ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂದಿದೆ. ದಿನಗಳು ಹೋಗುವುದು ಗೊತ್ತೇ ಆಗುವುದಿಲ್ಲ. ಈ ವೇಳೆ ಕೆಲ ಮುಖ್ಯ ಡೆಡ್ಲೈನ್ಗಳು (Deadlines) ನೆನಪಿಗೆ ಬರುವುದೇ ಇಲ್ಲ. ಅವಧಿ ಮೀರಿದ ಬಳಿಕ ಚಿಂತಿಸಿ ಫಲ ಇರುವುದಿಲ್ಲ. ಈ ಸೆಪ್ಟಂಬರ್ 30ಕ್ಕೆ ಕೆಲವಾರು ಮುಖ್ಯ ಹಣಕಾಸು ಕಾರ್ಯಗಳಿಗೆ ಡೆಡ್ಲೈನ್ ಇದೆ. ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಿಗೆ (small savings schemes) ಆಧಾರ್ ಲಿಂಕ್ ಮಾಡುವುದರಿಂದ ಹಿಡಿದು ಎರಡು ಸಾವಿರ ರೂ ಮುಖಬೆಲೆಯ ನೋಟುಗಳ ವಿನಿಯಮದವರೆಗೂ ವಿವಿಧ ಕಾರ್ಯಗಳನ್ನು ಈ ತಿಂಗಳೊಳಗೆ ಮಾಡಬೇಕಾಗಿದೆ. ಈ ಬಗ್ಗೆ ಒಂದು ವರದಿ.
ಮೇ ತಿಂಗಳಲ್ಲಿ ಆರ್ಬಿಐ 2,000 ರೂ ಮುಖಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಘೋಷಣೆ ಮಾಡಿತು. ಅದರಂತೆ ಆ ನೋಟುಗಳನ್ನು ಹೊಂದಿರುವವರು ಬ್ಯಾಂಕುಗಳಿಗೆ ಮರಳಿಸಿ, ಸಮಾನ ಮೌಲ್ಯದ ಬೇರೆ ನೋಟುಗಳನ್ನು ಪಡೆಯಲು ಅವಕಾಶ ನೀಡಿದೆ. ತಮ್ಮ ಖಾತೆಗೆ ಡೆಪಾಸಿಟ್ ಮಾಡಲು ಮತ್ತು ನೋಟು ವಿನಿಮಯ ಮಾಡಲು ಸೆಪ್ಟೆಂಬರ್ 30ರವರೆಗೂ ಕಾಲಾವಕಾಶ ನೀಡಿದೆ. ಆ ಡೆಡ್ಲೈನ್ ಬಳಿಕ 2,000 ರೂ ನೋಟು ಅಮಾನ್ಯವಾಗುತ್ತದಾ ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಕಡಿಮೆ ಆಗುತ್ತಿದ್ದಂತೆಯೇ ಭಾರತದಲ್ಲಿ ಸಿಗರೇಟ್ ಮಾರಾಟ ಹೆಚ್ಚಳ
ಸಣ್ಣ ಉಳಿತಾಯ ಯೋಜನೆಗಳನ್ನು ಪಡೆಯಬೇಕಾದರೆ ಈಗ ಆಧಾರ್ ಸಲ್ಲಿಕೆ ಕಡ್ಡಾಯ ಇದೆ. ಆದರೆ, ಈ ಹಿಂದೆ ಪಿಪಿಎಫ್, ಸುಕನ್ಯಾ ಸಮೃದ್ದಿ ಯೋಜನೆ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಸೀನಿಯರ್ ಸಿಟಿಜನ್ ಸ್ಕೀಮ್ ಇತ್ಯಾದಿ ಸ್ಮಾಲ್ ಸೇವಿಂಗ್ಸ್ ಯೋಜನೆ ಮಾಡಿಸಿದವರಲ್ಲಿ ಹಲವರು ಆಧಾರ್ ದಾಖಲೆ ಸಲ್ಲಿಸಿರಲಿಲ್ಲ. ಆಧಾರ್ ಲಿಂಕ್ ಆಗಿಲ್ಲದ ಸೇವಿಂಗ್ಸ್ ಸ್ಕೀಮ್ ಮೆಚ್ಯೂರ್ ಆದಾಗ ಹಣ ಹಿಂಪಡೆಯಲು ಆಗುವುದಿಲ್ಲ. ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 30ರವರೆಗೆ ಸರ್ಕಾರ ಕಾಲಾವಕಾಶ ಕೊಟ್ಟಿದೆ.
ಷೇರು ಮಾರುಕಟ್ಟೆ ಅಥವಾ ಮ್ಯುಚುವಲ್ ಫಂಡ್ಗಳಲ್ಲಿ ಹಣ ಹೂಡಿಕೆ ಮಾಡಲು ಡಿಮ್ಯಾಟ್ ಅಕೌಂಟ್ ತೆರೆಯಬೇಕಾಗುತ್ತದೆ. ಇಂಥ ಡೀಮ್ಯಾಟ್ ಖಾತೆಗೆ ನಾಮಿನಿ ಸೇರಿಸುವುದನ್ನು ಸರ್ಕಾರ ಕಡ್ಡಾಯಪಡಿಸಿದೆ. ಸೆ. 30ಕ್ಕೆ ಡೆಡ್ಲೈನ್ ಇದೆ. ಡಿಮಾಟ್ ಖಾತೆಗೆ ನಾಮಿನಿ ಹೆಸರಿಸಿದವರಲ್ಲಿ ಹೆಚ್ಚಿನವರು ಜಂಟಿ ಖಾತೆ ಹೊಂದಿದವರಾಗಿದ್ದಾರೆ.
ಇದನ್ನೂ ಓದಿ: ರೆಕರಿಂಗ್ ಡೆಪಾಸಿಟ್, ಬಹಳ ಸರಳ ಹಾಗೂ ಸುರಕ್ಷಿತ ಸ್ಕೀಮ್; ವರ್ಷಕ್ಕೆ ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿ ಕೊಡಬಲ್ಲುದು ಆರ್ಡಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೀಕೇರ್ ಸ್ಕೀಮ್ ಅನ್ನು (SBI WeCare) ಹಿರಿಯ ನಾಗರಿಕರಿಗೆಂದು ರೂಪಿಸಲಾಗಿದೆ. ಐದು ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯ ನಿಶ್ಚಿತ ಠೇವಣಿ ಯೋಜನೆ ಇದು. ಮಾರ್ಚ್ನಿಂದಲೂ ಇದರ ಅವಧಿ ವಿಸ್ತರಿಸುತ್ತಾ ಬರಲಾಗಿದೆ. ಇದೀಗ ಸೆಪ್ಟೆಂಬರ್ 30ಕ್ಕೆ ವೀಕೇರ್ ಸ್ಕೀಮ್ ಪಡೆಯಲು ಕೊನೆಯ ದಿನವಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ