ನೀವು ಹಳೆಯ ಇನ್ಕಮ್ ಟ್ಯಾಕ್ಸ್ ರೆಜಿಮೆಯಲ್ಲೇ (old tax regime) ಇದ್ದಲ್ಲಿ ಆದಾಯ ತೆರಿಗೆ ಉಳಿಸುವ ಅವಕಾಶಗಳು ಇರುತ್ತವೆ. ಐಟಿ ಸೆಕ್ಷನ್ 80 ಸಿ, ಡಿ, ಇತ್ಯಾದಿ ಸರಣಿಗಳ ಅಡಿಯಲ್ಲಿ ಹೂಡಿಕೆ ಮಾಡಿದರೆ ಆ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ, ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿ (income tax exemption limit) ವರ್ಷಕ್ಕೆ 1.5 ಲಕ್ಷ ರೂ ಇರುತ್ತದೆ. ಸೆಕ್ಷನ್ 80ಡಿ ಅಡಿಯಲ್ಲಿ ಮಿತಿ 25,000 ರೂ ಇರುತ್ತದೆ. ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ಎನ್ಪಿಎಸ್ಗೆ ಮಾಡಿದ ಹೂಡಿಕೆಗೆ ವರ್ಷಕ್ಕೆ 50,000 ರೂವರೆಗೂ ತೆರಿಗೆ ವಿನಾಯಿತಿ ಪಡೆಯಬಹುದು. ಅಲ್ಲಿಗೆ ಹಳೆಯ ತೆರಿಗೆ ರೆಜಿಮೆಯಲ್ಲಿ ಒಟ್ಟಾರೆ 2.25 ಲಕ್ಷ ರೂವರೆಗಿನ ಹಣಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದು.
ನಿಮಗೆ ಅನುಕೂಲಕರವಾದ ಒಂದು ಅಥವಾ ಹೆಚ್ಚಿನ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ಆದರೆ, ಒಟ್ಟಾರೆ 1.5 ಲಕ್ಷ ರೂಗೆ ಮಾತ್ರವೇ ತೆರಿಗೆ ವಿನಾಯಿತಿ ಇರುತ್ತದೆ.
ಸೆಕ್ಷನ್ 80ಸಿ ಅಡಿಯಲ್ಲಿ ಇರುವ 1.5 ಲಕ್ಷ ರೂ ಟ್ಯಾಕ್ಸ್ ಎಕ್ಸೆಂಪ್ಷನ್ ಅವಕಾಶದ ಜೊತೆಗೆ ಹೆಚ್ಚುವರಿಯಾಗಿ 25,000 ರೂಗೆ ವಿನಾಯಿತಿ ಪಡೆಯಬಹುದು. ಹೆಲ್ತ್ ಇನ್ಷೂರೆನ್ಸ್ ಖರೀದಿಸುವುದರಿಂದ ಅದು ಸಾಧ್ಯ.
ಇದನ್ನೂ ಓದಿ: ಮಕ್ಕಳ ಉನ್ನತ ಶಿಕ್ಷಣಕ್ಕೆ 15 ವರ್ಷದಲ್ಲಿ ಮೂರು ಕೋಟಿ ರೂ ಗಳಿಸುವುದು ಹೇಗೆ?
ನ್ಯಾಷನಲ್ ಪೆನ್ಷನ್ ಸಿಸ್ಟಂ ಯೋಜನೆಯಲ್ಲಿ ಹಣ ತೊಡಗಿಸಿದರೆ ವರ್ಷಕ್ಕೆ 50,000 ರೂವರೆಗಿನ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.
ಈ ರೀತಿಯಲ್ಲಿ 2.25 ಲಕ್ಷ ರುಪಾಯಿಗೆ ನೀವು ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಹಳೆಯ ಟ್ಯಾಕ್ಸ್ ಸಿಸ್ಟಂನಲ್ಲಿ ನಿಮ್ಮ ಆದಾಯದಲ್ಲಿ ಎರಡೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಹೇರಿಕೆ ಇರುವುದಿಲ್ಲ. ಈಗ ವಿವಿಧ ಹೂಡಿಕೆಗಳ ಮೂಲಕ ಹತ್ತಿರ ಹತ್ತಿರ ಐದು ಲಕ್ಷ ರೂವರೆಗೆ ನೀವು ತೆರಿಗೆಯನ್ನು ದೂರವಿಡಬಹುದು. ಅದಕ್ಕಿಂತ ಮೇಲಿನ ಆದಾಯಕ್ಕೆ ತೆರಿಗೆ ಕಟ್ಟಬೇಕಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ