SB Account: ಎಫ್​ಡಿ ಬೇಡ, ಆರ್​ಡಿ ಬೇಡ; ಹಾಗೇ ಸುಮ್ಮನೆ ಹಣ ಇದ್ದರೂ ಶೇ. 7.50ರವರೆಗೆ ಬಡ್ಡಿ ಕೊಡುತ್ತೆ ಈ ಬ್ಯಾಂಕ್

Fincare Small finance Bank: ಸೇವಿಂಗ್ಸ್ ಬ್ಯಾಂಕ್ ಅಕೌಂಟ್​​ನಲ್ಲಿ ನೀವು ಉಳಿಸಿ ಇರಿಸುವ ಹಣಕ್ಕೆ ಅತಿಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳಲ್ಲಿ ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಸಂಸ್ಥೆ ಒಂದು. ಇದು 5 ಲಕ್ಷ ರೂ ಮೇಲ್ಟಪ್ಪ ಹಣಕ್ಕೆ ಶೇ. 7.25ರಷ್ಟು ಬಡ್ಡಿ ಕೊಡುತ್ತದೆ.

SB Account: ಎಫ್​ಡಿ ಬೇಡ, ಆರ್​ಡಿ ಬೇಡ;  ಹಾಗೇ ಸುಮ್ಮನೆ ಹಣ ಇದ್ದರೂ ಶೇ. 7.50ರವರೆಗೆ ಬಡ್ಡಿ ಕೊಡುತ್ತೆ ಈ ಬ್ಯಾಂಕ್
ಎಸ್​ಬಿ ಖಾತೆಯ ಠೇವಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 03, 2023 | 5:29 PM

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಯಾವುದಕ್ಕೂ ಹೂಡಿಕೆ ಆಗದೇ ಹಾಗೇ ಇದ್ದರೆ, ಅಂದರೆ ನಿಮ್ಮ ಎಸ್​ಬಿ ಖಾತೆಯಲ್ಲಿ (Savings Bank Account) ಇರುವ ಹಣಕ್ಕೆ ಶೇ. 4 ಆಸುಪಾಸಿನ ವಾರ್ಷಿಕ ಬಡ್ಡಿ ಸಿಗುತ್ತದೆ. ದೊಡ್ಡ ಕಮರ್ಷಿಯಲ್ ಬ್ಯಾಂಕುಗಳು ಇನ್ನೂ ಕಡಿಮೆ ಬಡ್ಡಿ ನೀಡುತ್ತವೆ. 5 ಲಕ್ಷಕ್ಕೂ ಮೇಲ್ಪಟ್ಟ ಹಣಕ್ಕೆ ಶೇ. 7ರವರೆಗೂ ಬಡ್ಡಿ ಕೊಡುವ ಹಲವು ಸಣ್ಣ ಹಣಕಾಸು ಸಂಸ್ಥೆಗಳು, ಕೋ ಆಪರೇಟಿವ್ ಬ್ಯಾಂಕುಗಳು ಇವೆ. ಎಸ್​ಬಿ ಅಕೌಂಟ್​ಗೆ ಹೆಚ್ಚಿನ ಬಡ್ಡಿ ಕೊಡುವ ಅಂಥ ಬ್ಯಾಂಕುಗಳಲ್ಲಿ ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Fincare Small Finance Bank) ಒಂದು. ಬ್ಯಾಂಕಿಂಗ್ ವಲಯದಲ್ಲಿ ಎಸ್​ಬಿ ಅಕೌಂಟ್​ಗೆ ಅತಿಹೆಚ್ಚು ಬಡ್ಡಿ ಕೊಡುವ ಸಂಸ್ಥೆ ಇದು. ಸೇವಿಂಗ್ಸ್ ಬ್ಯಾಂಕ್ ಅಕೌಂಟ್​ನ ಕೆಲ ಮೊತ್ತಕ್ಕೆ ಇದು ಶೇ. 7.50ರಷ್ಟು ಬಡ್ಡಿ ಕೊಡುತ್ತದೆ. ಪ್ರಮುಖ ಬ್ಯಾಂಕುಗಳು ಫಿಕ್ಸೆಡ್ ಡೆಪಾಸಿಟ್​ಗೆ ಕೊಡುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಫಿನ್​ಕೇರ್ ಬ್ಯಾಂಕ್ ತನ್ನ ಎಸ್​ಬಿ ಅಕೌಂಟ್​ಗೆ ಕೊಡುತ್ತದೆ.

ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಎಸ್​ಬಿ ಖಾತೆಯ ಠೇವಣಿಗಳಿಗೆ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಆಗಸ್ಟ್ 1ರಿಂದು ಈ ದರಗಳು ಅನ್ವಯಕ್ಕೆ ಬಂದಿವೆ. 5 ಲಕ್ಷ ರೂ ಮೇಲ್ಪಟ್ಟ ಠೇವಣಿಗಳಿಗೆ ಶೇ. 7.25ರಷ್ಟು ಬಡ್ಡಿ ಕೊಡುತ್ತದೆ. 2 ರಿಂದ 5 ಲಕ್ಷ ರೂ ಮೊತ್ತದ ಬ್ಯಾಲನ್ಸ್ ಇದ್ದರೂ ಶೇ. 7.11ರಷ್ಟು ಬಡ್ಡಿ ಕೊಡಲಾಗುತ್ತದೆ. ಇದರಿಂದ ಗ್ರಾಹಕರು ಹೆಚ್ಚೆಚ್ಚು ಹಣ ಉಳಿಸಲು ಇದು ನೆರವಾಗುತ್ತದೆ ಎಂಬುದು ಬ್ಯಾಂಕ್​ನ ಅನಿಸಿಕೆ.

ಇದನ್ನೂ ಓದಿ: Ancestral Property: ಪಿತ್ರಾರ್ಜಿತವಾಗಿ ಪಡೆಯುವ ಆಸ್ತಿಗೆ ತೆರಿಗೆ ಕಟ್ಟಬೇಕಾ? ಮಾರಿದಾಗ ಎಷ್ಟು ಟ್ಯಾಕ್ಸ್ ಪಾವತಿಸಬೇಕು?

ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಎಸ್​ಬಿ ಅಕೌಂಟ್ ಬ್ಯಾಲನ್ಸ್​ಗೆ ಸಿಗುವ ಬಡ್ಡಿ ದರಗಳು

  • 1 ಲಕ್ಷ ರೂವರೆಗಿನ ಹಣಕ್ಕೆ: ಶೇ. 3.51 ಬಡ್ಡಿ
  • 1 ಲಕ್ಷದಿಂದ 2 ಲಕ್ಷ ರೂವರೆಗೆ: ಶೇ. 5.11 ಬಡ್ಡಿ
  • 2ರಿಂದ 5 ಲಕ್ಷ ರೂ: ಶೇ. 7.11 ಬಡ್ಡಿ
  • 5ರಿಂದ 50 ಲಕ್ಷ ರೂ: ಶೇ. 7.25 ಬಡ್ಡಿ
  • 50 ಲಕ್ಷ ರೂನಿಂದ 2 ಕೋಟಿ ರೂ: ಶೇ. 7.50 ಬಡ್ಡಿ
  • 2 ರಿಂದ 15 ಕೋಟಿ ರೂ: ಶೇ. 7 ಬಡ್ಡಿ
  • 10ರಿಂದ 15 ಕೋಟಿ ರೂ: ಶೇ. 6.50 ಬಡ್ಡಿ
  • 15ರಿಂದ 20 ಕೋಟಿ ರೂ: ಶೇ. 5 ಬಡ್ಡಿ
  • 20ರಿಂದ 25 ಕೋಟಿ ರೂ: ಶೇ. 4 ಬಡ್ಡಿ
  • 25ರಿಂದ 30 ಕೋಟಿ ರೂ: ಶೇ. 3.25 ಬಡ್ಡಿ
  • 30 ಕೋಟಿ ಮೇಲ್ಪಟ್ಟ ಹಣ: ಶೇ. 3

ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಬರುವಂತಾಗಲು ಎಷ್ಟು ವರ್ಷ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಐಡಿಯಾ

1 ಲಕ್ಷ ರೂವರೆಗಿನ ಎಸ್​ಬಿ ಖಾತೆ ಠೇವಣಿಗೆ ಅತಿಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳು

  • ಆರ್​ಬಿಎಲ್ ಬ್ಯಾಂಕ್: ಶೇ. 4.25
  • ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 4.25 ಬಡ್ಡಿ
  • ಯೆಸ್ ಬ್ಯಾಂಕ್: ಶೇ. 4 ಬಡ್ಡಿ
  • ಇಎಸ್​​ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 4
  • ಐಡಿಎಫ್​ಸಿ ಬ್ಯಾಂಕ್: ಶೇ. 4
  • ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 4
  • ಇಂಡಸ್​ಇಂಡ್ ಬ್ಯಾಂಕ್: ಶೇ. 4
  • ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 3.51
  • ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 3.50
  • ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 3.50 ಬಡ್ಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Thu, 3 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್