Auto Sweep Account: ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರ ಬಡ್ಡಿ ಪಡೆಯಲು ಈ ವಿಧಾನ ಅನುಸರಿಸಿ

| Updated By: Ganapathi Sharma

Updated on: Nov 19, 2022 | 5:02 PM

Auto Sweep Account; ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರ ವರೆಗೆ ಬಡ್ಡಿ ಪಡೆಯಬಹುದು. ಅದಕ್ಕಾಗಿ ನಾವು ಉಳಿತಾಯ ಖಾತೆಯನ್ನು ಆಟೋ ಸ್ವೀಪ್ ಖಾತೆ ಜತೆ ಲಿಂಕ್ ಮಾಡಿ ಅದರ ಪ್ರಯೋಜನ ಪಡೆಯಬೇಕು. ಹೇಗೆಂಬ ಮಾಹಿತಿ ಇಲ್ಲಿ ನೀಡಲಾಗಿದೆ.

Auto Sweep Account: ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರ ಬಡ್ಡಿ ಪಡೆಯಲು ಈ ವಿಧಾನ ಅನುಸರಿಸಿ
ಸಾಂದರ್ಭಿಕ ಚಿತ್ರ
Image Credit source: Reuters
Follow us on

ಕಠಿಣ ಪರಿಶ್ರಮದಿಂದ ದುಡಿದು ಸಂಪಾದಿಸಿದ ದುಡ್ಡನ್ನು ಹೆಚ್ಚು ಬಡ್ಡಿಗಾಗಿ ಮ್ಯೂಚುವಲ್ ಫಂಡ್​ಗಳಲ್ಲಿ (Mutual Fund) ಹೂಡಿಕೆ (Invsetment) ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಹಣಕಾಸು ಸಂಸ್ಥೆಗಳು ನಡೆಸಿದ ಇತ್ತೀಚಿನ ಸಮೀಕ್ಷೆಗಳಿಂದ ತಿಳಿದುಬಂದಿದೆ. ಬ್ಯಾಂಕ್​ಗಳಲ್ಲಿ ಮಾಡುವ ಉಳಿತಾಯಕ್ಕೆ ಸಿಗುವ ಕಡಿಮೆ ಬಡ್ಡಿ ದರವೇ (Savings Account Interest Rate) ಇದಕ್ಕೆ ಪ್ರಮುಖ ಕಾರಣವಾಗಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರಲ್ಲಿ ಎಸ್​ಐಪಿ (Systematic investment plan) ಬಹಳ ಜನಪ್ರಿಯವಾಗಿದೆ. ಬ್ಯಾಂಕ್​ಗಳಲ್ಲಿ ಸ್ಥಿರ ಠೇವಣಿ (FD) ಇಟ್ಟರೂ ಶೇಕಡಾ 7-8ರ ವರೆಗೆ ಬಡ್ಡಿ ದೊರೆಯುತ್ತದಷ್ಟೆ. ಹೀಗಿರುವಾಗ ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರ ವರೆಗೆ ಬಡ್ಡಿ ಪಡೆಯಬಹುದು. ಅದಕ್ಕಾಗಿ ನಾವು ಉಳಿತಾಯ ಖಾತೆಯನ್ನು ಆಟೋ ಸ್ವೀಪ್ ಖಾತೆ ಜತೆ ಲಿಂಕ್ ಮಾಡಿ ಅದರ ಪ್ರಯೋಜನ ಪಡೆಯಬೇಕು.

ಆಟೋ ಸ್ವೀಪ್ ಖಾತೆ ಎಂದರೇನು?

  • ಆಟೋ ಸ್ವೀಪ್ ಖಾತೆಯು ಅತಿಹೆಚ್ಚು ಬಡ್ಡಿ ದರ ನೀಡುವ ಬ್ಯಾಂಕಿಂಗ್ ಸೌಲಭ್ಯವಾಗಿದೆ.
  • ಈ ಮಾದರಿಯ ಖಾತೆಯು ಉಳಿತಾಯ ಖಾತೆ (savings account) ಮತ್ತು ಸ್ಥಿರ ಠೇವಣಿ (fixed deposit) ಸಂಯೋಜನೆಗೊಂಡು ತೆರೆಯುವ ಖಾತೆಯಾಗಿದೆ.
  • ನಿಗದಿಪಡಿಸಲಾಗಿರುವ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ನಾವು ಉಳಿತಾಯ ಖಾತೆಯಲ್ಲಿ ಜಮೆ ಮಾಡಿದಾಗ ಅದು ಸ್ವಯಂಚಾಲಿತವಾಗಿ ಎಫ್​​ಡಿ ಖಾತೆಗೆ ಜಮೆಯಾಗುತ್ತದೆ.
  • ವೈಯಕ್ತಿಕವಾಗಿಯೂ ಸಂಸ್ಥೆಗಳಿಗೆಯೂ ಈ ರೀತಿಯ (ಆಟೋ ಸ್ವೀಪ್) ಖಾತೆ ತೆರೆಯಲು ಬ್ಯಾಂಕ್​ಗಳು ಅವಕಾಶ ನೀಡುತ್ತವೆ.

ಎಸ್​ಬಿಐ ಆಟೋ ಸ್ವೀಪ್ ಅಕೌಂಟ್ (ಸೇವಿಂಗ್ಸ್ ಪ್ಲಸ್ ಅಕೌಂಟ್)

ಇದನ್ನೂ ಓದಿ
SBI credit card: ಕೆಲವು ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕ ಹೆಚ್ಚಿಸಿದ ಎಸ್​ಬಿಐ; ವಿವರ ಇಲ್ಲಿದೆ
FD Interest rate: ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 9ರ ವರೆಗೆ ಬಡ್ಡಿ ನೀಡುತ್ತಿದೆ ಈ ಬ್ಯಾಂಕ್
Gautam Adani: ಹೆಚ್ಚುತ್ತಿರುವ ಸಂಪತ್ತು ನಿರ್ವಹಣೆಗೆ ವಿದೇಶದಲ್ಲಿ ಕಚೇರಿ ತೆರೆಯಲಿದ್ದಾರೆ ಗೌತಮ್ ಅದಾನಿ
ನೀವು ಇಪಿಎಸ್ ಪಿಂಚಣಿದಾರರೇ? ಇನ್ನು ಯಾವಾಗ ಬೇಕಾದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದು
  • ಸೇವಿಂಗ್ಸ್ ಪ್ಲಸ್ ಅಕೌಂಟ್ ಮಾದರಿಯಲ್ಲಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಆಟೋ ಸ್ವೀಪ್ ಖಾತೆ ತೆರೆಯಲು ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಅಥವಾ ಆನ್​ಲೈನ್​ನಲ್ಲಿಯೂ ಆಟೋ ಸ್ವೀಪ್ ಸೇವಿಂಗ್ಸ್ ಪ್ಲಸ್ ಅಕೌಂಟ್ ತೆರೆಯಬಹುದು.
  • ಎಸ್​ಬಿಐನಲ್ಲಿ ಠೇವಣಿಗಳ ಅವಧಿ 1ರಿಂದ 5 ವರ್ಷ ಆಗಿದೆ. ಆಟೋ ಸ್ವೀಪ್ ಸೌಲಭ್ಯಕ್ಕಾಗಿ ಕನಿಷ್ಠ ತ್ರೆಶ್​​ಹೋಲ್ಡ್ (ಇದಕ್ಕಿಂತ ಮೇಲಿರುವ ಮೊತ್ತ ಆಟೋ ಸ್ವೀಪ್ ಆಗಿ ಪರಿವರ್ತನೆಗೊಳ್ಳುತ್ತದೆ) ಮಿತಿ 35,000 ರೂ. ಹಾಗೂ ಕನಿಷ್ಠ ರಿಸಲ್ಟೇಂಟ್ (ಉಳಿತಾಯ ಖಾತೆಯಲ್ಲಿ ಇರಬೇಕಾದ ಕನಿಷ್ಠ ಮೊತ್ತ) ಬ್ಯಾಲೆನ್ಸ್ 25,000 ರೂ. ಆಗಿದೆ. ರಿಸಲ್ಟೇಂಟ್​ಗಿಂತ ಕಡಿಮೆ ಮೊತ್ತ ಇದ್ದರೆ ಆಗ ಎಫ್​ಡಿಯಿಂದ ಉಳಿತಾಯ ಖಾತೆಗೆ ಹಣ ರಿವರ್ಸ್ ಆಗುತ್ತದೆ.

ಉದಾಹರಣೆಗಾಗಿ ಎಸ್​ಬಿಐ ಆಟೋ ಸ್ವೀಪ್ ಖಾತೆ ಲೆಕ್ಕಾಚಾರ ಇಲ್ಲಿ ನೀಡಲಾಗಿದೆ;

ವ್ಯಕ್ತಿಯೊಬ್ಬರು ತಮ್ಮ ಸೇವಿಂಗ್ಸ್ ಪ್ಲಸ್ ಖಾತೆಯಲ್ಲಿ 50,000 ರೂ. ಹೊಂದಿದ್ದು, 25,000 ರೂ. ಅನ್ನು ತ್ರೆಶ್​​ಹೋಲ್ಡ್ ಮಿತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದಿಟ್ಟುಕೊಳ್ಳೋಣ. ಉಳಿದ 25,000 ರೂ. ಸ್ವಯಂಚಾಲಿತವಾಗಿ ಎಫ್​ಡಿ ಆಗಿ ಪರಿವರ್ತನೆ ಹೊಂದುತ್ತದೆ. ಇದಕ್ಕೆ ಸುಮಾರು ಶೇಕಡಾ 7ರ ವರೆಗೆ ಬಡ್ಡಿ ದೊರೆಯುತ್ತದೆ. ಇನ್ನು ಅವರ ಖಾತೆಯಲ್ಲಿ ಉಳಿದಿರುವ 25,000 ರೂ.ಗೆ ಉಳಿತಾಯದ ಬಡ್ಡಿಯಾಗಿ ಶೇಕಡಾ 3ರಿಂದ 4ರ ವರೆಗೆ ಸಿಗಲಿದೆ.

ಆಟೋ ಸ್ವೀಪ್ ಹಣವನ್ನು ಯಾವಾಗ ಬೇಕಾದರೂ ವಿತ್​​ಡ್ರಾ ಮಾಡಬಹುದಾಗಿದೆ. ಇದಕ್ಕೆ ಮಾಮೂಲಿ ಎಫ್​ಡಿಗಳಂತೆ ಲಾಕ್ಇನ್ ಅವಧಿ ಇಲ್ಲ.

ಆಟೋ ಸ್ವೀಪ್ ಅಕೌಂಟ್ ಯಾಕೆ ಉತ್ತಮ?

  • ಈ ಸೌಲಭ್ಯದ ಮೂಲಕ ಉಳಿತಾಯ ಖಾತೆಯಲ್ಲಿ ಪಡೆಯುವುದಕ್ಕಿಂತಲೂ ಹೆಚ್ಚಿನ ಬಡ್ಡಿ ಪಡೆಯಬಹುದು.
  • ಲಾಕ್​ ಇನ್ ಅವಧಿ ಇಲ್ಲದಿರುವುದರಿಂದ ಯಾವಾಗ ಬೇಕಿದ್ದರೂ ವಿತ್​ಡ್ರಾ ಅಥವಾ ಹಣ ವರ್ಗಾವಣೆ ಮಾಡಬಹುದು.
  • ಉಳಿತಾಯ ಖಾತೆಯಲ್ಲಿ ಮೊತ್ತ ಕಡಿಮೆಯಾದರೆ ಆಟೋ ಸ್ವೀಪ್ ಖಾತೆಯಿಂದ ಉಳಿತಾಯ ಖಾತೆಗೆ ಹಣ ರಿವರ್ಸ್ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Sat, 19 November 22