ಚೀನಾದ ಸಾಲದ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಾಂತ್ಯದಲ್ಲಿ ಜಾರಿ ನಿರ್ದೇಶನಾಲಯವು ಫಿನ್‌ಟೆಕ್ ಸಂಸ್ಥೆಯ ಬೆಂಗಳೂರು ಆವರಣದ ಮೇಲೆ ದಾಳಿ ನಡೆಸಿದ ನಂತರ ಪೇಟಿಎಂನ ಮೂಲ ಸಂಸ್ಥೆ One 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಷೇರುಗಳು ಸೋಮವಾರ ಕುರಿಸಿದವು. ಆರಂಭಿಕ ವ್ಯವಹಾರಗಳಲ್ಲಿ ಪೇಟಿಎಂ ಷೇರುಗಳು ಶೇಕಡಾ 6 ಕ್ಕಿಂತ ಹೆಚ್ಚು ಕುಸಿದವು. ಬೆಳಗ್ಗೆ 9.30 ಕ್ಕೆ BSE ನಲ್ಲಿ 705.40ಕ್ಕೆ ವಹಿವಾಟು ನಡೆಸಿತು. ದಿನದ ಕನಿಷ್ಠ 681.20 ರೂ.ನಲ್ಲಿ ಷೇರಿನ ಬೆಲೆಯು ಅದರ ವಿತರಣೆಯ ಬೆಲೆ 2,150 ರೂ.ಗಿಂತ 68 ಪ್ರತಿಶತದಷ್ಟು ರಿಯಾಯಿತಿಯಲ್ಲಿದೆ.
ಕೆಲವು ತ್ವರಿತ ಅಪ್ಲಿಕೇಶನ್ ಆಧಾರಿತ ಲೋನ್ ಡಿಶಿಂಗ್ ಘಟಕಗಳ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣದ ಭಾಗವಾಗಿ ಶುಕ್ರವಾರದಿಂದ ಬೆಂಗಳೂರಿನಲ್ಲಿ Razorpay ಮತ್ತು Cashfree ಜೊತೆಗೆ Paytmಗೆ ಲಿಂಕ್ ಆಗಿರುವ ಅನೇಕ ಸ್ಥಳಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಡಿ ಶನಿವಾರ ಹೇಳಿಕೆ ನೀಡಿದ ನಂತರ ಪೇಟಿಎಂ ಸ್ಟಾಕ್‌ನಲ್ಲಿ ಸೋಮವಾರ ಕುಸಿತ ಕಂಡಿದೆ.
ದಾಳಿಯ ಸಮಯದಲ್ಲಿ ಫೆಡರಲ್ ತನಿಖಾ ಸಂಸ್ಥೆಯು ಈ ಚೀನೀ ವ್ಯಕ್ತಿಗಳ ನಿಯಂತ್ರಿತ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. ಆದರೆ ಇದನ್ನು ಪೇಟಿಎಂ ನಿರಾಕರಿಸಿದೆ.
“ಪರಿಶೀಲನೆಯಲ್ಲಿರುವ ವ್ಯಾಪಾರಿಗಳ ಬಗ್ಗೆ ಕೆಲವು ಮಾಹಿತಿಯನ್ನು ಒದಗಿಸಲು ಅಧಿಕಾರಿಗಳು ನಮಗೆ ನಿರ್ದೇಶನಗಳನ್ನು ನೀಡಿದ್ದರು, ಅದಕ್ಕೆ ನಾವು ತಕ್ಷಣ ಪ್ರತಿಕ್ರಿಯಿಸಿದ್ದೇವೆ. ನಾವು ಅಧಿಕಾರಿಗಳೊಂದಿಗೆ ಸಹಕರಿಸುವುದನ್ನು ಮುಂದುವರಿಸುತ್ತೇವೆ” ಎಂದು ಪೇಟಿಎಂ ಹೇಳಿದೆ.
ಆದಾಗ್ಯೂ, ತನ್ನ ಯಾವುದೇ ಹಣವನ್ನು ಇಡಿ ವಶಕ್ಕೆ ಪಡೆದಿಲ್ಲ ಎಂದು ಭಾನುವಾರ ಪೇಟಿಎಂ ಹೇಳಿದೆ. “ನಿರ್ದಿಷ್ಟ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ತನಿಖೆಗಳ ಭಾಗವಾಗಿ ನಾವು ಪಾವತಿ ಪ್ರಕ್ರಿಯೆ ಪರಿಹಾರಗಳನ್ನು ಒದಗಿಸುವ ವ್ಯಾಪಾರಿಗಳ ಬಗ್ಗೆ ಮಾಹಿತಿಯನ್ನು ಇಡಿ ಕೇಳಿದೆ. ಈ ವ್ಯಾಪಾರಿಗಳು ಸ್ವತಂತ್ರ ಘಟಕಗಳು ಮತ್ತು ಅವರಲ್ಲಿ ಯಾರೂ ನಮ್ಮ ಗುಂಪು ಘಟಕಗಳಲ್ಲ ಎಂದು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ ಎಂದು ಪೇಟಿಎಂ ನಿಯಂತ್ರಕ ಫೈಲಿಂಗ್‌ನಲ್ಲಿ ಹೇಳಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Mon, 5 September 22