿದ ಹಣ ಇದ್ದರೆ ಅದನ್ನು ಬಳಸಬಹುದು. ಆದರೆ, ಹೊಸದಾಗಿ ಖಾತೆಗೆ ಹಣ ಸೇರಿಸಲಾಗುವುದಿಲ್ಲ.

FASTag: ಇನ್ನೂ ಪೇಟಿಎಂ ಫಾಸ್​ಟ್ಯಾಗ್ ಬಳಸುತ್ತಿದ್ದೀರಾ? ಕೂಡಲೇ ಬೇರೆ ಟ್ಯಾಗ್ ಖರೀದಿಸಿ
ಪೇಟಿಎಂ ಫಾಸ್​ಟ್ಯಾಗ್
Follow us on

ಪೇಟಿಎಂ ಫಾಸ್​ಟ್ಯಾಗ್ (Paytm FASTag) ಬಳಸುತ್ತಿರುವವರು ಬೇರೆ ಬ್ಯಾಂಕುಗಳಿಂದ ಫಾಸ್​ಟ್ಯಾಗ್ ಖರೀದಿಸಬೇಕೆಂದು ಹೆದ್ದಾರಿ ಪ್ರಾಧಿಕಾರ (NHAI) ಹೇಳುತ್ತಲೇ ಬಂದಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್​ಟ್ಯಾಗ್​ ಖಾತೆಗೆ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್​ನಿಂದ ಫಾಸ್​ಟ್ಯಾಗ್ ಪಡೆಯುವಂತೆ ಎನ್​ಎಚ್​ಎಐ ಮತ್ತೊಮ್ಮೆ ಅಧಿಕೃತವಾಗಿ ಸೂಚನೆ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ಅದರ ಫಾಸ್​ಟ್ಯಾಗ್​ಗೂ ಪರಿಣಾಮ ಬಿದ್ದಿದೆ. ಪೇಟಿಎಂನ ಫಾಸ್​ಟ್ಯಾಗ್ ಪೇಮೆಂಟ್ಸ್ ಬ್ಯಾಂಕ್​ಗೆ ಜೋಡಿತವಾಗಿರುವುದರಿಂದ ಅದಕ್ಕೂ ನಿರ್ಬಂಧ ಅನ್ವಯ ಆಗುತ್ತದೆ.

ಮಾರ್ಚ್ 15ರೊಳಗೆ ಬೇರೆ ಫಾಸ್​ಟ್ಯಾಗ್ ತೆಗೆದುಕೊಳ್ಳದಿದ್ದರೆ ಏನಾಗುತ್ತದೆ?

ನಿಮ್ಮಲ್ಲಿ ಪೇಟಿಎಂ ಫಾಸ್​ಟ್ಯಾಗ್ ಇದ್ದು, ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್​ನ ಫಾಸ್​ಟ್ಯಾಗ್ ಪಡೆಯಬೇಕಾಗುತ್ತದೆ. ಮಾರ್ಚ್ 15ರ ನಂತರ ಅದು ನಿಷ್ಕ್ರಿಯಗೊಳ್ಳುವುದಿಲ್ಲ. ಆ ಖಾತೆಯಲ್ಲಿ ಹಣ ಇದ್ದರೆ ಅದು ಮುಗಿಯುವವರೆಗೂ ಬಳಸಬಹುದು. ಮಾರ್ಚ್ 15ರ ಬಳಿಕ ಹೊಸದಾಗಿ ಹಣ ಸೇರಿಸಲಾಗುವುದಿಲ್ಲ, ರೀಚಾರ್ಜ್ ಮಾಡಲಾಗುವುದಿಲ್ಲ.

ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹೇರಿದ ಬಳಿಕ ಪೇಟಿಎಂ ಸಂಸ್ಥೆ ಕೂಡ ತನ್ನ ಫಾಸ್​ಟ್ಯಾಗ್ ಗ್ರಾಹಕರಿಗೆ ಬೇರೆ ಟ್ಯಾಗ್ ಪಡೆಯುವಂತೆ ಸಲಹೆ ನೀಡುತ್ತಲೇ ಬಂದಿದೆ.

ಫಾಸ್​ಟ್ಯಾಗ್ ಎಂದರೇನು?

ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆಂದು ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ನೀಡಲಾಗುವ ಪ್ರೀಪೇಯ್ಡ್ ಯಂತ್ರ. ರೇಡಿಯೋ ಫ್ರೀಕ್ವೆನ್ಸಿ ಐಡಿ ತಂತ್ರಜ್ಞಾನ ಬಳಸಲಾಗುತ್ತದೆ. ಫಾಸ್​ಟ್ಯಾಗ್ ಖಾತೆಗೆ ಎಷ್ಟಾದರೂ ಹಣವನ್ನು ಮುಂಚಿತವಾಗಿ ರೀಚಾರ್ಜ್ ಮಾಡಬಹುದು. ಹೆದ್ದಾರಿಯಲ್ಲಿ ಟೋಲ್ ಬೂತ್ ಸಮೀಪ ಸ್ವಯಂಚಾಲಿತವಾಗಿ ಫಾಸ್​ಟ್ಯಾಗ್ ಮೂಲಕ ಟೋಲ್ ಹಣ ಕಡಿತವಾಗುತ್ತದೆ.

ಇದನ್ನೂ ಓದಿ: ಬಚ್ಚನ್ ಪಕ್ಕದ ಮನೆ ಮಾರಾಟಕ್ಕೆ; ಸಾಲ ಕಟ್ಟಿಲ್ಲ ಎಂದು ಬಂಗಲೆ ಹರಾಜು; ಮೂಲ ಬೆಲೆ 25 ಕೋಟಿ ರೂ

ಫಾಸ್​ಟ್ಯಾಗ್ ಎಲ್ಲಿ ಪಡೆಯಬಹುದು?

ಹೆದ್ದಾರಿ ಪ್ರಾಧಿಕಾರವು ಪ್ರಮುಖ 37 ಬ್ಯಾಂಕುಗಳಿಗೆ ಫಾಸ್​ಟ್ಯಾಗ್ ನೀಡಲು ಅನುಮತಿಸಿದೆ. ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಹೀಗೆ ಎಲ್ಲಾ ಪ್ರಮುಖ ಬ್ಯಾಂಕುಗಳ ಮೂಲಕ ಫಾಸ್​ಟ್ಯಾಗ್ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ