Avantel Share Magic: ಮಲ್ಟಿಬ್ಯಾಗರ್ ಆದ ಅವಾಂಟೆಲ್ ಷೇರು; 3 ವರ್ಷದಲ್ಲಿ ಬೆಲೆ ಶೇ. 2,000ದಷ್ಟು ಏರಿಕೆ

Multibagger Stock: ಏರೋಸ್ಪೇಸ್ ಮತ್ತು ಡಿಫೆನ್ಸ್ ಸೆಕ್ಟರ್​ನ ಅವಾಂಟೆಲ್ ಲಿ ಸಂಸ್ಥೆಯ ಷೇರು ಕಳೆದ 3-4 ವರ್ಷದಿಂದ ಏರುತ್ತಿದೆ. ಅವಾಂಟೆಲ್ ಷೇರುಬೆಲೆ 3 ವರ್ಷದಲ್ಲಿ ಶೇ. 2,000ದಷ್ಟು ಏರಿದೆ. 2020ರಲ್ಲಿ ಈ ಷೇರಿನ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದವರಿಗೆ ಇವತ್ತು 22 ಲಕ್ಷ ರೂ ರಿಟರ್ನ್ ಸಿಗುತ್ತಿರುತ್ತಿತ್ತು.

Avantel Share Magic: ಮಲ್ಟಿಬ್ಯಾಗರ್ ಆದ ಅವಾಂಟೆಲ್ ಷೇರು; 3 ವರ್ಷದಲ್ಲಿ ಬೆಲೆ ಶೇ. 2,000ದಷ್ಟು ಏರಿಕೆ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 29, 2023 | 2:03 PM

ನವದೆಹಲಿ, ನವೆಂಬರ್ 29: ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದತ್ತ ಸರ್ಕಾರದ ಗಮನ ಹೆಚ್ಚುತ್ತಿರುವಂತೆಯೇ ಸಾಕಷ್ಟು ಕಂಪನಿಗಳ ಷೇರಿಗೆ ಮಾರುಕಟ್ಟೆಯಲ್ಲಿ (stock markets) ಒಳ್ಳೆಯ ಬೇಡಿಕೆ ಕುದುರುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸ್ಟಾಕುಗಳು ಮಲ್ಟಿಬ್ಯಾಗರ್ ಎನಿಸಿವೆ. ಹೂಡಿಕೆದಾರರಿಗೆ ಕೈತುಂಬ ಷೇರುಸಂಪತ್ತು ಕೊಡುತ್ತಿವೆ. ಇಂಥ ಕೆಲ ಸಂಸ್ಥೆಗಳಲ್ಲಿ ಅವಾಂಟೆಲ್ (Avantel Ltd) ಒಂದು. ಕಳೆದ ಕೆಲ ತಿಂಗಳುಗಳಿಂದ ಇದರ ಷೇರುಬೆಲೆ ಗಣನೀಯವಾಗಿ ವೃದ್ಧಿಸಿದೆ. ಕಳೆದ ಮೂರು ವರ್ಷದಲ್ಲಿ ಇದರ ಷೇರುಬೆಲೆ ಶೇ. 2,000ದಷ್ಟು ಏರಿರುವುದು ಗಮನಾರ್ಹ.

ಅವಾಂಟೆಲ್ ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ವಲಯದಲ್ಲಿರುವ ಕಂಪನಿಯಾಗಿದೆ. ಸೆಟಿಲೈಟ್ ಕಮ್ಯೂನಿಕೇಶನ್, ಎಂಬೆಡೆಡ್ ಸಿಸ್ಟಮ್ಸ್, ಸಿಗ್ನಲ್ ಪ್ರೋಸಸಿಂಗ್, ವೈರ್ಲೆಂಸ್ ಫ್ರಂಟ್ ಎಂಡ್ ಸಂಬಂಧಿತ ತಂತ್ರಜ್ಞಾನಗಳನ್ನು ಬಳಸಿ ಪರಿಹಾರ ಒದಗಿಸುವ ಒಂದು ಕಂಪನಿ ಅದು.

ಇದನ್ನೂ ಓದಿ: ಬಿಎಸ್​ಇ ಒಟ್ಟಾರೆ ಷೇರುಸಂಪತ್ತು 4 ಟ್ರಿಲಿಯನ್ ಡಾಲರ್; ಇತಿಹಾಸದಲ್ಲಿ ಇದೇ ಮೊದಲು; ಎನ್​ಎಸ್​ಇಯಲ್ಲೂ ಉತ್ತಮ ಏರಿಕೆ

ಅವಾಂಟೆಲ್ ಸಂಸ್ಥೆಯ ಷೇರುಬೆಲೆ ಇಂದು ಬುಧವಾರ ಬೆಳಗ್ಗೆ 128 ರೂಗೆ ಬಂದಿದೆ. ಕಳೆದ ಒಂದು ತಿಂಗಳಲ್ಲಿ ಶೇ. 23ರಷ್ಟು ಷೇರುಬೆಲೆ ಏರಿದೆ. ಕಳೆದ 3 ತಿಂಗಳಲ್ಲಿ ಶೇ. 50ರಷ್ಟು ಹೆಚ್ಚಳವಾಗಿದೆ. ಕಳೆದ 12 ತಿಂಗಳ ಅವಧಿಯಲ್ಲಿ ಶೇ. 340ರಷ್ಟು ಬೆಲೆ ಏರಿಕೆ ಆಗಿದೆ. ಈ ವರ್ಷ (2023ರ ಜನವರಿ 1ರಿಂದ) ಶೇ. 400ಕ್ಕೂ ಹೆಚ್ಚು ಬೆಲೆ ಏರಿಕೆ ಆಗಿದೆ.

2001ರಲ್ಲಿ ಷೇರುಪೇಟೆಗೆ ಬಂದ ಅವಾಂಟೆಲ್ ಕಂಪನಿಯ ಷೇರುಬೆಲೆ 2020ರಿಂದ ಗಣನೀಯವಾಗಿ ಏರತೊಡಗಿದೆ. ಆಗ ಕೇವಲ 4 ರೂ ಆಸುಪಾಸಿನ ಬೆಲೆಯಲ್ಲಿದ್ದ ಅದರ ಷೇರು ಈಗ 130 ರೂ ಗಡಿ ದಾಟಿದ್ದು ಗಮನಾರ್ಹ. ಒಟ್ಟಾರೆ 22 ವರ್ಷದಲ್ಲಿ ಶೇ. 23,511ರಷ್ಟು ಅದರ ಷೇರುಬೆಲೆ ಹೆಚ್ಚಿದೆ.

ಇದನ್ನೂ ಓದಿ: Multibagger: 1 ಲಕ್ಷ ರೂ ಹೂಡಿಕೆ ಒಂದು ವರ್ಷದಲ್ಲಿ 6 ಲಕ್ಷ ರೂ; ಇದು ಮಲ್ಟಿಬ್ಯಾಗರ್ ಅಪೋಲೋ ಮ್ಯಾಜಿಕ್ ಓಟ

3 ವರ್ಷದ ಹಿಂದೆ ಇದರ ಷೇರು ಬೆಲೆ 5.80 ರೂ ಇತ್ತು. ಆಗ ಇದರ ಮೇಲೆ ಯಾರಾದರೂ 1,00,000 ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 22 ಲಕ್ಷ ರೂ ಆಗಿರುತ್ತಿತ್ತು. ಮೂರು ವರ್ಷದಲ್ಲಿ ಹೂಡಿಕೆ ಮೊತ್ತ 22 ಪಟ್ಟು ಬೆಳೆಯುವುದು ಸಾಮಾನ್ಯ ಸಂಗತಿ ಅಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Wed, 29 November 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ