SCSS Scheme: ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ; ಎಸ್​ಸಿಎಸ್​ಎಸ್​ನಲ್ಲಿ ಹಿರಿಯ ನಾಗರಿಕರ ಠೇವಣಿಗೆ ಸಿಗುತ್ತೆ ಶೇ 8ರ ಬಡ್ಡಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಅಥವಾ ಎಸ್​ಸಿಎಸ್​ಎಸ್ ಬಡ್ಡಿ ದರ ಈಗ ಶೇ 8 ಆಗಿದೆ. ಇದು ಬ್ಯಾಂಕ್​ಗಳು ಹಿರಿಯ ನಾಗರಿಕರ ಠೇವಣಿಗೆ ನೀಡುವ ಬಡ್ಡಿಗಿಂತಲೂ 50ರಿಂದ 75 ಮೂಲಾಂಶದಷ್ಟು ಹೆಚ್ಚಾಗಿದೆ.

SCSS Scheme: ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ; ಎಸ್​ಸಿಎಸ್​ಎಸ್​ನಲ್ಲಿ ಹಿರಿಯ ನಾಗರಿಕರ ಠೇವಣಿಗೆ ಸಿಗುತ್ತೆ ಶೇ 8ರ ಬಡ್ಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 09, 2023 | 1:40 PM

ಹೊಸ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರವು ವಿವಿಧ ಸಣ್ಣ ಉಳಿತಾಯ ಯೋಜನೆಗಳ (Small Savings Scheme) ಬಡ್ಡಿ ದರ ಹೆಚ್ಚಳ (Interest Rate Hike) ಘೋಷಿಸಿತ್ತು. ಇದೀಗ ಪರಿಷ್ಕೃತ ಬಡ್ಡಿ ದರ ಚಾಲ್ತಿಗೆ ಬಂದಿದ್ದು, ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (senior citizen savings scheme) ಹೂಡಿಕೆ ಮಾಡುವ ಮೂಲಕ ಶೇಕಡಾ 8ರ ವರೆಗೆ ಬಡ್ಡಿ ಪಡೆಯಬಹುದಾಗಿದೆ. ಒಂದು ವರ್ಷದ ಟೈಮ್ ಡಿಪಾಸಿಟ್ (time deposit) ಬಡ್ಡಿ ದರವನ್ನು ಶೇ 5.5ರಿಂದ ಶೇ 6.6ಕ್ಕೆ ಹೆಚ್ಚಿಸಲಾಗಿದೆ. ಇದು ಎಸ್​ಬಿಐ ಒಂದು ವರ್ಷದ ಟೈಮ್ ಡಿಪಾಸಿಟ್ ಬಡ್ಡಿಗಿಂತಲೂ (ಶೇ 5.75) ಹೆಚ್ಚಾಗಿದೆ.

ಎರಡು ವರ್ಷ ಅವಧಿಯ ಅಂಚೆ ಕಚೇರಿ ಡಿಪಾಸಿಟ್ ಯೋಜನೆ ಬಡ್ಡಿಯನ್ನು ಶೇ 5.7ರಿಂದ ಶೇ 6.8ಕ್ಕೆ ಹೆಚ್ಚಿಸಲಾಗಿದೆ. ಎಸ್​ಬಿಐನಲ್ಲಿ ಇದು ಶೇ 6.75ರಷ್ಟಿದೆ. ದೀರ್ಘಾವಧಿಗೆ, 5 ವರ್ಷಗಳ ಅಂಚೆ ಕಚೇರಿ ಉಳಿತಾಯ ಯೋಜನೆಯ ಬಡ್ಡಿಯನ್ನು ಶೇ 7ಕ್ಕೆ ಹೆಚ್ಚಿಸಲಾಗಿದೆ. ಎಸ್​​ಬಿಐನಲ್ಲಿ 5ರಿಂದ 10 ವರ್ಷ ಅವಧಿಯ ಠೇವಣಿಗೆ ಶೇ 6.25ರ ಬಡ್ಡಿಯಷ್ಟೇ ಇದೆ.

ಇದನ್ನೂ ಓದಿ: New Year Gift: ಹೊಸ ವರ್ಷಕ್ಕೆ ಗಿಫ್ಟ್; ಅಂಚೆ ಸೇರಿದಂತೆ ಹಲವು ಠೇವಣಿಗಳ ಬಡ್ಡಿ ದರ ಜನವರಿ 1ರಿಂದ ಹೆಚ್ಚಳ

ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಬಡ್ಡಿ ವಿವರ

ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಅಥವಾ ಎಸ್​ಸಿಎಸ್​ಎಸ್ ಬಡ್ಡಿ ದರ ಈಗ ಶೇ 8 ಆಗಿದೆ. ಇದು ಬ್ಯಾಂಕ್​ಗಳು ಹಿರಿಯ ನಾಗರಿಕರ ಠೇವಣಿಗೆ ನೀಡುವ ಬಡ್ಡಿಗಿಂತಲೂ 50ರಿಂದ 75 ಮೂಲಾಂಶದಷ್ಟು ಹೆಚ್ಚಾಗಿದೆ. 60 ವರ್ಷ ಮೇಲ್ಪಟ್ಟವರು ಈ ಠೇವಣಿ ಇಡಬಹುದಾಗಿದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 55 ವರ್ಷ ಮೇಲ್ಪಟ್ಟವರಾದರೆ ಸ್ವಯಂ ನಿವೃತ್ತಿ ಯೋಜನೆಯಡಿ ಠೇವಣಿ ಇಡಬಹುದಾಗಿದೆ. ನಿವೃತ್ತಿ ಸೌಲಭ್ಯ ದೊರೆತ ಒಂದು ತಿಂಗಳ ಒಳಗಾಗಿ ಠೇವಣಿ ಇಡದಿದ್ದರೆ ನಂತರ ಅವಕಾಶ ಸಿಗಲಾರದು ಎಂಬುದನ್ನು ಗಮನಿಸಬೇಕು.

ಈ ಠೇವಣಿಗೆ ಐದು ವರ್ಷಗಳ ಲಾಕ್​ ಇನ್ ಅವಧಿ ಇದೆ. ಠೇವಣಿ ಆರಂಭಿಸಿದ 3 ವರ್ಷಗಳ ನಂತರವಷ್ಟೇ ಲಾಕ್ ಇನ್ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಲು ಅವಕಾಶವಿದೆ. ಕನಿಷ್ಠ 1,000 ರೂ.ನಿಂದ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್