Paytm share price: ಪೇಟಿಎಂ ಷೇರಿನ ಬೆಲೆ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 990 ರೂಪಾಯಿಗೆ ಕುಸಿತ

ಪೇಟಿಎಂ ಬ್ರ್ಯಾಂಡ್​ನ ಮಾತೃ ಸಂಸ್ಥೆಯಾದ ಒನ್​97 ಕಮ್ಯುನಿಕೇಷನ್ಸ್ ಜನವರಿ 19ನೇ ತಾರೀಕಿನ ಬುಧವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 990 ರೂಪಾಯಿ ಮುಟ್ಟಿದೆ. ಈ ಷೇರನ್ನು ಐಪಿಒದಲ್ಲಿ 2150 ರೂಪಾಯಿಗೆ ವಿತರಿಸಲಾಗಿತ್ತು.

Paytm share price: ಪೇಟಿಎಂ ಷೇರಿನ ಬೆಲೆ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 990 ರೂಪಾಯಿಗೆ ಕುಸಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 19, 2022 | 8:21 PM

ಪೇಟಿಎಂ (Paytm) ಬ್ರ್ಯಾಂಡ್​ನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ (One97 Communications) ಜನವರಿ 19ನೇ ತಾರೀಕಿನ ಬುಧವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟ 990 ರುಪಾಯಿ ಮುಟ್ಟಿದ್ದು, ದುರ್ಬಲ ಮಾರುಕಟ್ಟೆಯಲ್ಲಿ ಶೇಕಡಾ 5ರ ತನಕ ಕುಸಿತ ಕಂಡಿದೆ. ಕಳೆದ ಕೆಲ ಸಮಯದಿಂದಲೇ ಪೇಟಿಎಂ ಷೇರು ಇಳಿಕೆ ಹಾದಿಯಲ್ಲಿದೆ. ಕಳೆದ 12 ಟ್ರೇಡಿಂಗ್​ ಸೆಷನ್​ ಪೈಕಿ 11ರಲ್ಲಿ ಕುಸಿತ ದಾಖಲಿಸಿ, ಶೇ 26ರಷ್ಟು ದರ ಇಳಿಕೆ ಆಗಿದೆ. ಇನ್ನು ಐಪಿಒ ವಿತರಣೆ ಬೆಲೆಗೆ ಹೋಲಿಸಿ ನೋಡುವುದಾದರೆ ಶೇ 54ರಷ್ಟು ದರ ಇಳಿದಿದೆ.

ಈ ಸ್ಟಾಕ್​ ಈಗ ಮತ್ತಷ್ಟು ಆತಂಕಕ್ಕೆ ದೂಡುವಂಥ ದರವಾದ 900 ರೂಪಾಯಿಯತ್ತ ಸಾಗುತ್ತಿದೆ. ಪೇಟಿಎಂ ಲಿಸ್ಟಿಂಗ್ ಆದಾಗಲೇ ಈ ಮೊತ್ತದ ಅಂದಾಜನ್ನು ಮಾಡಲಾಗಿತ್ತು. ಒನ್​97 ಕಮ್ಯುನಿಕೇಷನ್ಸ್ ಭಾರತದ​ ಷೇರು ಮಾರುಕಟ್ಟೆಯ ಅತಿ ದೊಡ್ಡ ಐಪಿಒ ಆಗಿತ್ತು. ಎರಡು ತಿಂಗಳ ಹಿಂದೆ ಭಾರೀ ನಿರೀಕ್ಷೆಗಳೊಂದಿಗೆ ಲಿಸ್ಟಿಂಗ್ ಆಗಿತ್ತು. ಆದರೆ ಆ ನಂತರದಲ್ಲಿ ಸನ್ನಿವೇಶ ಬದಲಾಯಿತು. ಮರ್ಚೆಂಟ್ ಬ್ಯಾಂಕರ್​ಗಳಿಗೆ ಸಂಬಂಧಿಸಿದ ವಿಶ್ಲೇಷಕರು ಸಹ ಪೇಟಿಎಂ ಐಪಿಒ ದರಕ್ಕಿಂತ ಕಡಿಮೆ ಗುರಿ ಇರಿಸಿದ್ದಾರೆ.

ಸದ್ಯದ ಮಟ್ಟಿಗೆ ಸಕಾರಾತ್ಮಕವಾದ- ಏರಿಕೆ ಗುರಿ ಅಂದರೆ, ಈಗಿನ ಮಾರುಕಟ್ಟೆ ಬೆಲೆಯು ಹತ್ತಿರ ಹತ್ತಿರ ದುಪ್ಪಟ್ಟು 1,875 ರೂಪಾಯಿ ತಲುಪಬಹುದು. ಜನವರಿ 19ನೇ ತಾರೀಕಿನ ದಿನಾಂತ್ಯಕ್ಕೆ ಪೇಟಿಎಂ ಎನ್​ಎಸ್​ಇಯಲ್ಲಿ 997.35 ರೂಪಾಯಿ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ದಿನದ ಕನಿಷ್ಠ ಮಟ್ಟವಾದ 990 ರೂಪಾಯಿ ಕಂಡಿದೆ. ಈಚೆಗೆ ಕಂಪೆನಿ ಹೇಳಿರುವಂತೆ, ಸಾಲ ನೀಡುವ ವ್ಯವಹಾರದಲ್ಲಿ ಅದ್ಭುತ ಬೆಳವಣಿಗೆ ಕಂಡಿದೆ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಮಾತನಾಡಿ, ಮಾರುಕಟ್ಟೆಯು ಕಂಪೆನಿಯ ಪಾವತಿ ವ್ಯವಹಾರವನ್ನು ಕಡಿಮೆ ಅಂದಾಜು ಮಾಡುತ್ತಿದೆ ಎಂದಿದ್ದಾರೆ. ಆದರೆ ಇವ್ಯಾವುದೂ ಭಾರೀ ಇಳಿಕೆಯನ್ನು ತಡೆಯುವುದಕ್ಕೆ ಸಹಾಯ ಮಾಡಲ್ಲ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆಯಾ ಲೇಖಕರವು. ಇದಕ್ಕೂ ಟಿವಿ9ಕನ್ನಡ ಡಿಜಿಟಲ್​ಗೂ ಸಂಬಂಧ ಇಲ್ಲ. ಹಣಕಾಸಿನ ವಿಚಾರ ಆದ್ದರಿಂದ ತಜ್ಞರ ಸಲಹೆ ಪಡೆದು, ಸೂಕ್ತ ನಿರ್ಧಾರ ಕೈಗೊಳ್ಳಬೇಕು)

ಇದನ್ನೂ ಓದಿ: ಒಂದೇ ದಿನಕ್ಕೆ ಹೂಡಿಕೆದಾರರು ಬರುವುದಿಲ್ಲ: ಷೇರುಪೇಟೆಯಲ್ಲಿ ಕುಸಿತದ ನಂತರ ಪೇಟಿಎಂ ಕಾರ್ಯತಂತ್ರ ವಿವರಿಸಿದ ಸಿಇಒ ವಿಜಯ್ ಶೇಖರ್ ಶರ್ಮಾ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ