PAN: ನಿಷ್ಕ್ರಿಯ ಪ್ಯಾನ್ ಬಳಸಿದರೆ ಯಾವ್ಯಾವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ? ಇಲ್ಲಿದೆ ಡೀಟೇಲ್ಸ್

What Not To Do With Inoperative PAN: ಆಧಾರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್ ನಿಷ್ಕ್ರಿಯಗೊಂಡಿರುತ್ತದೆ. ನೀವು ದಂಡ ಕಟ್ಟಿ ಈಗಲೂ ಸಕ್ರಿಯಗೊಳಿಸಬಹುದು. ಪ್ಯಾನ್ ಸಕ್ರಿಯಗೊಳ್ಳುವವರೆಗೂ ಅದನ್ನು ಬಳಕೆ ಮಾಡಿದರೆ ಕ್ರಮ ಎದುರಿಸಬೇಕಾಗಬಹುದು.

PAN: ನಿಷ್ಕ್ರಿಯ ಪ್ಯಾನ್ ಬಳಸಿದರೆ ಯಾವ್ಯಾವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ? ಇಲ್ಲಿದೆ ಡೀಟೇಲ್ಸ್
ಪ್ಯಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 11, 2023 | 12:31 PM

ಆಧಾರ್ ನಂಬರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್ (PAN) ಜುಲೈ 1ರಿಂದ ನಿಷ್ಕ್ರಿಯವಾಗಿದೆ. ಹಣಕಾಸು ವಹಿವಾಟಿಗೆ ಪ್ಯಾನ್ ನಂಬರ್ ಬಹಳ ಅಗತ್ಯ. ಹೀಗಾಗಿ, ಆಧಾರ್ ಜೊತೆ ಪ್ಯಾನ್ ಲಿಂಕ್ (PAN Linking With Aadhaar) ಮಾಡುವುದು ಅಗತ್ಯ. ನೀವು ನಿಷ್ಕ್ರಿಯಗೊಂಡ ಪ್ಯಾನ್​ನ ಬಳಕೆ ಮುಂದುವರಿಸಿದರೆ ಸರ್ಕಾರದಿಂದ ಕ್ರಮ ಎದುರಿಸಬೇಕಾಗಬಹುದು. ಅಲ್ಲದೇ ಹಲವು ಹಣಕಾಸು ಚಟುವಟಿಕೆ ನಡೆಸಲು ನಿಷ್ಕ್ರಿಯ ಪ್ಯಾನ್​ನಿಂದ ಸಾಧ್ಯವಾಗದೇ ಹೋಗಬಹುದು. ನಿಮ್ಮ ದೈನಂದಿನ ಹಣಕಾಸು ಚಟುವಟಿಕೆಗೂ ಕಷ್ಟವಾಗಬಹುದು. ನೀವು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡದೇ ಹೋಗಿದ್ದರೆ 1,000 ರೂ ದಂಡ ಕಟ್ಟಿ ಈಗಲೂ ಮಾಡಬಹುದು. ಅದು ಸಕ್ರಿಯಗೊಳ್ಳಲು 30 ದಿನಗಳಾದರೂ ಬೇಕು. ಅಲ್ಲಿಯವರೆಗೂ ನೀವು ಪ್ಯಾನ್ ಬಳಸುವಂತಿಲ್ಲ. ನಿಷ್ಕ್ರಿಯಗೊಂಡ ಪ್ಯಾನ್​ನಿಂದ ಏನೇನು ವಹಿವಾಟು ಸಾಧ್ಯವಾಗುವುದಿಲ್ಲ ಎಂಬ ವಿವರ ಇಲ್ಲಿದೆ

  • ನಿಷ್ಕ್ರಿಯ ಪ್ಯಾನ್ ಬಳಸಿ ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ
  • ಜೂನ್ 30ಕ್ಕೆ ಮುನ್ನ ನೀವು ಐಟಿಆರ್ ಸಲ್ಲಿಸಿದ್ದು ನಿಮ್ಮ ಪ್ಯಾನ್ ಈಗ ನಿಷ್ಕ್ರಿಯವಾಗಿದ್ದರೆ ಐಟಿಆರ್ ಅರ್ಜಿ ಪ್ರೋಸಸ್ ಆಗುವುದಿಲ್ಲ. ರೀಫಂಡ್ ಕೂಡ ಆಗುವುದಿಲ್ಲ.
  • ನಿಷ್ಕ್ರಿಯ ಪ್ಯಾನ್ ಬಳಸಿ ನೀವು ಹೊಸ ಬ್ಯಾಂಕ್ ಖಾತೆ ಪಡೆಯಲು ಆಗುವುದಿಲ್ಲ. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಸಿಗುವುದಿಲ್ಲ.
  • ಯಾವುದೇ ಬ್ಯಾಂಕ್​ನಲ್ಲಿ 50,000 ರೂಗಿಂತ ಹೆಚ್ಚು ನಗದು ಹಣವನ್ನು ಜಮೆ ಮಾಡಲು ಆಗುವುದಿಲ್ಲ.

ಇದನ್ನೂ ಓದಿIT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

  • ನಿಷ್ಕ್ರಿಯ ಪ್ಯಾನ್ ಬಳಸಿ ಡಿಮ್ಯಾಟ್ ಅಕೌಂಟ್ ತೆರೆಯಲು ಆಗುವುದಿಲ್ಲ. ಮ್ಯೂಚುವಲ್ ಫಂಡ್​ನಲ್ಲಿ 50,000 ರೂಗಿಂತ ಹೆಚ್ಚು ಮೊತ್ತದ ಪಾವತಿ ಮಾಡಲು ಆಗುವುದಿಲ್ಲ.
  • ಯಾವುದೇ ಕಂಪನಿ ಅಥವಾ ಸಂಸ್ಥೆಗಳ ಡಿಬಂಚರ್ ಅಥವಾ ಬಾಂಡ್​ಗಳು 50,000 ರೂಗಿಂತ ಹೆಚ್ಚಿರುವಂತಿಲ್ಲ.
  • 1 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಸೆಕ್ಯೂರಿಟಿಗಳ ವಹಿವಾಟು ಸಾಧ್ಯವಿಲ್ಲ. ಲಿಸ್ಟ್ ಆಗಿಲ್ಲ ಕಂಪನಿಯ ಷೇರುಗಳ ವಹಿವಾಟು 1 ಲಕ್ಷ ರೂಗಿಂತ ಹೆಚ್ಚಿರುವಂತಿಲ್ಲ.
  • ಹೋಟೆಲ್ ಅಥವಾ ರೆಸ್ಟೋರೆಂಟ್​ಗಳಲ್ಲಿ ಒಮ್ಮೆಗೆ 50,000 ರೂಗಿಂತ ಹೆಚ್ಚು ಮೊತ್ತದ ನಗದಿ ಪಾವತಿ ಮಾಡಲು ಆಗುವುದಿಲ್ಲ.
  • ವಿದೇಶೀ ಪ್ರಯಾಣಕ್ಕಾಗಿ ಅಥವಾ ವಿದೇಶೀ ಕರೆನ್ಸಿ ಖರೀದಿಗೆ 50,000 ರೂಗಿಂತ ಹೆಚ್ಚು ನಗದು ಪಾವತಿ ಸಾಧ್ಯವಿಲ್ಲ.
  • ಪೇಟಿಎಂ, ಫೋನ್​ಪೇ ಇತ್ಯಾದಿ ಮೊಬೈಲ್ ವ್ಯಾಲಟ್​ಗಳಿಗೆ ಒಂದು ವರ್ಷದಲ್ಲಿ 50,000 ರೂಗಿಂತ ಹೆಚ್ಚು ಪಾವತಿ ಸಾಧ್ಯವಿಲ್ಲ.
  • ಆರ್​ಬಿಐ ನೀಡುವ ಬಾಂಡ್​ಗಳನ್ನು ಖರೀದಿಸಲು ನೀವು ಮಾಡುವ ಪಾವತಿ 50,000 ರೂ ಮೀರಲಾಗುವುದಿಲ್ಲ.

ಇದನ್ನೂ ಓದಿInvestments: ನವವಿವಾಹಿತರು ಜಾಣರಾದರೆ ಈ 5 ಹೂಡಿಕೆಗಳನ್ನು ಮರೆಯಲ್ಲ; ತಪ್ಪದೇ ಅಳವಡಿಸಿ ಜೀವನದ ಭದ್ರತೆಗೆ ಅಡಿಪಾಯ ಹಾಕಿ

  • ಬ್ಯಅಕ್ ಡ್ರಾಫ್ಟ್, ಪೇ ಆರ್ಡರ್, ಬ್ಯಾಂಕರ್ ಚೆಕ್ ಇತ್ಯಾದಿಯನ್ನು ಖರೀದಿಸಲು ಒಂದು ದಿನದಲ್ಲಿ 50,000 ರೂಗಿಂತ ಹೆಚ್ಚು ಹಣ ವ್ಯಯಿಸಲು ಆಗುವುದಿಲ್ಲ.
  • ಬ್ಯಾಂಕು, ಅಂಚೆ ಕಚೇರಿ ಇತ್ಯಾದಿ ಕಡೆ 50,000ರೂಗಿಂತ ಹೆಚ್ಚು ಮೊತ್ತದ ಟೈಮ್ ಡೆಪಾಸಿಟ್ ಆರಂಭಿಸಲು ಸಾಧ್ಯವಿಲ್ಲ.
  • ಎಲ್​ಐಸಿ ಪ್ರೀಮಿಯಮ್​ಗಳನ್ನು ವರ್ಷಕ್ಕೆ 50,000 ರೂಗಿಂತ ಹೆಚ್ಚು ಪಾವತಿಸಲು ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Tue, 11 July 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ