ಬೆಂಗಳೂರು, ಅಕ್ಟೋಬರ್ 9: ಕ್ರೆಡಿಟ್ ಕಾರ್ಡ್ನಿಂದ ಸಾಲದ ವರ್ತುಲಕ್ಕೆ ಸಿಲುಕಿ ನಲುಗಿ ಹೋದವರಿದ್ದಾರೆ. ಹಾಗೆಯೇ, ಅದನ್ನು ಸಮರ್ಪಕವಾಗಿ ಉಪಯೋಗಿಸಿ ಸಾಕಷ್ಟು ಲಾಭ ಕಂಡವರೂ ಇದ್ದಾರೆ. ಕ್ರೆಡಿಟ್ ಕಾರ್ಡ್ ಬಳಕೆ ಒಂದು ರೀತಿಯ ಹಣಕಾಸು ಕಲೆ. ಯಾವ ರೀತಿಯ ಕ್ರೆಡಿಟ್ ಕಾರ್ಡ್ ಬೇಕು ಎಂದು ಆಯ್ಕೆ ಮಾಡಿಕೊಳ್ಳುವುದೂ ತಿಳಿದಿರಬೇಕು. ಈಗ ಹಬ್ಬದ ಸೀಸನ್ ಚಾಲನೆಯಲ್ಲಿದ್ದು ಸಾಕಷ್ಟು ಆಫ್ಲೈನ್ ಮತ್ತು ಆನ್ಲೈನ್ ಮಳಿಗೆಗಳಲ್ಲಿ ಡಿಸ್ಕೌಂಟ್ ಸೇಲ್ಸ್ ಇವೆ. ನಿರ್ದಿಷ್ಟ ಕ್ರೆಡಿಟ್ ಕಾರ್ಡ್ಗಳಿಂದಲೂ ಡಿಸ್ಕೌಂಟ್, ರಿವಾರ್ಡ್ ಇತ್ಯಾದಿ ಸಿಗುತ್ತವೆ.
ನೀವು ಯಾವುದಕ್ಕೆ ಹೆಚ್ಚು ಶಾಪಿಂಗ್ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಅದಕ್ಕೆ ತಕ್ಕಂತಹ ಕ್ರೆಡಿಟ್ ಕಾರ್ಡ್ ಪಡೆಯುವುದು ಜಾಣತನ. ನೀವು ಥಿಯೇಟರ್ನಲ್ಲಿ ಸಿನಿಮಾ ನೋಡುವುದು ಹೆಚ್ಚಿದ್ದರೆ, ಎಚ್ಡಿಎಫ್ಸಿ ಬ್ಯಾಂಕ್ ಡೈನರ್ಸ್ ಕ್ಲಬ್ ಪ್ರಿವಿಲೀಜ್ ಕಾರ್ಡ್, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೀಗೆ ಡಿಸ್ಕೌಂಟ್ ಕೊಡುವ ಕಾರ್ಡ್ಗಳಲ್ಲಿ ಒಂದನ್ನು ಆಯ್ದುಕೊಳ್ಳಬಹುದು.
ಹೋಟೆಲ್ನಲ್ಲಿ ಊಟಕ್ಕೆ ಹೆಚ್ಚು ವ್ಯಯಿಸುತ್ತಿದ್ದರೆ ಡೈನಿಂಗ್ ಕ್ರೆಡಿಟ್ ಕಾರ್ಡ್ಗಳನ್ನು ಹುಡುಕಬಹುದು. ಬಟ್ಟೆ ಬರೆ ಶೂ ಚಪ್ಪಲಿ ಶಾಪಿಂಗ್ಗೆ ಹೆಚ್ಚು ಡಿಸ್ಕೌಂಟ್ ಕೊಡುವ ಕಾರ್ಡ್ಗಳಿವೆ. ಪೆಟ್ರೋಲ್ಗೆ ಕೆಲ ಕಾರ್ಡ್ಗಳು ಡಿಸ್ಕೌಂಟ್ ಕೊಡುತ್ತವೆ. ರೈಲ್ವೆ, ವಿಮಾನ ಟಿಕೆಟ್ ಬುಕಿಂಗ್ಗೆ ಡಿಸ್ಕೌಂಟ್ ಕೊಡುವ ಕಾರ್ಡ್ ಇದೆ. ನಿಮಗೆ ಸೂಕ್ತವೆನಿಸುವ ಕಾರ್ಡ್ ಅಥವಾ ಕಾರ್ಡ್ಗಳನ್ನು ಆಯ್ದುಕೊಳ್ಳಬೇಕು.
ಇಂಥ ಕಾರ್ಡ್ಗಳಿಂದ ನೀವು ಶಾಪಿಂಗ್ ಮಾಡಿದಾಗ ಶೇ. 1ರಿಂದ 10ರಷ್ಟು ರಿಯಾಯಿತಿ ಪಡೆಯಬಹುದು. ಕೆಲವೊಮ್ಮೆ ಶೇ. 15ರಷ್ಟು ರಿಯಾಯಿತಿ ಸಿಗಬಹುದು. ಕೆಲ ಶಾಪಿಂಗ್ನಲ್ಲಿ ನಿರ್ದಿಷ್ಟ ಕ್ರೆಡಿಟ್ ಕಾರ್ಡ್ಗಳಿಗೆ ಡಿಸ್ಕೌಂಟ್ ಸಿಗುತ್ತದೆ.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಬಡ್ಡಿ ಇಳಿಕೆ ಸಾಧ್ಯತೆ; ಈಗಲೇ ಎಫ್ಡಿ ಇಡಲು ತ್ವರೆ ಮಾಡಿ
ಆದರೆ, ಎಚ್ಚರ ವಹಿಸಬೇಕಾದ ಸಂಗತಿ ಎಂದರೆ, ರಿಯಾಯಿತಿ ಅಥವಾ ರಿವಾರ್ಡ್ ಸಿಗುತ್ತದೆಂದು ಕ್ರೆಡಿಟ್ ಕಾರ್ಡ್ ಅನ್ನು ಮಿತಿಮೀರಿ ಬಳಸುವ ತಪ್ಪು ಮಾಡಬಾರದು. ಇಲ್ಲವಾದರೆ ಅನಗತ್ಯ ವೆಚ್ಚ ಕಾಣಬೇಕಾಗುತ್ತದೆ. ಅದರ ಪರಿಣಾಮವಾಗಿ ಸಾಲದ ವಿಷ ವರ್ತುಲಕ್ಕೂ ಸಿಲುಕಬೇಕಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ