ಜುಲೈನಲ್ಲಿ ಆಧಾರ್, ಪ್ಯಾನ್, ಎಟಿಎಂ, ಕ್ರೆಡಿಟ್ ಕಾರ್ಡ್ ಇತ್ಯಾದಿಯಲ್ಲಿ ನಿಯಮ ಬದಲಾವಣೆಗಳಿವೆ, ಗಮನಿಸಿ

Financial rules change in 2025 July: ಜುಲೈ ತಿಂಗಳಲ್ಲಿ ಕೆಲ ಪ್ರಮುಖ ಹಣಕಾಸು ನಿಯಮಗಳ ಬದಲಾವಣೆ ಮತ್ತು ಅಪ್​ಡೇಟ್ ನಿರೀಕ್ಷಿಸಿ. ಹೊಸ ಪ್ಯಾನ್ ಕಾರ್ಡ್​ಗೆ ಆಧಾರ್ ದೃಢೀಕರಣದಿಂದ ಹಿಡಿದು ಎಟಿಎಂ ಶುಲ್ಕ ಏರಿಕೆವರೆಗೂ ಬದಲಾವಣೆಗಳಿವೆ. ಕೆಲ ಕ್ರೆಡಿಟ್ ಕಾರ್ಡ್ ಕಂಪನಿಗಳೂ ಕೂಡ ನಿಯಮ ಮತ್ತು ಶುಲ್ಕಗಳನ್ನು ಅಪ್​ಡೇಟ್ ಮಾಡಿವೆ.

ಜುಲೈನಲ್ಲಿ ಆಧಾರ್, ಪ್ಯಾನ್, ಎಟಿಎಂ, ಕ್ರೆಡಿಟ್ ಕಾರ್ಡ್ ಇತ್ಯಾದಿಯಲ್ಲಿ ನಿಯಮ ಬದಲಾವಣೆಗಳಿವೆ, ಗಮನಿಸಿ
ಹಣ

Updated on: Jun 30, 2025 | 5:43 PM

2025ರ ಜುಲೈನಲ್ಲಿ ಹಣಕಾಸು ಸ್ಥಿತಿ ಪ್ರಭಾವಿಸುವ ಕೆಲ ನಿಯಮಗಳು (financial rules change) ಮತ್ತು ಸಂಗತಿಗಳು ಜಾರಿಗೆ ಬರಲಿವೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಕ್ರೆಡಿಟ್ ಕಾರ್ಡ್, ಐಟಿ ರಿಟರ್ನ್ಸ್ ಇತ್ಯಾದಿಗೆ ಸಂಬಂಧಿತ ನಿಯಮ ಬದಲಾವಣೆಗಳು ಇವು. ಹೀಗಾಗಿ, ಹೆಚ್ಚಿನ ಜನರಿಗೆ ಅನ್ವಯಿಸುವ ಮತ್ತು ಪ್ರಭಾವಿಸುವ ಸಂಗತಿಗಳಿವೆ.

ಹೊಸ ಪ್ಯಾನ್ ಕಾರ್ಡ್​​ಗಳಿಗೆ ಆಧಾರ್ ದೃಢೀಕರಣ ಅಗತ್ಯ

ಹೊಸ ಪ್ಯಾನ್ ಕಾರ್ಡ್ ಪಡೆಯಬೇಕೆಂದರೆ ಆಧಾರ್ ವೆರಿಫಿಕೇಶನ್ ಕಡ್ಡಾಯವಾಗಿ ಆಗಬೇಕು ಎಂದು ಸಿಬಿಡಿಟಿ ಹೇಳಿದೆ. ಜುಲೈ 1ರಿಂದ ಈ ನಿಯಮ ಜಾರಿಗೆ ಬರುತ್ತದೆ. ಈ ಮುಂಚೆ ವೋಟರ್ ಐಡಿ ಇತ್ಯಾದಿ ಗುರುತಿನ ಚೀಟಿ, ಜನನ ಪ್ರಮಾಣಪತ್ರ ದಾಖಲೆ ನೀಡಿ ಪ್ಯಾನ್ ಕಾರ್ಡ್ ಮಾಡಿಸಬಹುದಿತ್ತು. ಈಗ ಆಧಾರ್ ಕಡ್ಡಾಯವಾಗಿದೆ. ಇನ್ಮುಂದೆ ಬರುವ ಪ್ಯಾನ್ ಕಾರ್ಡ್​​ಗಳು ಆಧಾರ್​​ಗೆ ಲಿಂಕ್ ಆಗಿದ್ದಾಗಿರುತ್ತವೆ.

ಐಟಿ ರಿಟರ್ನ್ಸ್ ಸಲ್ಲಿಸುವ ಡೆಡ್​ಲೈನ್

ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31ಕ್ಕೆ ಇದ್ದ ಗಡುವನ್ನು ಸೆಪ್ಟೆಂಬರ್ 15ಕ್ಕೆ ವಿಸ್ತರಿಸಲಾಗಿದೆ. ರಿಟರ್ನ್ಸ್ ಫೈಲ್ ಮಾಡಲು ಸಾವಾಕಾಶ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರೆ ಗಮನಿಸಿ… ಅದರ ಎನ್​ಎವಿ ಎಂದರೇನು? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ

ಎಕ್ಸಿಸ್ ಬ್ಯಾಂಕ್ ಎಟಿಎಂ ಶುಲ್ಕ

ಎಕ್ಸಿಸ್ ಬ್ಯಾಂಕ್ ಜುಲೈ 1ರಿಂದ ಎಟಿಎಂ ವಹಿವಾಟು ಶುಲ್ಕವನ್ನು 21 ರೂನಿಂದ 23 ರೂಗೆ ಏರಿಸುತ್ತಿದೆ. ಉಚಿತ ಟ್ರಾನ್ಸಾಕ್ಷನ್ ಮಿತಿ ಮೀರಿದ ಬಳಿಕ ವಿಧಿಸಲಾಗುವ ಶುಲ್ಕ ಇದು. ಆರ್​​ಬಿಐನಿಂದ ಇದಕ್ಕೆ ಅನುಮತಿ ಇದೆ. ಬಹುತೇಕ ಎಲ್ಲಾ ಬ್ಯಾಂಕುಗಳು ಎಟಿಎಂ ಟ್ರಾನ್ಸಾಕ್ಷನ್ ಫೀ ಹೆಚ್ಚಿಸಿವೆ.

ಎಸ್​​ಬಿಐ ಕ್ರೆಡಿಟ್ ಕಾರ್ಡ್ ಬಿಲ್ ಲೆಕ್ಕಾಚಾರ

ಎಸ್​​ಬಿಐ ಕಾರ್ಡ್ ಸಂಸ್ಥೆ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ನೀಡುವ ಕನಿಷ್ಠ ಬಾಕಿ ಹಣ (ಎಂಎಡಿ) ಲೆಕ್ಕಾಚಾರವನ್ನು ಪರಿಷ್ಕರಿಸಿದೆ. ಜಿಎಸ್​​ಟಿ, ಇಎಂಐ, ಶುಲ್ಕ, ಹಣಕಾಸು ಶುಲ್ಕ, ಬ್ಯಾಲನ್ಸ್ ವರ್ಗಾವಣೆ, ರೀಟೇಲ್ ಟ್ರಾನ್ಸಾಕ್ಷನ್, ಕ್ಯಾಷ್ ಅಡ್ವಾನ್ಸ್, ಈ ಸರಣಿ ಪ್ರಕಾರ ಮಿನಿಮಮ್ ಅಮೌಂಟ್ ನಿರ್ಧರಿಸಲಾಗುತ್ತದೆ. ಜುಲೈ 15ರಿಂದ ಇದು ಜಾರಿಗೆ ಬರುತ್ತದೆ.

ಹಾಗೆಯೇ, ಎಸ್​​ಬಿಐ ಕಾರ್ಡ್ ಸಂಸ್ಥೆಯು ಕೆಲ ಪ್ರಕಾರದ ಕಾರ್ಡ್​​ಗಳಿಗೆ ನೀಡುತ್ತಿದ್ದ 50 ಲಕ್ಷದಿಂದ ಒಂದು ಕೋಟಿ ರೂವರೆಗಿನ ಏರ್ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ ಸೌಲಭ್ಯವನ್ನು ಹಿಂಪಡೆದಿದೆ.

ಇದನ್ನೂ ಓದಿ: Money Matter: ಮುಂದೊಂದು ದಿನ ರಿಟೈರ್ ಆಗ್ಲೇಬೇಕು; ಆ ದಿನ ನಿಮ್ಮ ಸೇವಿಂಗ್ಸ್ ಎಷ್ಟಿರಬೇಕು?

ಎಚ್​​ಡಿಎಫ್​​ಸಿ ಬ್ಯಾಂಕ್ ಯುಟಿಲಿಟಿ ಬಿಲ್ ಪಾವತಿ

ಎಚ್​​ಡಿಎಫ್​​ಸಿ ಬ್ಯಾಂಕ್​ನ ಕ್ರೆಡಿಟ್ ಕಾರ್ಡ್ ಗ್ರಾಹಕರು ವಿದ್ಯುತ್, ನೀರು, ಮೊಬೈಲ್ ಇತ್ಯಾದಿ ಯುಟಿಲಿಟಿ ಬಿಲ್​​ಗಳನ್ನು ಪಾವತಿಸಬಹುದು. ಕನ್ಸೂಮರ್ ಕಾರ್ಡ್​ಗಳಾದರೆ ಈ ಯುಟಿಲಿಟಿ ಬಿಲ್ ಮೊತ್ತ ಒಂದು ತಿಂಗಳಲ್ಲಿ 50,000 ರೂ ದಾಟಿದರೆ ಶೇ. 1ರಷ್ಟು ಶುಲ್ಕ ವಿಧಿಸಲಾಗುತ್ತದೆ. ಬ್ಯುಸಿನೆಸ್ ಕಾರ್ಡ್ ಆದರೆ 75,000 ರೂವರೆಗೂ ಮಿತಿ ಇದೆ. ಆ ಬಳಿಕ ಶೇ. 1ರಷ್ಟು ಶುಲ್ಕ ಹಾಕಲಾಗುತ್ತದೆ. ಒಟ್ಟು ಶುಲ್ಕ ಗರಿಷ್ಠ 4,999 ರೂ ಆಗಿದೆ.

ಬಾಡಿಗೆ, ಇಂಧನಕ್ಕೆ ಮಾಡುವ ವಹಿವಾಟು 15,000 ರೂನಿಂದ 30,000 ರೂ ದಾಟಿದರೆ ಶುಲ್ಕ ಹೇರಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ