GPF Rule Change 2022: ಜಿಪಿಎಫ್​ನಲ್ಲಿ ವರ್ಷಕ್ಕೆ ಎಷ್ಟು ಹೂಡಿಕೆ ಮಾಡಬಹುದು? ನಿಯಮದಲ್ಲಿ ಬದಲಾವಣೆ ಮಾಡಿದ ಕೇಂದ್ರ

|

Updated on: Oct 18, 2022 | 4:56 PM

ಜಿಪಿಎಫ್ ನಿಧಿಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಇಲಾಖೆ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ.

GPF Rule Change 2022: ಜಿಪಿಎಫ್​ನಲ್ಲಿ ವರ್ಷಕ್ಕೆ ಎಷ್ಟು ಹೂಡಿಕೆ ಮಾಡಬಹುದು? ನಿಯಮದಲ್ಲಿ ಬದಲಾವಣೆ ಮಾಡಿದ ಕೇಂದ್ರ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಜನರಲ್ ಪ್ರಾವಿಡೆಂಟ್ ಫಂಡ್ (General Provident Fund) ನಿಯಮಗಳಲ್ಲಿ ಕೇಂದ್ರ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಕೇಂದ್ರ ಸರ್ಕಾರದ ಪಿಂಚಣಿ ಮತ್ತು ಪಿಂಚಣಿದಾರರ ಇಲಾಖೆ (Department of Pension) ವ್ಯಾಪ್ತಿಯಲ್ಲಿ ಬರುವ ಎಲ್ಲರಿಗೂ ಇದರಿಂದ ಪ್ರಯೋಜನವಾಗಲಿದೆ ಎನ್ನಲಾಗಿದೆ. ಇಪಿಎಫ್​ಒ (Employees Provident Fund) ಮಾದರಿಯಲ್ಲೇ ಜಿಪಿಎಫ್​ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನದ ನಿರ್ದಿಷ್ಟ ಮೊತ್ತವನ್ನು ಜಿಪಿಎಫ್​ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ ಮತ್ತು ಡಿಸೆಂಬರ್ ನಡುವಣ ಅವಧಿಯಲ್ಲಿ ಜಿಪಿಎಫ್​ಗೆ ಶೇಕಡಾ 7.1ರ ಬಡ್ಡಿ ದರವನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.

ಜಿಪಿಎಫ್ ನಿಯಮದಲ್ಲಿ ಏನು ಬದಲಾವಣೆ?:

ಜಿಪಿಎಫ್ ನಿಧಿಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಇಲಾಖೆ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ.

ಇದನ್ನೂ ಓದಿ
India Post Payments Bank: ಅಂಚೆ ಇಲಾಖೆಯಿಂದ ಕೇವಲ 399 ರೂ.ಗೆ ಅಪಘಾತ ವಿಮೆ, 10 ಲಕ್ಷ ರೂ. ಕವರೇಜ್
Recession: ಸಿಇಒಗಳಿಂದ ಆರ್ಥಿಕ ಹಿಂಜರಿತ ಮುನ್ಸೂಚನೆ, ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಆತಂಕ
Gujarat Elections: ಮತದಾರರ ಓಲೈಕೆಗೆ ಮುಂದಾದ ಬಿಜೆಪಿ; ಸಿಎನ್​ಜಿ, ಅಡುಗೆ ಅನಿಲದ ಮೇಲಿನ ತೆರಿಗೆ ಕಡಿತ, 2 ಸಿಲಿಂಡರ್ ಉಚಿತ
Petrol Price on October 18: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

‘ಜಿಪಿಎಫ್​ ನಿಯಮ 1960ರ (ಕೇಂದ್ರ ಸೇವೆಗಳು) ಪ್ರಕಾರ, ಖಾತೆದಾರರ ಜಿಪಿಎಫ್​ ಚಂದಾ ಮೊತ್ತವು ಅವರ ವೇತನದ ಶೇಕಡಾ 6ಕ್ಕಿಂತ ಕಡಿಮೆ ಇರಬಾರದು ಮತ್ತು ಒಟ್ಟು ವೇತನಕ್ಕಿಂತ ಹೆಚ್ಚಿರಬಾರದು’ ಎಂದು ಅಕ್ಟೋಬರ್ 11ರಂದು ಇಲಾಖೆ ಅಧಿಸೂಚನೆ ಹೊರಡಿಸಿದೆ. ಹಣಕಾಸು ವರ್ಷವೊಂದರಲ್ಲಿ ಜಿಪಿಎಫ್​ನಲ್ಲಿ ಇಂತಿಷ್ಟೇ ಹೂಡಿಕೆ ಮಾಡಬೇಕು ಎಂಬ ಕನಿಷ್ಠ ಮಿತಿ ಹೇರಿಲ್ಲ. ಆದರೆ ವಾರ್ಷಿಕ ಗರಿಷ್ಠ 5 ಲಕ್ಷ ರೂ.ಗಳ ಮಿತಿ ಹೇರಲಾಗಿದೆ ಎಂದೂ ಇಲಾಖೆ ತಿಳಿಸಿದೆ.

ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್​) ಬಡ್ಡಿ ದರ ಯಥಾ ಸ್ಥಿತಿ; ಶೇ 7.1ರಲ್ಲೇ ಮುಂದುವರಿಕೆ

ತಿದ್ದುಪಡಿಗೆ ಸಂಬಂಧಿಸಿ ತಿಳಿವಳಿಕೆ ಮೂಡಿಸುವುದಕ್ಕಾಗಿ ಕ್ರಮ ಕೈಗೊಳ್ಳುವಂತೆ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚನೆ ನೀಡಿದೆ.

ಜಿಪಿಎಫ್​ ಅನ್ನು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ನಿರ್ವಹಿಸುತ್ತಿದೆ. ಉದ್ಯೋಗಿಯು ನಿವೃತ್ತಿಯಾಗುವ ದಿನಕ್ಕಿಂತ ಮೂರು ತಿಂಗಳು ಮೊದಲೇ ಜಿಪಿಎಫ್​​ಗೆ ಆತನ ಕೊಡುಗೆಯನ್ನು ನಿಲ್ಲಿಸಬೇಕು. ಜತೆಗೆ ನಿವೃತ್ತಿಯಾದ ಕೂಡಲೇ ಮೊತ್ತವನ್ನು ವರ್ಗಾಯಿಸಲು ವ್ಯವಸವ್ಥೆ ಮಾಡಬೇಕು ಎಂದೂ ಸೂಚಿಸಲಾಗಿದೆ.

ಜಿಪಿಎಫ್​ ಕೂಡ ಒಂದು ರೀತಿಯ ಭವಿಷ್ಯ ನಿಧಿ ಖಾತೆಯೇ ಆಗಿದೆ. ಆದರೆ ಎಲ್ಲಾ ಉದ್ಯೋಗಿಗಳು ಇದರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರ್ಕಾರಿ ನೌಕರರಿಗೆ ಮಾತ್ರ ಇದರ ಪ್ರಯೋಜನ ಲಭ್ಯವಿದೆ. ಈ ಸೌಲಭ್ಯ ಪಡೆಯಲು, ಸರ್ಕಾರಿ ನೌಕರರು ತಮ್ಮ ಸಂಬಳದ ನಿರ್ದಿಷ್ಟ ಭಾಗವನ್ನು ಜಿಪಿಎಫ್‌ಗೆ ನೀಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Tue, 18 October 22