
ಅಪ್ಪ ಅಥವಾ ತಾತ ಅದೆಷ್ಟೋ ವರ್ಷಗಳ ಹಿಂದೆ ತೆಗೆದು ಮರೆತು ಬಿಟ್ಟ ಷೇರುಗಳ ಮೌಲ್ಯ ಇವತ್ತು ಲಕ್ಷಾಂತರ, ಕೋಟ್ಯಂತರ ರುಪಾಯಿ ಆಗಿದೆ ಎನ್ನುವಂತಹ ಸುದ್ದಿಗಳು ಆಗಾಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುವುದನ್ನು ನೀವು ಗಮನಿಸಬಹುದು. ಹೂಡಿಕೆಯನ್ನು ದೀರ್ಘಾವಧಿ (long term investment in stocks) ಉಳಿಸಿದ್ದಕ್ಕೆ ಇಷ್ಟು ಮೌಲ್ಯ ಪಡೆಯಲು ಸಾಧ್ಯವಾಯಿತು ಎಂದು ಕೆಲ ತಜ್ಞರು ಹೇಳುವುದೂ ಇದೆ. ಆದರೆ, ಹೀಲಿಯೋಸ್ ಕ್ಯಾಪಿಟಲ್ ಸಂಸ್ಥಾಪಕ ಹಾಗೂ ಫಂಡ್ ಮ್ಯಾನೇಜರ್ ಸಮೀರ್ ಅರೋರಾ (Samir Arora) ಈ ವಾದವನ್ನು ತಳ್ಳಿಹಾಕುತ್ತಾರೆ.
ತನ್ನ ಹಲವು ಸ್ನೇಹಿತರು ಮತ್ತು ಬಂಧುಗಳು ಎಂಬತ್ತು, ತೊಂಬತ್ತರ ದಶಕಗಳಲ್ಲಿ ಷೇರುಗಳನ್ನು ಖರೀದಿಸಿ 35 ವರ್ಷ ಕಾಲ ಇಟ್ಟುಕೊಂಡಿರುವುದುಂಟು. ಇವತ್ತು ಆ ಷೇರುಗಳ ಮೌಲ್ಯ ಬಹುತೇಕ ಶೂನ್ಯ. ಈಕ್ವಿಟಿ ಸೆಕ್ಟರ್ನಲ್ಲಿ ಇರುವ ದೊಡ್ಡ ಕಗ್ಗಂಟು ಇದು ಎಂದು ಸಮೀರ್ ಅರೋರಾ ಎಚ್ಚರಿಸುತ್ತಾರೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರೆ ಗಮನಿಸಿ… ಅದರ ಎನ್ಎವಿ ಎಂದರೇನು? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ
ಸಮೀರ್ ಅರೋರಾ ಪ್ರಕಾರ ನೀವು ಯಾವುದೋ ಷೇರುಗಳನ್ನು ಖರೀದಿಸಿ ದೀರ್ಘಾವಧಿ ಹಾಗೇ ಬಿಟ್ಟರೆ ಉಪಯೋಗ ಇಲ್ಲ. ಸರಿಯಾದ ಷೇರುಗಳನ್ನು ಗುರುತಿಸಿ ಅದರಲ್ಲಿ ಹೂಡಿಕೆ ಮಾಡುವುದು ಸರಿಯಾದ ಕ್ರಮ ಎಂದೆನ್ನುತ್ತಾರೆ.
ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕಂಪನಿಗಳ ಷೇರುಗಳಿವೆ. ಅದರಲ್ಲಿ ದೀರ್ಘಾವಧಿಗೆ ಸೂಕ್ತ ಎನಿಸಬಲ್ಲ ಷೇರುಗಳು ಶೇ. 5ಕ್ಕಿಂತಲೂ ಕಡಿಮೆ. ಇಂಥ ಷೇರುಗಳನ್ನು ಗುರುತಿಸುವ ಕೆಲಸ ಬಹಳ ಸವಾಲಿನದ್ದು ಎಂದು ಹೀಲಿಯೋಸ್ ಕ್ಯಾಪಿಟಲ್ನ ಸಂಸ್ಥಾಪಕರು ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ: Money Matter: ಮುಂದೊಂದು ದಿನ ರಿಟೈರ್ ಆಗ್ಲೇಬೇಕು; ಆ ದಿನ ನಿಮ್ಮ ಸೇವಿಂಗ್ಸ್ ಎಷ್ಟಿರಬೇಕು?
ದೀರ್ಘಾವಧಿ ಹೂಡಿಕೆಗೆ ಒಂದು ಷೇರು ಸೂಕ್ತ ಎನಿಸಬೇಕಾದರೆ, ಅ ಕಂಪನಿ ದೀರ್ಘಾವಧಿ ಬೆಳೆಯುತ್ತಲೇ ಇರಬೇಕಾಗುತ್ತದೆ. ಆ ಕಂಪನಿಯ ಬ್ಯುಸಿನೆಸ್ ಇರುವ ಕ್ಷೇತ್ರ, ಅದರ ಮ್ಯಾನೇಜ್ಮೆಂಟ್ ಇತ್ಯಾದಿ ಅಂಶಗಳನ್ನು ಗಮನಿಸಬೇಕಾಗುತ್ತದೆ. ಸಮೀರ್ ಅರೋರಾ ಪ್ರಕಾರ, ಕಂಪನಿಯ ಆಡಳಿತ ನಿಭಾಯಿಸುವ ಮ್ಯಾನೇಜ್ಮೆಂಟ್ ತಂಡಕ್ಕೆಯೇ ತಮ್ಮ ಕಂಪನಿ ಮುಂದಕ್ಕೆ ಹೇಗೆ ಬೆಳೆಯುತ್ತದೆ ಎಂದು ಗೊತ್ತಿರುವುದಿಲ್ಲ. ಹೀಗಿದ್ದಾಗ ದೀರ್ಘಾವಧಿಯಲ್ಲಿ ಷೇರು ನಿಶ್ಚಿತವಾಗಿ ಬೆಳೆಯುತ್ತದೆ ಎಂದು ನಿಖರವಾಗಿ ಅಂದಾಜು ಮಾಡಲಾಗುವುದಿಲ್ಲ ಎಂಬುದು ಫಂಡ್ ಮ್ಯಾನೇಜರ್ ಕೂಡ ಆಗಿರುವ ಸಮೀರ್ ಅರೋರಾ ಸಲಹೆ ನೀಡುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ