AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಮನೆ ಖರೀದಿ ಮುಂಗಡ

7th Pay Commission; ಎಚ್​ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಕಡಿಮೆ ಬಡ್ಡಿ ದರದಲ್ಲಿ 34 ತಿಂಗಳ ಮೂಲ ವೇತನ ಅಥವಾ 25 ಲಕ್ಷ ರೂ. ವರೆಗೆ ಮುಂಗಡ ಪಡೆಯಬಹುದಾಗಿದೆ.

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಮನೆ ಖರೀದಿ ಮುಂಗಡ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Nov 16, 2022 | 5:54 PM

Share

ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗ(7th Pay Commission) ಶಿಫಾರಸಿನ ಪ್ರಕಾರ, 2023ರ ಮಾರ್ಚ್ 31ರ ವರೆಗೆ ಕಡಿಮೆ ಬಡ್ಡಿ ದರದಲ್ಲಿ (Interest Rate) ಮನೆ ನಿರ್ಮಾಣ ಮುಂಗಡ ಅಥವಾ ಹೌಸ್ ಬ್ಯುಲ್ಡಿಂಗ್ ಅಡ್ವಾನ್ಸ್ (HBA) ಪಡೆಯಬಹುದಾಗಿದೆ. ಸದ್ಯ ಎಚ್​ಬಿಎ ಬಡ್ಡಿ ದರ ಶೇಕಡಾ 7.1ರಷ್ಟಿದೆ. ಬಡ್ಡಿ ದರವನ್ನು ಕಡಿಮೆ ಮಾಡುವ ಬಗ್ಗೆ 2022ರ ಏಪ್ರಿಲ್ 1ರಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತೀರ್ಮಾನ ಕೈಗೊಂಡಿತ್ತು. ಎಚ್​ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು (Central Government Employees) ಮನೆ ನಿರ್ಮಾಣ, ಮನೆ ನಿರ್ಮಾಣಕ್ಕಾಗಿ ನಿವೇಶನ ಖರೀದಿ, ವಸತಿ ಸೌಕರ್ಯಗಳ ವಿಸ್ತರಣೆ, ಫ್ಲ್ಯಾಟ್ ಅಥವಾ ಮನೆ ಖರೀದಿಸಲು ಮನೆ ನಿರ್ಮಾಣ ಮುಂಗಡ ಹಣ ಪಡೆಯಬಹುದಾಗಿದೆ. ಮನೆ ನಿರ್ಮಾಣ ಈಗಾಗಲೇ ಪ್ರಾರಂಭಿಸಿದ್ದರೂ ಸಹ ಮುಂಗಡ ಪಡೆಯಲು ಅವಕಾಶವಿದೆ.

ಶೇಕಡಾ 7.1ರ ಬಡ್ಡಿಯಲ್ಲಿ 25 ಲಕ್ಷ ರೂ.ವರೆಗೆ ಲಭ್ಯ

2017ರ ಎಚ್​ಬಿಎ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು 34 ತಿಂಗಳ ಮೂಲ ವೇತನ ಅಥವಾ 25 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಮುಂಗಡ ಪಡೆಯಬಹುದಾಗಿದೆ. ಒಂದು ವೇಳೆ ಮನೆ ಅಥವಾ ಫ್ಲ್ಯಾಟ್​ ದರ 25 ಲಕ್ಷ ರೂ.ಗಿಂತ ಕಡಿಮೆ ಇದ್ದಲ್ಲಿ ಕಡಿಮೆ ಮುಂಗಡ ಪಡೆಯಬಹುದು.

ಮನೆ ವಿಸ್ತರಣೆಗೂ ಪಡೆಯಬಹುದು ಮುಂಗಡ

ಕೇಂದ್ರ ಸರ್ಕಾರಿ ಉದ್ಯೋಗಿಗಳು ಈಗಾಗಲೇ ಮನೆ ಹೊಂದಿದ್ದರೆ ಅದರ ವಿಸ್ತರಣೆಗೂ ಎಚ್​ಬಿಎ ನಿಯಮದ ಅಡಿಯಲ್ಲಿ ಮುಂಗಡ ಪಡೆಯಬಹುದಾಗಿದೆ. ನೌಕರರ 34 ತಿಂಗಳ ಮೂಲ ವೇತನ ಅಥವಾ 10 ಲಕ್ಷ ರೂ. ವರೆಗೆ ಮುಂಗಡ ಪಡೆಯಲು ಅವಕಾಶವಿದೆ.

ಮುಂಗಡದ ಮೊತ್ತ ನೌಕರರು ಖರೀದಿಸುವ ಮನೆ ಅಥವಾ ನಿವೇಶನದ ಒಟ್ಟು ಮೊತ್ತದ ಶೇಕಡಾ 80 ಅನ್ನು ಮೀರುವಂತಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ. ಮನೆ ವಿಸ್ತರಣೆಗೂ ಇದೇ ನಿಯಮ ಅನ್ವಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಖರೀದಿ ಅಥವಾ ನಿರ್ಮಾಣ ಮಾಡುವುದಾದರೆ ಸಂಬಂಧಿಸಿದ ವಿಭಾಗ ಮುಖ್ಯಸ್ಥರಿಂದ ಅನುಮತಿ ದೊರೆತರೆ ಶೇಕಡಾ 100ರ ವರೆಗೂ ಮುಂಗಡ ಪಡೆಯಬಹುದಾಗಿದೆ. ಆದರೆ, 25 ಲಕ್ಷ ರೂ. ಒಳಗಿದ್ದಲ್ಲಿ ಮಾತ್ರ ಇದು ಅನ್ವಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Wed, 16 November 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ