Post Office Savings: ಆನ್​ಲೈನ್, ಆಫ್​​ಲೈನ್​ನಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್​ ಪರಿಶೀಲಿಸಲು ಹೀಗೆ ಮಾಡಿ

ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್​ ಅನ್ನು ಆಫ್​ಲೈನ್ ಮತ್ತು ಆನ್​ಲೈನ್ ಮೂಲಕ ಪರಿಶೀಲಿಸುವ ಸುಲಭ ವಿಧಾನಗಳ ಮಾಹಿತಿ ಇಲ್ಲಿದೆ.

Post Office Savings: ಆನ್​ಲೈನ್, ಆಫ್​​ಲೈನ್​ನಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್​ ಪರಿಶೀಲಿಸಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ

Updated on: Feb 28, 2023 | 9:00 AM

ದೇಶದಲ್ಲಿ ಅನೇಕ ಮಂದಿ ಅಂಚೆ ಕಚೇರಿಯಲ್ಲಿ (Post Office) ಉಳಿತಾಯ ಖಾತೆ (Savings Account) ತೆರೆಯುತ್ತಾರೆ. ತೆರಿಗೆ ಉಳಿತಾಯ ಸೇರಿದಂತೆ ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ ದೊರೆಯುವ ಅನೇಕ ಸೌಲಭ್ಯಗಳೇ ಇದಕ್ಕೆ ಕಾರಣ. ಕನಿಷ್ಠ 500 ರೂ. ಮೊತ್ತದೊಂದಿಗೆ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬಹುದಾಗಿದೆ. ಆನ್​ಲೈನ್ ಮತ್ತು ಆಫ್​ಲೈನ್ ಮೂಲಕವೂ ಖಾತೆ ತೆರೆಯಬಹುದಾಗಿದೆ. ಅಂಚೆ ಕಚೇರಿಯ ಕೆಲವು ಉಳಿತಾಯ ಖಾತೆ ಯೋಜನೆಗಳಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ 10,000 ರೂ. ವರೆಗಿನ ಠೇವಣಿಯ ಬಡ್ಡಿಗೆ ತೆರಿಗೆ ವಿನಾಯಿತಿ ಪಡೆಯಲೂ ಅವಕಾಶವಿದೆ. ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್​ ಅನ್ನು ಆಫ್​ಲೈನ್ ಮತ್ತು ಆನ್​ಲೈನ್ ಮೂಲಕ ಪರಿಶೀಲಿಸುವ (Balance check) ಸುಲಭ ವಿಧಾನಗಳ ಮಾಹಿತಿ ಇಲ್ಲಿದೆ.

ಇ ಪಾಸ್​​ಬುಕ್ ವ್ಯವಸ್ಥೆ

ಅಂಚೆ ಕಚೇರಿ ಉಳಿತಾಯ ಯೋಜನೆಗೆ ಇ-ಪಾಸ್​ಬುಕ್ ವ್ಯವಸ್ಥೆಯನ್ನು ಕಳೆದ ವರ್ಷ ಸರ್ಕಾರ ಜಾರಿಗೆ ತಂದಿದೆ. ಇದಕ್ಕೆ ಅಂಚೆ ಕಚೇರಿ ಆ್ಯಪ್​ಗೆ ಸೈನ್ ಇನ್ ಆಗುವ ಮೂಲಕ ಬ್ಯಾಲೆನ್ಸ್ ಆ್ಯಂಡ್ ಸ್ಟೇಟ್​​ಮೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ‘ಗೋ’ ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ಡ್ಯಾಶ್​ಬೋರ್ಡ್​​ಗೆ ರಿಡೈರೆಕ್ಟ್ ಆಗುತ್ತದೆ. ನಂತರ ನೀವು ಸ್ಟೇಟ್​​ಮೆಂಟ್ ನೋಡಬಹುದು ಮತ್ತು ಡೌನ್​ಲೋಡ್ ಮಾಡಿಕೊಳ್ಳಬಹುದು.

ಎಸ್​ಎಂಎಸ್ ಮೂಲಕ ಬ್ಯಾಲೆನ್ಸ್​ ತಿಳಿಯವುದು ಹೇಗೆ?

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738062873 ಈ ಸಂಖ್ಯೆಗೆ REGISTER ಎಂದು ಎಸ್​ಎಂಎಸ್ ಕಳುಹಿಸಬೇಕು. ಈಗ ನಿಮ್ಮ ಮೊಬೈಲ್ ಸಂಖ್ಯೆ ಎಸ್​ಎಂಎಸ್ ಸೇವೆಗೆ ನೋಂದಾವಣೆಯಾಗುತ್ತದೆ. ನಂತರ ‘Bal’ ಎಂದು ಎಸ್​​ಎಂಎಸ್ ಕಳುಹಿಸಬೇಕು. ಮಿನಿ ಸ್ಟೇಟ್​ಮೆಂಟ್ ಪಡೆಯಲು ‘Mini’ ಎಂದು ಎಸ್​ಎಂಎಸ್ ಕಳುಹಿಸಬೇಕು.

ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ತಿಳಿಯುವುದು ಹೇಗೆ?

ಕಾಲ್ ಬ್ಯಾಂಕಿಂಗ್​ಗೆ ನೋಂದಣಿ ಮಾಡುವುದಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8424054994 ಈ ಸಂಖ್ಯೆಗೆ ಡಯಲ್ ಮಾಡಿ. ಕಾಲ್ ಬ್ಯಾಂಕಿಂಗ್ ನೋಂದಣಿಯಾದ ಬಳಿಕ ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಬ್ಯಾಲೆನ್ಸ್ ಹಾಗೂ ಮಿನಿ ಸ್ಟೇಟ್​ಮೆಂಟ್ ಪಡೆಯಬಹುದು.

ಇಷ್ಟೇ ಅಲ್ಲದೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೊಬೈಲ್ ಆ್ಯಪ್ ಇನ್​​ಸ್ಟಾಲ್ ಮಾಡಿಕೊಂಡು ಅದರ ಮೂಲಕವೂ ಬ್ಯಾಲೆನ್ಸ್, ಮಿನಿ ಸ್ಟೇಟ್​ಮೆಂಟ್ ಪಡೆಯಬಹುದು. ಮೊದಲು ಒಟಿಪಿ ಮೂಲಕ ಮೊಬೈಲ್ ಆ್ಯಪ್​ ರಿಜಿಸ್ಟರ್ ಮಾಡಿ ಎಂಪಿನ್ ಸೆಟ್ ಮಾಡಬೇಕಾಗುತ್ತದೆ. 155299 ಟೋಲ್​ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕವೂ ಬ್ಯಾಲೆನ್ಸ್ ತಿಳಿಯಬಹುದಾಗಿದೆ. ಅಂಚೆ ಕಚೇರಿಗಳಲ್ಲಿ ಅಂಟಿಸಿರುವ ಕ್ಯುಆರ್ ಕೋಡ್​ ಸ್ಕ್ಯಾನ್ ಮಾಡುವ ಮೂಲಕವೂ ಬ್ಯಾಲೆನ್ಸ್ ತಿಳಿಯಲು, ಮಿನಿ ಸ್ಟೇಟ್​​ಮೆಂಟ್ ಪಡೆಯಲು ಅವಕಾಶವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us