ನಿಮ್ಮ ಇಪಿಎಫ್ ಖಾತೆಗೆ ನಾಮಿನಿ ಹೆಸರು ಸೇರಿಸುವುದು ಹೇಗೆ? ಆನ್ಲೈನ್​ನಲ್ಲಿ ಮಾಡುವ ಕ್ರಮಗಳಿವು…

|

Updated on: Jul 03, 2024 | 6:43 PM

Adding nominee to EPF account: ಬ್ಯಾಂಕ್ ಖಾತೆ, ಇನ್ಷೂರೆನ್ಸ್ ಪಾಲಿಸಿ ಹೀಗೆ ಯಾವುದೇ ಹಣಕಾಸು ಯೋಜನೆಗಳಿಗೆ ನಾಮಿನಿ ಮಾಡುವುದು ಬಹಳ ಅವಶ್ಯ. ಇಪಿಎಫ್ ಖಾತೆಗೂ ನಾಮಿನಿ ಸೇರಿಸುವುದು ಉತ್ತಮ. ನೀವು ಅಕಾಲಿಕ ಮೃತ್ಯುವಾದರೆ ನಿಮ್ಮ ಇಪಿಎಫ್ ಹಣ ಯಾರಿಗೆ ಹೋಗಬೇಕು ಎಂಬುದನ್ನು ಈಗಲೇ ನಾಮಿನಿ ಹೆಸರಿಸಬಹುದು. ಆನ್​ಲೈನ್​ನಲ್ಲೇ ನಾಮಿನಿ ಅಪ್​ಡೇಟ್ ಮಾಡುವ ಕ್ರಮ ಇಲ್ಲಿದೆ...

ನಿಮ್ಮ ಇಪಿಎಫ್ ಖಾತೆಗೆ ನಾಮಿನಿ ಹೆಸರು ಸೇರಿಸುವುದು ಹೇಗೆ? ಆನ್ಲೈನ್​ನಲ್ಲಿ ಮಾಡುವ ಕ್ರಮಗಳಿವು...
ಇಪಿಎಫ್
Follow us on

ಯಾವುದೇ ಹಣಕಾಸು ಯೋಜನೆಗಳಿಗೆ ನಾಮಿನಿ ಹೆಸರಿಸುವುದು ಬಹಳ ಮುಖ್ಯ. ಆಕಸ್ಮಿಕವಾಗಿ ಜೀವಕ್ಕೆ ಆಪತ್ತಾದಾಗ ನಮ್ಮನ್ನು ನಂಬಿಕೊಂಡಿರುವವರಿಗೆ ಆ ಹಣ ಪ್ರಾಪ್ತವಾಗಲು ಸಹಾಯವಾಗುತ್ತದೆ. ಇಪಿಎಫ್ ಖಾತೆಗೂ ಕೂಡ ನಾಮಿನಿ ಸಲ್ಲಿಸುವುದು ಅವಶ್ಯಕ. ಇದಕ್ಕಾಗಿ ಕಚೇರಿಗೆ ಹೋಗಿ ಅರ್ಜಿ ಭರ್ತಿ ಮಾಡಿ ದಾಖಲೆ ಸಲ್ಲಿಸುವ ಪ್ರಮೇಯ ಇರುವುದಿಲ್ಲ. ಆನ್​ಲೈನ್​ನಲ್ಲಿ ಸುಲಭವಾಗಿ ನಾಮಿನಿ ಹೆಸರು ಅಪ್​ಡೇಟ್ ಮಾಡಬಹುದು. ಇಪಿಎಫ್​ಒದ ಯೂನಿಫೈಡ್ ಪೋರ್ಟಲ್​ಗೆ ಹೋಗಿ ಯುಎಎನ್ ಬಳಸಿ ಲಾಗಿನ್ ಆಗಿ ಈ ಕೆಲಸ ಮಾಡಬಹುದು.

ಎಷ್ಟು ನಾಮಿನಿಗಳನ್ನು ಬೇಕಾದರೂ ಹೆಸರಿಸಬಹುದು. ಒಬ್ಬರೇ ನಾಮಿನಿ ಆದರೆ ಅಷ್ಟೂ ಹಣಕ್ಕೆ ಅವರು ವಾರಸುದಾರರಾಗುತ್ತಾರೆ. ಒಬ್ಬರಿಗಿಂತ ಹೆಚ್ಚಿನ ನಾಮಿನಿಗಳನ್ನು ಹೆಸರಿಸಬೇಕೆಂದಿದ್ದರೆ ಎಲ್ಲರಿಗೂ ಸಮಾನವಾಗಿ ಪಾಲು ಮಾಡಬಹುದು. ಅಥವಾ ಯಾರಿಗೆಷ್ಟು ಪಾಲು ಆಗಬೇಕು ಎಂಬುದನ್ನೂ ನಮೂದಿಸಬಹುದು. ಉದಾಹರಣೆಗೆ ನಿಮ್ಮ ಪಿಎಫ್ ಹಣಕ್ಕೆ ನೀವು ಇಬ್ಬರು ನಾಮಿನಿಗಳನ್ನು ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಇಬ್ಬರಿಗೂ ತಲಾ 50% ಶೇರ್ ಸಿಗುವಂತೆ ಮಾಡಬಹುದು. ಅಥವಾ ಒಬ್ಬರಿಗೆ ಶೇ. 40, ಮತ್ತೊಬ್ಬರಿಗೆ ಶೇ. 60 ಪಾಲು ಎಂದು ಮಾಡಬಹುದು.

ಇದನ್ನೂ ಓದಿ: ಮನೆಯಲ್ಲೇ ಕ್ಯಾಷ್​ಲೆಸ್ ವೈದ್ಯಕೀಯ ಚಿಕಿತ್ಸೆ ಸೌಲಭ್ಯ; ಸ್ಟಾರ್ ಹೆಲ್ತ್ ಇನ್ಷೂರೆನ್ಸ್​ನಿಂದ 50 ನಗರಗಳಲ್ಲಿ ಹೋಮ್ ಹೆಲ್ತ್ ಕೇರ್ ಸರ್ವಿಸ್

ಇಪಿಎಫ್ ಹಣಕ್ಕೆ ನಾಮಿನಿ ಸೇರಿಸುವ ಕ್ರಮಗಳು

  • ಇಪಿಎಫ್​ಒದ ವೆಬ್​ಸೈಟ್​ಗೆ ಹೋಗಿ: unifiedportal-mem.epfindia.gov.in
  • ಇಲ್ಲಿ ‘ಸರ್ವಿಸಸ್’ ಟ್ಯಾಬ್​ಗೆ ಹೋಗಿ
  • ಅದರಡಿ ‘ಫಾರ್ ಎಂಪ್ಲಾಯೀಸ್’ ಕ್ಲಿಕ್ ಮಾಡಿ
  • ಮೆಂಬರ್ ಯುಎಎನ್/ ಆನ್ಲೈನ್ ಸರ್ವಿಸ್ ಅನ್ನು ಆಯ್ದುಕೊಳ್ಳಿ.
  • ಯುಎಎನ್ ಸಂಖ್ಯೆ ನಮೂದಿಸಿ, ಬಳಿಕ ಪಾಸ್​ವರ್ಡ್ ಹಾಕಿ, ಕ್ಯಾಪ್ಚಾ ಕೋಡ್ ಟೈಪಿಸಿರಿ.
  • ಈಗ ಆಧಾರ್​ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್​ಗೆ ಒಟಿಪಿ ಬರುತ್ತದೆ. ಅದನ್ನು ಹಾಕಬೇಕು.
  • ಈಗ ನೀವು ಪೂರ್ಣವಾಗಿ ಸೈನ್ ಇನ್ ಆಗುತ್ತೀರಿ.
  • ಮ್ಯಾನೇಜ್ ಟ್ಯಾಬ್ ಅಡಿಯಲ್ಲಿ ‘ಇ ನಾಮಿನೇಶನ್’ ಅನ್ನು ಆಯ್ಕೆ ಮಾಡಿರಿ
  • ಪ್ರೊವೈಡ್ ಡೀಟೇಲ್ಸ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನಂತರ ‘ಸೇವ್’ ಕ್ಲಿಕ್ ಮಾಡಿ.
  • ಫ್ಯಾಮಿಲಿ ಡಿಕ್ಲರೇಶನ್ ಅಪ್​ಡೇಟ್ ಮಾಡಲು ‘ಯೆಸ್’ ಕ್ಲಿಕ್ ಮಾಡಿ.
  • ಇದಾದ ಬಳಿಕ ನಾಮಿನಿ ಅಥವಾ ನಾಮಿನಿಗಳ ಹೆಸರು ಸೇರಿಸಬೇಕು. ಯಾರಿಗೆಷ್ಟು ಪಾಲು ಹೋಗಬೇಕು ಎಂದೂ ನಿರ್ದಿಷ್ಟಪಡಿಸಬಹುದು.
  • ನಂತರ, ಸೇವ್ ಇಪಿಎಫ್ ನಾಮಿನೇಶನ್ ಅನ್ನು ಕ್ಲಿಕ್ ಮಾಡಿ.
  • ಇ-ಸೈನ್ ಕ್ಲಿಕ್ ಮಾಡಿ ಒಟಿಪಿ ಪಡೆದು ಅದನ್ನು ನಮೂದಿಸಿ ಅಂತಿಮವಾಗಿ ಸಲ್ಲಿಸಬೇಕು.

ಇದಿಷ್ಟೂ ಆದ ಬಳಿಕ ಇ-ನಾಮಿನೇಶನ್ ಪೂರ್ಣಗೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ