ಉದ್ಯೋಗ ನಷ್ಟಕ್ಕೂ ಇದೆ ವಿಮೆ; ಮಾಡಿಸುವುದಾದರೆ ಈ ವಿಷಯಗಳನ್ನು ತಿಳಿದಿರಿ
Job Loss Cover; ಉದ್ಯೋಗ ಕಡಿತದ ಕುರಿತು ಹೆಚ್ಚೆಚ್ಚು ವರದಿಗಳು ಪ್ರಕಟವಾಗುತ್ತಿರುವಂತೆಯೇ ಅನೇಕರು ಉದ್ಯೋಗ ನಷ್ಟದ ವಿರುದ್ಧ ವಿಮೆ ಮಾಡಿಸಲು ಮುಂದಾಗುತ್ತಿದ್ದಾರೆ. ಅನೇಕ ಪಾಲಿಸಿಯ ಆಯ್ಕೆಗಳೂ ಈಗ ಸಿಗುತ್ತಿವೆ. ಹಣಕಾಸಿನ ಸುರಕ್ಷತೆಗಾಗಿ ಜನ ಇದನ್ನು ಆಯ್ಕೆ ಮಾಡಿಕೊಳ್ಳುವುದು ಸಹಜವಾದರೂ ಇದರಲ್ಲಿ ಕೆಲವು ತೊಡಕುಗಳಿವೆ.
ಪ್ರಸ್ತುತ ಸನ್ನಿವೇಶದಲ್ಲಿ ಕಂಪನಿಗಳಲ್ಲಿ ಉದ್ಯೋಗ ಕಡಿತ (Layoffs), ಉದ್ಯೋಗಿಗಳನ್ನು ವಜಾಗೊಳಿಸುವುದು ದೈನಂದಿನ ಸುದ್ದಿಯಾಗಿದೆ. 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಅಮೆಜಾನ್ (Amazon) ಇತ್ತೀಚೆಗೆ ಘೋಷಿಸಿದೆ. ಭಾರತದಲ್ಲೂ ಕಂಪನಿಯು ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ಮಾಡಲಿದೆ ಎಂದೂ ವರದಿಯಾಗಿದೆ. ಮೈಕ್ರೋಸಾಫ್ಟ್, ಮೆಟಾ, ಟ್ವಿಟರ್ ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಉದ್ಯೋಗ ನಷ್ಟ ಅಥವಾ ಕೆಲಸ ಕಳೆದುಕೊಳ್ಳುವುದು (Job Loss) ಜನರನ್ನು ಮಾನಸಿಕವಾಗಿ ಬಳಲುವಂತೆ ಮಾಡುತ್ತದೆ. ಆರ್ಥಿಕವಾಗಿಯೂ ತಮ್ಮ ಬದ್ಧತೆಗಳನ್ನು ಪೂರೈಸುವುದು ಅವರಿಗೆ ಕಷ್ಟವಾಗುತ್ತದೆ. ಪ್ರತಿ ತಿಂಗಳು ಬರುವ ವೇತನ ಹಠಾತ್ತಾಗಿ ಸ್ಥಗಿತಗೊಂಡರೆ ಸಾಲಗಳ ಇಎಂಐ ಪಾವತಿ, ಮನೆ ಬಾಡಿಗೆಯಂಥ ಪ್ರಮುಖ ಖರ್ಚುಗಳಿಗೆ ಆದಾಯವಿಲ್ಲದಾಗುತ್ತದೆ. ಇಂಥ ಸಂದರ್ಭದಿಂದ ರಕ್ಷಣೆ ಪಡೆಯಲೂ ವಿಮೆ ಆಯ್ಕೆಗಳಿವೆ.
ಉದ್ಯೋಗ ಕಡಿತದ ಕುರಿತು ಹೆಚ್ಚೆಚ್ಚು ವರದಿಗಳು ಪ್ರಕಟವಾಗುತ್ತಿರುವಂತೆಯೇ ಅನೇಕರು ಉದ್ಯೋಗ ನಷ್ಟದ ವಿರುದ್ಧ ವಿಮೆ ಮಾಡಿಸಲು ಮುಂದಾಗುತ್ತಿದ್ದಾರೆ. ಅನೇಕ ಪಾಲಿಸಿಯ ಆಯ್ಕೆಗಳೂ ಈಗ ಸಿಗುತ್ತಿವೆ. ಹಣಕಾಸಿನ ಸುರಕ್ಷತೆಗಾಗಿ ಜನ ಇದನ್ನು ಆಯ್ಕೆ ಮಾಡಿಕೊಳ್ಳುವುದು ಸಹಜವಾದರೂ ಇದರಲ್ಲಿ ಕೆಲವು ತೊಡಕುಗಳಿವೆ. ನೀವು ಉದ್ಯೋಗ ನಷ್ಟದ ವಿಮೆ ಮಾಡಿಸಿಕೊಳ್ಳುವುದಾದರೆ ಇಲ್ಲಿ ನೀಡಿರುವ ಅಂಶಗಳ ಬಗ್ಗೆ ಗಮನಹರಿಸಿ.
ಉದ್ಯೋಗ ನಷ್ಟದ ವಿರುದ್ಧ ವಿಮೆ; ಸಮಸ್ಯೆಗಳೇನು?
ಉದ್ಯೋಗ ನಷ್ಟದ ವಿರುದ್ಧ ಇರುವ ಅನೇಕ ವಿಮೆಗಳು ಉದ್ಯೋಗದಿಂದ ನೇರವಾಗಿ ವಜಾಗೊಂಡರೆ ಮಾತ್ರ, ಅಂದರೆ ಅನೈಚ್ಛಿಕ ಉದ್ಯೋಗ ನಷ್ಟಕ್ಕೆ ಮಾತ್ರ ಅನ್ವಯವಾಗುತ್ತವೆ. ತಾನು ವಜಾಗೊಂಡಿರುವುದಾಗಿ ವಿಮಾ ಕಂಪನಿಗಳಿಗೆ ಸಾಬೀತುಪಡಿಸುವುದು ಉದ್ಯೋಗಿಗಳಿಗೆ ಕಷ್ಟವಾಗಬಹುದು. ಯಾಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಕಂಪನಿಗಳು ನೇರವಾಗಿ ಉದ್ಯೋಗಿಗಳನ್ನು ವಜಾ ಮಾಡುವುದಿಲ್ಲ. ಬದಲಾಗಿ ಅವರಾಗಿಯೇ ರಾಜೀನಾಮೆ ನೀಡುವಂತೆ ಮಾಡುತ್ತವೆ.
ಆದರೆ ದೀರ್ಘಾವಧಿಯ ನಿರುದ್ಯೋಗದ ಸಂದರ್ಭದಲ್ಲಿ, ಅಸ್ತಿತ್ವದಲ್ಲಿರುವ ವಿಮೆ ಪಾಲಿಸಿಯನ್ನು ರಿನೀವಲ್ ಮಾಡದೆ ಇರುವುದು ನ್ಯಾಯಸಮ್ಮತವಲ್ಲ. ಇದನ್ನೂ ಆರೋಗ್ಯ ವಿಮೆಯಂತೆ ರಿನೀವಲ್ ಮಾಡುತ್ತಾ ಇರಬೇಕಾಗುತ್ತದೆ.
ಇದನ್ನೂ ಓದಿ: Amazon layoffs: ಅಮೆಜಾನ್ನಿಂದ ಭಾರತದಲ್ಲೂ ಉದ್ಯೋಗ ಕಡಿತ; ಆತಂಕದಲ್ಲಿ ಉದ್ಯೋಗಿಗಳು
ಉದ್ಯೋಗದಿಂದ ವಜಾಗೊಂಡವರು ತೆರಿಗೆ ಪಾವತಿಸಬೇಕಾದ ಒತ್ತಡಕ್ಕೂ ಒಳಗಾಗುವ ಸಾಧ್ಯತೆ ಇದೆ. ಯಾಕೆಂದರೆ ಕಂಪನಿಗಳಿಂದ ದೊರೆಯುವ ಬೇರ್ಪಡಿಕೆ ಪ್ಯಾಕೇಜ್ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ, ತೆರಿಗೆ ಸಲಹೆಗಾರರಿಂದ ಸಲಹೆ ಪಡೆದು ಕೆಲವೊಂದು ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಬಹುದಾಗಿದೆ. ಉದಾಹರಣೆಗೆ; ರಜೆಯ ಪ್ರಯಾಣದ ಭತ್ಯೆ ಬೇರ್ಪಡಿಕೆ ಪ್ಯಾಕೇಜ್ನ ಭಾಗವಾಗಿದ್ದರೆ ಅದಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ವೈಯಕ್ತಿಕ ಹಣಕಾಸು, ಉಳಿತಾಯಕ್ಕೆ ಮೊದಲೇ ಗಮನಹರಿಸಿ
ಉದ್ಯೋಗಕ್ಕೆ ಸಂಬಂಧಿಸಿದ ಅಭದ್ರತೆಯ ಈ ಸಂದರ್ಭದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಿಂಬಡ್ತಿಯ ಸವಾಲುಗಳನ್ನು ಎದುರಿಸಲು ವೈಯಕ್ತಿಕ ಹಣಕಾಸಿನ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ.
ಉದ್ಯೋಗ ನಷ್ಟದ ಸಂದರ್ಭದಲ್ಲಿ ಸಾಲ ಮರುಪಾವತಿ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಇದಕ್ಕಾಗಿ ಮೂರು ತಿಂಗಳ ಸಾಲ ಮರುಪಾವತಿಗಾಗುವಷ್ಟು ಮೊದಲೇ ಉಳಿತಾಯ ಮಾಡಿಟ್ಟುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ವೈಯಕ್ತಿಕ ಹಣಕಾಸು ತಜ್ಞರು. ಹೀಗೆ ಉಳಿತಾಯ ಮಾಡುವ ಹಣ ಸಂಕಷ್ಟದ ಸಮಯದಲ್ಲಿ ನೆರವಿಗೆ ಬರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Wed, 16 November 22