UPI ID: ಒಬ್ಬ ವ್ಯಕ್ತಿ ಒಂದೇ ಬ್ಯಾಂಕ್ ಖಾತೆಗೆ, ಒಂದೇ ಮೊಬೈಲ್ ನಂಬರ್​ಗೆ ಒಂದಕ್ಕಿಂತ ಹೆಚ್ಚು ಯುಪಿಐ ಐಡಿ ಹೊಂದಬಹುದಾ?

|

Updated on: May 30, 2023 | 2:27 PM

Multiple UPI IDs For Same Account: ಯುಪಿಐ ಪ್ಲಾಟ್​ಫಾರ್ಮ್​ಗೆ ಒಂದೇ ಬ್ಯಾಂಕ್ ಖಾತೆ ಜೋಡಿಸಿದರೂ ಯುಪಿಐ ಐಡಿ ಒಂದಕ್ಕಿಂತ ಹೆಚ್ಚು ಇರಬಹುದಾ? ಯುಪಿಐ ಐಡಿ ಬದಲಾಯಿಸಿಕೊಳ್ಳಬಹುದಾ? ಈ ವಿವರ ಇಲ್ಲಿದೆ....

UPI ID: ಒಬ್ಬ ವ್ಯಕ್ತಿ ಒಂದೇ ಬ್ಯಾಂಕ್ ಖಾತೆಗೆ, ಒಂದೇ ಮೊಬೈಲ್ ನಂಬರ್​ಗೆ ಒಂದಕ್ಕಿಂತ ಹೆಚ್ಚು ಯುಪಿಐ ಐಡಿ ಹೊಂದಬಹುದಾ?
ಪೇಮೆಂಟ್ ಆ್ಯಪ್​
Follow us on

ಈಗ ಯುಪಿಐ ಮೂಲಕ ಹಣದ ವಹಿವಾಟು ಬಹಳ ಸಾಮಾನ್ಯವಾಗಿ ನಡೆಯುತ್ತಿದೆ. ಹೆಚ್ಚಿನ ಜನರು ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಆಧಾರಿತ ಪೇಮೆಂಟ್ ಆ್ಯಪ್​ಗಳನ್ನು (UPI Based Payment Apps) ಬಳಸುತ್ತಾರೆ. ಒಂದಕ್ಕಿಂತ ಹೆಚ್ಚು ಯುಪಿಐ ಐಡಿಗಳು ರಚನೆ ಆಗಿರುವುದು ಕೆಲವೊಮ್ಮೆ ನಮಗೆ ಗೊಂದಲ ಮೂಡಿಸಬಹುದು. ಒಂದೇ ಬ್ಯಾಂಕ್ ಖಾತೆಗೆ ಒಂದೇ ರೀತಿಯ ಐಡಿ ಯಾಕೆ ಇಲ್ಲ ಎಂದನಿಸಬಹುದು. ಯುಪಿಐ ಏನು, ಯುಪಿಐ ಐಡಿ ಯಾಕೆ ಬೇಕು, ಒಂದಕ್ಕಿಂತ ಹೆಚ್ಚು ಐಡಿಗಳು ಯಾಕೆ ಇವೆ ಇತ್ಯಾದಿ ಮಾಹಿತಿ ಇಲ್ಲಿದೆ

ಯುಪಿಐ ಎಂದರೇನು? ಯುಪಿಐ ಐಡಿ ಯಾಕೆ ಬೇಕು?

ಸರ್ಕಾರ ಸ್ವಾಮ್ಯದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI) ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್ ಫೋನ್ ಮೂಲಕ ಹಣದ ವಹಿವಾಟು ನಡೆಸಲು ಯುಪಿಐ ಅವಕಾಶ ಮಾಡಿಕೊಡುತ್ತದೆ. ಇದು ಸಾಕಾರಗೊಳ್ಳಬೇಕಾದರೆ, ನಿಮ್ಮ ಬ್ಯಾಂಕ್ ಖಾತೆಗೆ ಯುಪಿಐಗೆ ಜೋಡಿತವಾಗಲು ಬ್ಯಾಂಕ್ ಅನುಮತಿ ನೀಡಬೇಕು. ಸಾಮಾನ್ಯವಾಗಿ ಈಗ ಎಲ್ಲಾ ಬ್ಯಾಂಕ್ ಖಾತೆಗಳನ್ನು ಯುಪಿಐಗೆ ಎನೇಬಲ್ ಮಾಡಲಾಗಿರುತ್ತದೆ. ಹಾಗೆಯೇ, ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಅನ್ನು ಜೋಡಿಸಿರಬೇಕು. ಇದೇ ನಂಬರ್ ನಿಮಗೆ ಯುಪಿಐ ಮತ್ತು ಬ್ಯಾಂಕ್ ಖಾತೆಗೆ ಕೊಂಡಿಯಾಗಿರುವುದು.

ಇದನ್ನೂ ಓದಿUPI Frauds: ಭಾರತದಲ್ಲಿ ಒಂದೇ ವರ್ಷದಲ್ಲಿ ಯುಪಿಐ ಸಂಬಂಧ 1 ಲಕ್ಷ ಸಮೀಪ ವಂಚನೆ ಪ್ರಕರಣಗಳು; ಹೇಗೆಲ್ಲಾ ವಂಚಿಸುತ್ತಾರೆ ನೋಡಿ

ಇನ್ನು, ನೀವು ಪೇಮೆಂಟ್ ಆ್ಯಪ್​ವೊಂದನ್ನು ಡೌನ್​ಲೋಡ್ ಮಾಡಿ, ಅದಕ್ಕೆ ನಿಮ್ಮ ಬ್ಯಾಂಕ್ ಖಾತೆಯನ್ನು ಜೋಡಿಸಿದಾಗ ಯುಪಿಐ ಐಡಿ ರಚಿತವಾಗುತ್ತದೆ. ಈ ಐಡಿಯೇ ನಿಮ್ಮ ಹಣಕಾಸು ವಹಿವಾಟಿಗೆ ಗುರುತು. ಜನರಿಗೆ ನಿಮ್ಮ ಬ್ಯಾಂಕ್ ಖಾತೆ ಬದಲು ಈ ಯುಪಿಐ ಐಡಿ ಮಾತ್ರ ಕಾಣುತ್ತದೆ. ಇದರಿಂದ ಸುರಕ್ಷಿವಾಗಿ ನೀವು ವಹಿವಾಟು ನಡೆಸಲು ಸಾಧ್ಯ.

ಒಂದೇ ಮೊಬೈಲ್ ನಂಬರ್​ಗೆ ಮತ್ತು ಒಂದೇ ಬ್ಯಾಂಕ್ ಖಾತೆಗೆ ವಿವಿಧ ಯುಪಿಐ ಐಡಿಗಳು ಯಾಕೆ?

ಒಬ್ಬ ವ್ಯಕ್ತಿ ಬಳಿ ಒಂದಕ್ಕಿಂತ ಹೆಚ್ಚು ಯುಪಿಐ ಐಡಿಗಳು ಇರುವುದು ಸಹಜ. ನಿಮ್ಮ ಬಳಿ ಹೆಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಖಾತೆ ಇದ್ದರೆ ಪೇಟಿಎಂನಲ್ಲಿ ನಿಮ್ಮ ಯುಪಿಐ ಐಡಿ @paytm ಎಂದು ಅಂತ್ಯಗೊಳ್ಳುತ್ತದೆ. ಡೀಫಾಲ್ಟ್ ಆಗಿ ನಿಮ್ಮ ಮೊಬೈಲ್ ನಂಬರ್ ನಿಮ್ಮ ಐಡಿಯಲ್ಲಿ ಕಾಣಿಸುತ್ತದೆ. ನೀವು ಬೇಕೆಂದರೆ ಬೇರೆ ನಂಬರ್ ಅಥವಾ ಹೆಸರನ್ನು ಯುಪಿಐ ಐಡಿಗೆ ನೀಡಬಹುದು.

ನೀವು ಫೋನ್​ಪೇ ಆ್ಯಪ್​ಗೆ ಹೋಗಿ ಇದೇ ಬ್ಯಾಂಕ್ ಖಾತೆಯನ್ನು ಜೋಡಿಸಿದಾಗ ಬೇರೆ ಯುಪಿಐ ಐಡಿ ಕ್ರಿಯೇಟ್ ಆಗುತ್ತದೆ. ಅದರಲ್ಲಿ @ybl, @xsl ಇತ್ಯಾದಿಯು ಐಡಿ ಕೊನೆಯಲ್ಲಿ ಇರುತ್ತದೆ. ಇಲ್ಲಿಯೂ ನೀವು ಐಡಿಯ ಆರಂಭಿಕ ಭಾಗವನ್ನು ಬದಲಾಯಿಸಿಕೊಳ್ಳಬಹುದು.

ಇದನ್ನೂ ಓದಿCredit Cards: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ? ಸಾಧಕ-ಬಾಧಕಗಳು ಹೀಗಿವೆ ನೋಡಿ

ಗೂಗಲ್ ಪೇ ಆ್ಯಪ್​ನಲ್ಲಾದರೆ ಐಡಿಯ ಕೊನೆಗೆ @okhdfc, @oksbi, @okaxis ಇತ್ಯಾದಿ ಬರುತ್ತದೆ. ಹೀಗಾಗಿ, ಒಂದೇ ಬ್ಯಾಂಕ್ ಖಾತೆಗೆ ವಿವಿಧ ಯುಪಿಐ ಐಡಿಗಳು ರಚನೆ ಆಗಬಹುದು.

ಒಂದೇ ಮೊಬೈಲ್ ನಂಬರ್​ಗೆ ವಿವಿಧ ಯುಪಿಐ ಐಡಿಗಳು ಇರಬಹುದೇ?

ನಿಮ್ಮ ಬಳಿ ವಿವಿಧ ಬ್ಯಾಂಕ್ ಖಾತೆಗಳಿದ್ದು, ಅದಕ್ಕೆಲ್ಲಾ ನೀವು ಒಂದೇ ಮೊಬೈಲ್ ನಂಬರ್ ನೀಡಬಹುದು. ಆಗ ಯುಪಿಐ ಆ್ಯಪ್​ನಲ್ಲಿ ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಜೋಡಿಸಲು ಸಾಧ್ಯವಾಗುತ್ತದೆ. ಸಹಜವಾಗಿ ಒಂದಕ್ಕಿಂತ ಹೆಚ್ಚು ಯುಪಿಐ ಐಡಿಗಳು ರಚನೆ ಆಗುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ