Pension Scheme: ಹೆಚ್ಚು ಸಂಬಳದ ಇಪಿಎಫ್ ಸದಸ್ಯರೂ ಪೆನ್ಷನ್ ಸ್ಕೀಮ್ ಪಡೆಯಬಹುದು; ವಿವರ ನೋಡಿ

|

Updated on: Feb 20, 2023 | 7:00 PM

EPFO Instructions to Subscribers: ನಿಗದಿಗಿಂತ ಹೆಚ್ಚು ಸಂಬಳ ಹೊಂದಿದ್ದು ಪೆನ್ಷನ್ ಸ್ಕೀಮ್​ಗೆ ಹಣ ನೀಡುತ್ತಿದ್ದರೂ ಅಧಿಕೃತವಾಗಿ ಈ ಘೋಷಣೆ ಮಾಡದೇ ಇರುವ ಉದ್ಯೋಗಿಗಳು ಈಗ ಇಪಿಎಫ್​ಒನ ಪ್ರಾದೇಶಿಕ ಕಚೇರಿಗೆ ಹೋಗಿ ಒಂದು ಅರ್ಜಿ ಸಲ್ಲಿಸುವ ಅವಶ್ಯಕತೆ ಇದೆ.

Pension Scheme: ಹೆಚ್ಚು ಸಂಬಳದ ಇಪಿಎಫ್ ಸದಸ್ಯರೂ ಪೆನ್ಷನ್ ಸ್ಕೀಮ್ ಪಡೆಯಬಹುದು; ವಿವರ ನೋಡಿ
ಸಾಂದರ್ಭಿಕ ಚಿತ್ರ
Image Credit source: google image
Follow us on

ನವದೆಹಲಿ: ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಇಪಿಎಫ್​ಒ ಸಂಸ್ಥೆ (EPFO) ತನ್ನ ಇಪಿಎಫ್ ಸದಸ್ಯರಿಗೆ ಪೆನ್ಷನ್ ಸ್ಕೀಮ್ ಅಳವಡಿಸಿಕೊಳ್ಳಲು ಅವಕಾಶ ನೀಡಿದೆ. ನ್ಯಾಷನಲ್ ಪೆನ್ಷನ್ ಸ್ಕೀಮ್​ನ (National Pension Scheme) ನಿಯಮದಂತೆ ಗರಿಷ್ಠ ಸಂಬಳ ಮಟ್ಟಕ್ಕಿಂತ ಹೆಚ್ಚು ಸಂಬಳ ಪಡೆಯುವ ಜನರು ಪೆನ್ಷನ್ ಯೋಜನೆ ಪಡೆಯಬಹುದು. ಇದಕ್ಕಾಗಿ ಅರ್ಜಿ ಸಲ್ಲಿಸುವಂತೆ ಇಪಿಎಫ್​ಒ ಇಂದು ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಿದೆ. ಉದ್ಯೋಗಿ ಮತ್ತು ಸಂಸ್ಥೆ ಜಂಟಿಯಾಗಿ ಅಧಿಕ ಪಿಂಚಣಿ ಕೊಡುಗೆಯ ಅವಕಾಶ ಆಯ್ದುಕೊಳ್ಳಬಹುದು. 2014ರ ಸೆಪ್ಟಂಬರ್ 1ಕ್ಕಿಂತ ಮುಂಚಿನಿಂದಲೂ ಇಪಿಎಸ್​ನ ಸಬ್​ಸ್ಕ್ರೈಬರ್ ಆಗಿರುವ ಉದ್ಯೋಗಿಗಳಿಗೆ ಈ ನಿಟ್ಟಿನಲ್ಲಿ ಆನ್​ಲೈನ್ ಫೆಸಿಲಿಟಿ ಕೊಡಲಾಗುವುದು ಎಂದು ಇಪಿಎಫ್​ಒ ತಿಳಿಸಿದೆ.

ನಿಗದಿಗಿಂತ ಹೆಚ್ಚು ಸಂಬಳ ಹೊಂದಿದ್ದು ಪೆನ್ಷನ್ ಸ್ಕೀಮ್​ಗೆ ಹಣ ನೀಡುತ್ತಿದ್ದರೂ ಅಧಿಕೃತವಾಗಿ ಈ ಘೋಷಣೆ ಮಾಡದೇ ಇರುವ ಉದ್ಯೋಗಿಗಳು ಈಗ ಇಪಿಎಫ್​ಒನ ಪ್ರಾದೇಶಿಕ ಕಚೇರಿಗೆ ಹೋಗಿ ಒಂದು ಅರ್ಜಿ ಸಲ್ಲಿಸುವ ಅವಶ್ಯಕತೆ ಇದೆ. ಮೂಲ ನಿಯಮದ ಪ್ರಕಾರ 5,000 ರೂ ಮತ್ತು ನಂತರ 6,500 ರೂ ಸಂಬಳದೊಳಗಿನ ಉದ್ಯೋಗಿಗಳಿಗೆ ಎಪಿಎಸ್ ಯೋಜನೆ ಇತ್ತು. ಇದೀಗ 15 ಸಾವಿರಕ್ಕೆ ಇದರ ಮಿತಿ ಏರಿಸಲಾಗಿದೆ.

ಇದನ್ನೂ ಓದಿ: Tax Saving: ಇವಿ ವಾಹನದಿಂದ 1.5 ಲಕ್ಷ ರೂ ತೆರಿಗೆ ಉಳಿಸಲು ಸಾಧ್ಯ; ಹೇಗೆ ತಿಳಿಯಿರಿ

ಇಪಿಎಫ್​ಒ, ಇಪಿಎಸ್ ವ್ಯತ್ಯಾಸ ಏನು?

ಇಪಿಎಫ್ ಎಂಬುದು ಉದ್ಯೋಗಿಗಳ ಭವಿಷ್ಯ ನಿಧಿ. ಇಪಿಎಸ್ ಎಂಬುದು ಉದ್ಯೋಗಿ ಪಿಂಚಣಿ ಯೋಜನೆ. ಕಡಿಮೆ ಸಂಬಳದ ಉದ್ಯೋಗಿಗಳ ಸಾಮಾಜಿಕ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮಾಡಿರುವ ಪೆನ್ಷನ್ ಸ್ಕೀಮ್ ಇದು. ನಿಯಮದ ಪ್ರಕಾರ, ಒಬ್ಬ ಉದ್ಯೋಗಿಗೆ ಸಿಗುವ ಸಂಬಳದಲ್ಲಿ ಶೇ. 12ರಷ್ಟು ಹಣ ಇಪಿಎಫ್ ಖಾತೆಗೆ ಹೋಗುತ್ತದೆ. ಆ ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯು ಶೇ. 12ರಷ್ಟು ಹಣವನ್ನು ಇಪಿಎಫ್ ಖಾತೆಗೆ ಹೆಚ್ಚುವರಿಯಾಗಿ ಕೊಡುತ್ತದೆ. ಆದರೆ, ಸಂಸ್ಥೆಯ ಶೇ. 12ರಷ್ಟು ಕೊಡುಗೆಯಲ್ಲಿ ಶೇ. 3.67ರಷ್ಟು ಹಣವು ಇಪಿಎಫ್​ಗೆ ಹೋದರೆ ಶೇ. 8.33ರಷ್ಟು ಹಣವು ಇಪಿಎಸ್​ಗೆ ಹೋಗುತ್ತದೆ. ಈ ಇಪಿಎಸ್​ಗೆ ಸರ್ಕಾರ ಶೇ. 1.16ರಷ್ಟು ಹಣ ಸೇರಿಸುತ್ತಾ ಹೋಗುತ್ತದೆ.

ಇಪಿಎಸ್ ಖಾತೆಯಲ್ಲಿರುವ ಹಣ ಉದ್ಯೋಗಿ 58 ವರ್ಷ ವಯಸ್ಸು ದಾಟಿದಾಗ ಪೆನ್ಷನ್ ರೂಪದಲ್ಲಿ ಸಿಗುತ್ತಾ ಹೋಗುತ್ತದೆ. ಅದಕ್ಕೆ ಮುನ್ನ ಈ ಹಣವನ್ನು ವಾಪಸ್ ಪಡೆಯಲು ಆಗುವುದಿಲ್ಲ. ಇಪಿಎಫ್ ಖಾತೆಯಲ್ಲಿರುವ ಹಣವನ್ನು ಉದ್ಯೋಗಿ ತನಗೆ ಬೇಕಾದಾಗ ಹಿಂಪಡೆಯುವ ಅವಕಾಶ ಇರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ