ಮನೆ ಖರೀದಿಸುವುದು ಅಥವಾ ಕಟ್ಟುವುದು ಯಾರದೇ ಜೀವನದ ಒಂದು ಪ್ರಮುಖ ಮೈಲಿಗಲ್ಲು. ಹಾಗೆಯೇ, ಗೃಹಸಾಲವನ್ನು (Home Loan) ಆಯ್ದುಕೊಂಡು ಅದನ್ನು ಕಟ್ಟುವುದೂ ಕೂಡ ಅಷ್ಟೇ ಸಾಹಸ ಮತ್ತು ಸಂಯಮದ ಕೆಲಸ. ನಮ್ಮ ಬಹುತೇಕ ಸಂಪಾದನೆ ಅಥವಾ ಉಳಿತಾಯ ಹಣ ಮನೆ ಖರೀದಿಗೆ ಹೊರಟುಹೋಗುತ್ತದೆ. ಸ್ವಂತ ಮನೆ ಹೊಂದುವ ಆಸೆ ಇದ್ದವರಿಗೆ ಗೃಹಸಾಲ ಉತ್ತಮ ಸಾಧನವಾಗಿದೆ. ಮನೆ ಖರೀದಿಸಲು, ಮನೆ ಕಟ್ಟಲು ಮತ್ತು ಮನೆ ನವೀಕರಿಸಲು ಗೃಹಸಾಲಗಳು ಸಿಗುತ್ತವೆ. ಇವತ್ತಿನ ದರಗಳಲ್ಲಿ ಗೃಹಸಾಲ ಶೇ. 8ರ ವಾರ್ಷಿಕ ಬಡ್ಡಿಯಿಂದ ಆರಂಭವಾಗುತ್ತದೆ. ಬಡ್ಡಿ ಹಣದ ಮೇಲೆ ಇಎಂಐ ಮೊತ್ತ ಮತ್ತು ಕಂತುಗಳ ಸಂಖ್ಯೆ ಅವಲಂಬಿತವಾಗಿರುತ್ತದೆ. ಅಡಮಾನವಾಗಿ ಮನೆಯ ಕ್ರಯಪತ್ರ ಇತ್ಯಾದಿಯ ಒರಿಜಿನಲ್ ದಾಖಲೆಗಳನ್ನು ಬ್ಯಾಂಕಿಗೆ ಕೊಡಬೇಕಾಗುತ್ತದೆ. ಜೊತೆಗೆ ಐಡಿ ಪ್ರೂಫ್, ವಿಳಾಸ ಪ್ರೂಫ್, ಇನ್ಕಮ್ ಪ್ರೂಫ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇನ್ಕಮ್ ಪ್ರೂಫ್ ದಾಖಲೆಯಾಗಿ ಐಟಿ ರಿಟರ್ನ್ಸ್, ಫಾರ್ಮ್ 16 ಪ್ರತಿ, ಸ್ಯಾಲರಿ ಸ್ಲಿಪ್ ಇತ್ಯಾದಿಯಲ್ಲಿ ಒಂದನ್ನು ಕೊಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹಸಾಲ 5 ಲಕ್ಷ ರೂನಿಂದ ಆರಂಭವಾಗಿ 10 ಕೋಟಿಯವರೆಗೆ ಸಿಗುತ್ತದೆ. ಸದ್ಯ ಅದರ ಬಡ್ಡಿ ದರ ವರ್ಷಕ್ಕೆ ಶೇ. 8.7ರಿಂದ ಶುರುವಾಗುತ್ತದೆ. ಅಂದರೆ ಕನಿಷ್ಠ ಬಡ್ಡಿ ದರ ಶೇ. 8.7 ಇದೆ. ಇಎಂಐ ಕಟ್ಟುವ ಅವಧಿ 30 ವರ್ಷದವರೆಗೂ ನೀಡಲಾಗಿದೆ.
ಇದನ್ನೂ ಓದಿ: Financial Trauma: ಹಣಕಾಸು ಸಂಕಷ್ಟಕ್ಕೆ ಸಾವಿನ ದವಡೆಗೆ ನೂಕೀತು ಹುಷಾರ್..! ಅಂಥ ಸ್ಥಿತಿಯಲ್ಲಿ ಏನು ಉಪಾಯ?
ಎಸ್ಬಿಐ ಗೃಹಸಾಲಕ್ಕೆ ಪ್ರೋಸಸಿಂಗ್ ಶುಲ್ಕವಾಗಿ ಕನಿಷ್ಠ 5,000 ರೂ ತೆಗೆದುಕೊಳ್ಳುತ್ತದೆ. ಅಥವಾ ಗೃಹಸಾಲ ಮೊತ್ತದಲ್ಲಿ ಶೇ. 0.35ರಷ್ಟು ಹಣವನ್ನು ಶುಲ್ಕವಾಗಿ ಪಡೆಯುತ್ತದೆ. ಸಾಲ ಪಡೆಯುವ ವ್ಯಕ್ತಿಯ ವಯಸ್ಸು ಕನಿಷ್ಠ 18 ವರ್ಷವಿದ್ದು, ಗರಿಷ್ಠ ವಯಸ್ಸು 70 ವರ್ಷ ಇದೆ.
ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಚ್ಡಿಎಫ್ಸಿ 10 ಕೋಟಿ ರೂವರೆಗೂ ಗೃಹಸಾಲಗಳನ್ನು ನೀಡುತ್ತದೆ. ಬಡ್ಡಿದರ ಶೇ. 8.4ರಿಂದ ಆರಂಭವಾಗುತ್ತದೆ. 30 ವರ್ಷಗಳವರೆಗೂ ಇಎಂಐ ಅವಕಾಶ ಇದೆ. ಸಾಲಕ್ಕೆ ಗರಿಷ್ಠ ವಯಸ್ಸು 65 ವರ್ಷ ಎಂದು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: Car Loan: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತೀರಾ? ಕಾರ್ ಲೋನ್ ಪಡೆಯುವ ಮುನ್ನ ಈ ವಿಚಾರ ತಿಳಿದಿರಿ
ಇನ್ನು, ಸಾಲದ ಪ್ರೋಸಸಿಂಗ್ ಶುಲ್ಕವಾಗಿ ಗೃಹಸಾಲ ಮೊತ್ತದ ಶೇ. 0.50ರಷ್ಟು ಹಣವನ್ನು ಪಡೆಯಲಾಗುತ್ತದೆ. 10 ಲಕ್ಷ ರೂ ಸಾಲ ಪಡೆದುಕೊಂಡರೆ 5,000 ರೂ ಪ್ರೋಸಸಿಂಗ್ ಫೀಸ್ ಆಗಿ ಪಡೆಯಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ