UPI Frauds: ಭಾರತದಲ್ಲಿ ಒಂದೇ ವರ್ಷದಲ್ಲಿ ಯುಪಿಐ ಸಂಬಂಧ 1 ಲಕ್ಷ ಸಮೀಪ ವಂಚನೆ ಪ್ರಕರಣಗಳು; ಹೇಗೆಲ್ಲಾ ವಂಚಿಸುತ್ತಾರೆ ನೋಡಿ

Beware Of Fraudsters Using Your UPI: ಭಾರತದಲ್ಲಿ ಕಳೆದ ವರ್ಷ (2002) ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಜನರು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಪ್ರಕರಣಗಳು 95,000 ಎಂಬ ಮಾಹಿತಿಯನ್ನು ಸ್ವತಃ ಹಣಕಾಸು ಸಚಿವಾಲಯವೇ ನೀಡಿದೆ.

UPI Frauds: ಭಾರತದಲ್ಲಿ ಒಂದೇ ವರ್ಷದಲ್ಲಿ ಯುಪಿಐ ಸಂಬಂಧ 1 ಲಕ್ಷ ಸಮೀಪ ವಂಚನೆ ಪ್ರಕರಣಗಳು; ಹೇಗೆಲ್ಲಾ ವಂಚಿಸುತ್ತಾರೆ ನೋಡಿ
ಯುಪಿಐ ಪೇಮೆಂಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 30, 2023 | 11:02 AM

ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಯುಪಿಐ ವ್ಯವಸ್ಥೆ (UPI Payment Service) ಬೇರೆ ಬೇರೆ ದೇಶಗಳ ಗಮನ ಕೂಡ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ, ಭಾರತದ ಹಣಕಾಸು ವಹಿವಾಟಿನಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಅನ್ನು ದುರುಪಯೋಗಿಸಿಕೊಳ್ಳಲು ದುರುಳರು ನಡೆಸುತ್ತಿರುವ ಯತ್ನಗಳೂ ಹೆಚ್ಚಾಗಿವೆ. ಯುಪಿಐ ಸಂಬಂಧ ವಂಚನೆಗೊಳಗಾದ, ಹಣ ಕಳೆದುಕೊಂಡವರ ದೂರು ಹೆಚ್ಚಾಗಿದೆ. ಅಧಿಕೃತವಾಗಿ ಬೆಳಕಿಗೆ ಬಂದ ಪ್ರಕರಣಗಳೇ ಹೆಚ್ಚೂಕಡಿಮೆ ಒಂದು ಲಕ್ಷದಷ್ಟಿದೆ. ಭಾರತದಲ್ಲಿ ಕಳೆದ ವರ್ಷ (2002) ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಜನರು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಪ್ರಕರಣಗಳು 95,000 ಎಂಬ ಮಾಹಿತಿಯನ್ನು ಸ್ವತಃ ಹಣಕಾಸು ಸಚಿವಾಲಯವೇ ನೀಡಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತ್ಯಾದಿ ವಿವಿಧ ಯುಪಿಐ ಆ್ಯಪ್​ಗಳ ಮೂಲಕ ವಂಚಕರು ಜನರ ದುಡ್ಡನ್ನು ಲಪಟಾಯಿಸಿದ್ದಾರೆ. ಈ ಬಹುತೇಕ ಪ್ರಕರಣದಲ್ಲಿ ಜನರು ವಂಚಕರಿಗೆ ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡು ಏಮಾರಿದ್ದಾರೆ. ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ದುಷ್ಕರ್ಮಿಗಳು ಹೇಗೆಲ್ಲಾ ದುರುಪಯೋಗಿಸಿಕೊಂಡು ಜನರನ್ನು ವಂಚಿಸುತ್ತಾರೆ, ಈ ವಿವರ ಮುಂದಿದೆ

ಕ್ಯೂಆರ್ ಕೋಡ್ ಅಸ್ತ್ರ ಬಳಸುವ ದುಷ್ಕರ್ಮಿಗಳು

ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಜನರು ಹೆಚ್ಚಾಗಿ ಹಣ ಕಳೆದುಕೊಳ್ಳುವುದು ಯುಪಿಐ ಪಿನ್ ಮೂಲಕ. ವಂಚಕರು ತಾವು ಹಣ ಕಳುಹಿಸುವುದಾಗಿ ಹೇಳಿ ಕ್ಯೂಆರ್ ಕೋಡ್ ಕಳುಹಿಸುತ್ತಾರೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಹಣ ನಿಮ್ಮ ಖಾತೆಗೆ ಸೇರುತ್ತದೆ ಎಂದು ನಂಬಿಸುತ್ತಾರೆ. ಈ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಪೇಮೆಂಟ್​ಗೆ ಯುಪಿಐ ಪಿನ್ ನಂಬರ್ ಕೇಳಲಾಗುತ್ತದೆ. ಈಗಲೂ ಗ್ರಾಹಕರು ಅಪಾಯವನ್ನು ಅರಿತು ಎಚ್ಚೆತ್ತುಕೊಳ್ಳದೇ ಯುಪಿಐ ಪಿನ್ ನಂಬರ್ ಹಾಕಿಬಿಟ್ಟರೆ ಹಣ ಹೋದಂತೆಯೇ ಸರಿ.

ಇಂಥ ಘಟನೆಗಳು ಹೆಚ್ಚುತ್ತಿರುವ ಕಾರಣಕ್ಕೆ ಪೇಟಿಎಂ ಇತ್ಯಾದಿ ಯುಪಿಐ ಆ್ಯಪ್​ಗಳು ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಹೋಗುವ ಮುನ್ನ ಒಂದು ಅಲರ್ಟ್ ಮೆಸೇಜ್ ಇರುವ ಪಾಪ್ ಅಪ್ ಪ್ರತ್ಯಕ್ಷವಾಗುತ್ತದೆ.

ಇದನ್ನೂ ಓದಿTech Tips: ನಿಮ್ಮಲ್ಲಿರುವ ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತೇ?; ಇಲ್ಲಿದೆ ಮಾಹಿತಿ

ಗೂಗಲ್ ಸರ್ಚ್ ಮೂಲಕ ಸಿಗುವ ತಪ್ಪು ಕಸ್ಟಮರ್ ಕೇರ್ ನಂಬರ್

ನಾವು ಯಾವುದಾದರೂ ಕಸ್ಟಮರ್ ಕೇರ್ ನಂಬರ್ ಬೇಕಾದರೆ ಗೂಗಲ್​ನಲ್ಲಿ ಹುಡುಕಿ ಪಡೆಯುತ್ತೇವೆ. ಈ ವೇಳೆ ಕೆಲವೊಮ್ಮೆ ವಂಚಕರು ಸೃಷ್ಟಿಸಿದ ಲಿಂಕ್​ಗಳು ಸರ್ಚ್​ನಲ್ಲಿ ಸಿಗಬಹುದು. ಇಂತಹ ನಂಬರ್​ಗೆ ಕರೆ ಮಾಡಿದಾಗ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಸಿವಿವಿ ನಂಬರ್ ಇತ್ಯಾದಿ ವೈಯಕ್ತಿಕ ವಿವರಗಳನ್ನು ಪಡೆಯಬಹುದು. ನೀವು ನೋಡನೋಡುತ್ತಿದ್ದಂತೆಯೇ ನಿಮ್ಮ ಖಾತೆಯಿಂದ ಇದ್ದಬದ್ದ ದುಡ್ಡೆಲ್ಲಾ ದುರುಳ ಕೈಸೇರಿಹೋಗುತ್ತದೆ. ನಿಮ್ಮ ಮೊಬೈಲ್ ನಂಬರ್​ಗೆ ಮೆಸೇಜ್ ಬಂದಾಗಲಷ್ಟೇ ನಿಮಗೆ ಹಣ ಲೂಟಿಯಾಗಿರುವ ವಿಚಾರ ಗೊತ್ತಾಗುವುದು.

ಯುಪಿಐ ಪೇಮೆಂಟ್ ಮಾಡುವಾಗ ವೈಫೈ ನೆಟ್ವರ್ಕ್ ಬಳಕೆ

ನಾವು ಸಾರ್ವಜನಿಕ ಸ್ಥಳದಲ್ಲಿ ಅಥವಾ ಹೋಟೆಲ್​ಗಳಲ್ಲಿ ಫ್ರೀ ವೈಫೈ ಇದ್ದಾಗ ಅದನ್ನು ಬಳಸಲು ಮುಂದಾಗುತ್ತೇವೆ. ಆದರೆ, ಈ ಪಬ್ಲಿಕ್ ವೈಫೈಗಳು ನಿಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಲು ದುರುಳರಿಗೆ ಪ್ರಮುಖ ಅಸ್ತ್ರಗಳಾಗಿರಬಹುದು. ನಿಮ್ಮ ಖಾತೆ ನಂಬರ್, ಯುಪಿಐ ಪಿನ್ ಇತ್ಯಾದಿ ಮಾಹಿತಿಯನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕ ವೈಫೈ ಬಳಕೆ ವೇಳೆ ಎಚ್ಚರದಿಂದಿರಿ. ಅದರಲ್ಲೂ ನಿಮ್ಮ ಬ್ಯಾಂಕಿಂಗ್ ಚಟುವಟಿಕೆಗೆ ಪಬ್ಲಿಕ್ ವೈಫೈ ಮಾತ್ರ ಬಳಸದಿರಿ.

ಯುಪಿಐ ಮೂಲಕ ಜನರು ವಂಚನೆಗೊಳಗಾಗುವ ಇತರ ಕಾರಣಗಳು

ನಾವು ಕೆಲವೊಮ್ಮೆ ಎಟಿಎಂ ಕಾರ್ಡ್ ನಂಬರ್ ಮತ್ತು ಪಿನ್ ನಂಬರ್, ಸಿವಿವಿ ಇತ್ಯಾದಿ ಮಾಹಿತಿಯನ್ನು ದುಷ್ಕರ್ಮಿಗಳಿಗೆ ಕೊಡುವುದಿದೆ. ಅದೇ ರೀತಿ ಯುಪಿಐ ಪಿನ್ ನಂಬರ್ ಅನ್ನು ಶೇರ್ ಮಾಡಿ ಏಮಾರುವುದಿದೆ. ನೀವು ಬೇರೆ ಯಾರಿಗೂ ಯಾವುದೇ ಕಾರಣಕ್ಕೂ ಯುಪಿಐ ಪಿನ್ ನಂಬರ್ ಹಂಚಿಕೊಳ್ಳದಿರಿ. ನಿಮ್ಮ ಯುಪಿಐ ಪಿನ್ ನಂಬರ್ ಅನ್ನು ಆಗಾಗ್ಗೆ ಬದಲಿಸುತ್ತಿರಿ.

ಇದನ್ನೂ ಓದಿCredit Cards: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ? ಸಾಧಕ-ಬಾಧಕಗಳು ಹೀಗಿವೆ ನೋಡಿ

ನಮ್ಮ ಮೊಬೈಲ್​ಗಳಲ್ಲೇ ನಮ್ಮ ಎಲ್ಲಾ ವೈಯಕ್ತಿಕ ಬ್ಯಾಂಕಿಂಗ್ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತೇವೆ. ಅಂಥದ್ದನ್ನು ತಪ್ಪಿಸಿ. ನಿಮ್ಮ ಮೊಬೈಲ್ ಕಳುವಾದರೆ ನಿಮ್ಮೆಲ್ಲಾ ವಿವರಗಳು ದುರುಳರ ಕೈಸೇರುವ ಅಪಾಯ ಇರುತ್ತದೆ.

ಹಾಗೆಯೇ, ಜನರು ತಪ್ಪಾದ ನಂಬರ್​ಗಳಿಗೆ ಹಣ ಕಳುಹಿಸಿದ ಹಲವು ಪ್ರಕರಣಗಳು ನಡೆದಿವೆ. ಇಲ್ಲಿ ಕೆಲ ದುಷ್ಕರ್ಮಿಗಳು ಕಳುಹಿಸುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ರವಾನಿಸಿ ಏಮಾರುವವರು ಹೆಚ್ಚು. ಯುಪಿಐ ಮೂಲಕ ದೊಡ್ಡ ಮೊತ್ತದ ಹಣ ಕಳುಹಿಸುವಾಗ ಮೊದಲು ಸಣ್ಣ ಮೊತ್ತ ಕಳುಹಿಸಿ ಅದು ನಿಮಗೆ ಬೇಕಾದವರಿಗೆ ತಲುಪಿದೆಯಾ ಎಂದು ದೃಢಪಡಿಸಿಕೊಂಡು ಬಳಿಕ ಮಿಕ್ಕ ಹಣವನ್ನು ಕಳುಹಿಸುವುದು ಹೆಚ್ಚು ಸುರಕ್ಷಿತ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ