ಶೇ. 8ರವರೆಗೂ ಬಡ್ಡಿ; ಈ ಮೂರು ಬ್ಯಾಂಕ್​ಗಳ ಸ್ಪೆಷಲ್ ಠೇವಣಿ ಪ್ಲಾನ್​ಗಳಿಗೆ ಡಿಸೆಂಬರ್ 31 ಡೆಡ್​ಲೈನ್

|

Updated on: Dec 13, 2023 | 2:28 PM

SBI, IDBI, Indian Bank Special FD Plans: ಎಸ್​ಬಿಐನ ಅಮೃತ್ ಕಲಶ್ ವಿಶೇಷ ಎಫ್​ಡಿ ಸ್ಕೀಮ್ 400 ದಿನದ ಅವಧಿಯದ್ದಾಗಿದೆ. ಹಿರಿಯ ನಾಗರಿಕರಿಗೆ ವರ್ಷಕ್ಕೆ ಶೇ. 7.60ರಷ್ಟು ಬಡ್ಡಿ ಸಿಗುತ್ತದೆ. ಐಡಿಬಿಐ ಬ್ಯಾಂಕ್​ನ 375 ಮತ್ತು 444 ದಿನದ ಎರಡು ಸ್ಪೆಷಲ್ ಡೆಪಾಸಿಟ್ ಪ್ಲಾನ್​ಗಳಿದ್ದು, ಬಡ್ಡಿದರ ಶೇ. 7.75ರವರೆಗೂ ಇದೆ. ಇಂಡಿಯನ್ ಬ್ಯಾಂಕ್​ನ 400 ದಿನದ ವಿಶೇಷ ಠೇವಣಿ ಯೋಜನೆಯಲ್ಲಿ ಸೂಪರ್ ಸೀನಿಯರ್ ಜನರಿಗೆ ಶೇ. 8ರಷ್ಟು ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.25ರಷ್ಟು ಬಡ್ಡಿ ದೊರಕುತ್ತದೆ.

ಶೇ. 8ರವರೆಗೂ ಬಡ್ಡಿ; ಈ ಮೂರು ಬ್ಯಾಂಕ್​ಗಳ ಸ್ಪೆಷಲ್ ಠೇವಣಿ ಪ್ಲಾನ್​ಗಳಿಗೆ ಡಿಸೆಂಬರ್ 31 ಡೆಡ್​ಲೈನ್
ನಿಶ್ಚಿತ ಠೇವಣಿ
Follow us on

ಬೆಂಗಳೂರು, ಡಿಸೆಂಬರ್ 13: ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಪ್ಲಾನ್​ಗಳು ಸದಾ ಲಭ್ಯ ಇರುತ್ತವೆ. ಆದರೆ, ಕೆಲವೊಂದು ಅವಧಿಯ ವಿಶೇಷ ಪ್ಲಾನ್​ಗಳನ್ನು (Special FD plans) ಬ್ಯಾಂಕುಗಳು ಆಫರ್ ಮಾಡುವುದಿದೆ. ಇವು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯ ಇರುತ್ತವೆ. ತಮ್ಮಲ್ಲಿರುವ ಇತರ ಎಫ್​ಡಿಗಳಿಗಿಂತ ಈ ವಿಶೇಷ ಪ್ಲಾನ್​ಗಳಿಗೆ ಇವು ಹೆಚ್ಚಿನ ಬಡ್ಡಿ ಆಫರ್ ಮಾಡುತ್ತವೆ. ಈ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್​ನ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗೆ ಡಿಸೆಂಬರ್ 31ರಂದು ಡೆಡ್​ಲೈನ್ ಇದೆ. ಇನ್ನೆರಡು ವಾರ ಮಾತ್ರ ಇವುಗಳನ್ನು ಪಡೆಯಲು ಕಾಲಾವಕಾಶ ಇರುವುದು. ಈ ಪೈಕಿ ಇಂಡಿಯನ್ ಬ್ಯಾಂಕ್​ನ ಎಫ್​ಡಿ ಪ್ಲಾನ್​ನಲ್ಲಿ ಶೇ. 8ರವರೆಗೂ ಬಡ್ಡಿ ಸಿಗುತ್ತದೆ.

ಎಸ್​ಬಿಐ ಅಮೃತ್ ಕಲಶ್ ಠೇವಣಿ ಯೋಜನೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷದ ಆರಂಭದಲ್ಲಿ ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್ ಪ್ರಕಟಿಸಿತ್ತು. ಇದು ಈಗ ಡಿಸೆಂಬರ್ 31ರವರೆಗೂ ವಿಸ್ತರಣೆ ಆಗಿದೆ. ಇದು 400 ದಿನದ ಅವಧಿಯ ಡೆಪಾಸಿಟ್ ಸ್ಕೀಮ್ ಆಗಿದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.10ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ, ಎಸ್​ಬಿಐ ಸಿಬ್ಬಂದಿ ಮತ್ತು ಎಸ್​ಬಿಐ ಪಿಂಚಣಿದಾರರಿಗೆ 50 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: ಎಫ್​ಡಿಯಿಂದ ಮಾಸಿಕ ಆದಾಯ ಸೃಷ್ಟಿಸಲು ಸಾಧ್ಯವೇ? ನಿಶ್ಚಿತ ಠೇವಣಿ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು

ಐಡಿಬಿಐ ಉತ್ಸವ್ ಎಫ್​ಡಿ ಪ್ಲಾನ್

ಐಡಿಬಿಐ ಬ್ಯಾಂಕ್ 375 ದಿನ ಹಾಗೂ 444 ದಿನದ ಉತ್ಸವ್ ಎಫ್​ಡಿ ಪ್ಲಾನ್ ಆಫರ್ ಇದ್ದು, ಡಿಸೆಂಬರ್ 31ಕ್ಕೆ ಅದು ನಿಂತುಹೋಗುತ್ತದೆ. 375 ದಿನದ ಠೇವಣಿ ಸ್ಕೀಮ್​ನಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ. 7.10ರಷ್ಟು ಬಡ್ಡಿ ಸಿಕ್ಕರೆ, ಹಿರಿಯ ನಾಗರಿಕರಿಗೆ ಶೇ. 7.60ರಷ್ಟು ಬಡ್ಡಿ ಕೊಡಲಾಗುತ್ತದೆ.

ಇನ್ನು, 444 ದಿನದ ಎಫ್​ಡಿ ಸ್ಕೀಮ್​ನಲ್ಲಿ ಸಾಮಾನ್ಯರಿಗೆ ಶೇ. 7.25, ಹಿರಿಯ ನಾಗರಿಕರಿಗೆ ಶೇ 7.75ರಷ್ಟು ಬಡ್ಡಿ ಪ್ರಾಪ್ತವಾಗುತ್ತದೆ.

ಇದನ್ನೂ ಓದಿ: Bank Nominee: ನಾಮಿನಿ ಯಾಕೆ ಬೇಕು? ಹತ್ತು ನಿಮಿಷ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದೀತು ಹುಷಾರ್

ಇಂಡಿಯನ್ ಬ್ಯಾಂಕ್ 400 ದಿನದ ಎಫ್​ಡಿ ಸ್ಕೀಮ್

ಇಂಡಿಯನ್ ಬ್ಯಾಂಕ್​ನ ಇಂಡ್ ಸೂಪರ್ 400 ಡೇಸ್ ಎಂಬ ವಿಶೇಷ ಡೆಪಾಸಿಟ್ ಸ್ಕೀಮ್ ಇದೆ. 400 ದಿನಗಳ ಈ ಠೇವಣಿ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರು ಶೇ. 7.25ರಷ್ಟು ಪಡೆಯಬಹುದು. ಹಿರಿಯ ನಾಗರಿಕರಿಗೆ ಶೇ. 7.75 ಬಡ್ಡಿ, ಸೂಪರ್ ಸೀನಿಯರ್ ಸಿಟಿಜನ್​ಗಳಿಗೆ ಶೇ. 8ರಷ್ಟು ಬಡ್ಡಿ ಸಿಗುತ್ತದೆ.

ಇಂಡಿಯನ್ ಬ್ಯಾಂಕ್​ನ ಈ ಎಫ್​ಡಿಯಲ್ಲಿ ಕನಿಷ್ಠ ಮೊತ್ತ 10,000 ರೂ ಇದ್ದು, ಗರಿಷ್ಠ 2 ಕೋಟಿ ರೂವರೆಗೂ ಹೂಡಿಕೆ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ