22 ಕ್ಯಾರೆಟ್ ಅಥವಾ 24 ಕ್ಯಾರೆಟ್ ಚಿನ್ನ; ಹೆಚ್ಚು ಆದಾಯ ತರುವುದು ಯಾವುದು? ಇಲ್ಲಿದೆ ಉತ್ತರ

|

Updated on: May 07, 2024 | 6:23 PM

24 Carat or 22 Carat Gold?: ನೀವು ಚಿನ್ನದಲ್ಲಿ ಹೂಡಿಕೆ ಮಾಡುವವರಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು. ಆಭರಣ ಚಿನ್ನವಾ, ಅಪರಂಜಿ ಚಿನ್ನವಾ ಎಂಬ ಗೊಂದಲ ಇದ್ದರೆ ಈ ಸುದ್ದಿ ಓದಿರಿ. ನೀವು ಒಡವೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲವಾದಲ್ಲಿ 24 ಕ್ಯಾರಟ್ ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳಬಹುದು. ಹೂಡಿಕೆಗೆ ಯಾವ ರೀತಿಯ ಚಿನ್ನ ಉತ್ತಮ ಎಂದು ಪರಿಗಣಿಸುವಾಗ ಹಲವಾರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಚಿನ್ನದ ಶುದ್ಧತೆ ಹೆಚ್ಚಾದಷ್ಟೂ ಅದರ ಬೆಲೆಯೂ ಹೆಚ್ಚುತ್ತದೆ.

22 ಕ್ಯಾರೆಟ್ ಅಥವಾ 24 ಕ್ಯಾರೆಟ್ ಚಿನ್ನ; ಹೆಚ್ಚು ಆದಾಯ ತರುವುದು ಯಾವುದು? ಇಲ್ಲಿದೆ ಉತ್ತರ
ಚಿನ್ನದ ಮೇಲೆ ಹೂಡಿಕೆ
Follow us on

ಭಾರತೀಯರಿಗೆ ಚಿನ್ನ ಅಚ್ಚುಮೆಚ್ಚು. ಆಭರಣ ಮೂಲಕ ಅಲಂಕಾರಕ್ಕೆ ಚಿನ್ನ (Gold) ಬಳಸುತ್ತಾರೆ. ಕಷ್ಟಕಾಲಕ್ಕೆ ಇರಲಿ ಎಂದು ಹೂಡಿಕೆಯಾಗಿಯೂ ಅದನ್ನು ಇರಿಸಿಕೊಳ್ಳುತ್ತಾರೆ. ಇತ್ತೀಚೆಗೆ ಚಿನ್ನ ಹೂಡಿಕೆಯಾಗಿ ಹೆಚ್ಚು ಬಳಸಲಾಗುತ್ತಿದೆ. ಬಾಂಡ್ ರೂಪದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವ ಆಯ್ಕೆಗಳಿವೆ. ಹಾಗೆಯೇ ಭೌತಿಕವಾಗಿ ಚಿನ್ನವನ್ನು ಖರೀದಿಸುವ ಪರಿಪಾಠ ಮುಂದವರಿದಿದೆ. ನೀವು ಭೌತಿಕ ಚಿನ್ನವನ್ನು ಖರೀದಿಸುವಾಗ ಎರಡು ಪ್ರಮುಖ ಆಯ್ಕೆಗಳು ಕಣ್ಮುಂದೆ ಬರುತ್ತವೆ. ಒಂದು ಆಭರಣ ಚಿನ್ನ, ಮತ್ತೊಂದು ಅಪರಂಜಿ ಚಿನ್ನ. ಅಪರಂಜಿ ಚಿನ್ನವು 24 ಕ್ಯಾರಟ್​ನದ್ದಾಗಿದೆ. ಆಭರಣ ಚಿನ್ನ 22 ಕ್ಯಾರಟ್​ನದ್ದಾಗಿದೆ. ಈ ಪೈಕಿ ಹೂಡಿಕೆಗೆ 24 ಕ್ಯಾರಟ್ ಚಿನ್ನ (24 carat gold) ಮೊದಲ ಆಯ್ಕೆ ಆಗಿರುತ್ತದೆ.

22 ಕ್ಯಾರೆಟ್ ಅಥವಾ 24 ಕ್ಯಾರೆಟ್ ಎಂದರೇನು?

ದ್ರವವನ್ನು ಅಳೆಯಲು ಲೀಟರ್‌ಗಳನ್ನು ಬಳಸುವಂತೆ, ಚಿನ್ನವನ್ನು ಅಳೆಯಲು ಕ್ಯಾರೆಟ್‌ಗಳನ್ನು ಬಳಸಲಾಗುತ್ತದೆ. ಚಿನ್ನವು ಎಷ್ಟು ಶುದ್ಧವಾಗಿದೆ ಎಂಬುದನ್ನು ಇದು ನಮಗೆ ತಿಳಿಸುತ್ತದೆ. 24 ಕ್ಯಾರೆಟ್ ಚಿನ್ನವನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಶುದ್ಧ ರೂಪದಲ್ಲಿ 99.9 ಪ್ರತಿಶತ ಚಿನ್ನವನ್ನು ಹೊಂದಿರುತ್ತದೆ. ಚಿನ್ನವು ಶುದ್ಧವಾದಷ್ಟೂ ಅದರ ಕ್ಯಾರೆಟ್ ಮೌಲ್ಯವು ಹೆಚ್ಚಾಗುತ್ತದೆ. ಸಾಮಾನ್ಯವಾಗಿ 24, 22, 18 ಮತ್ತು 14 ಕ್ಯಾರೆಟ್ ಚಿನ್ನ ಹೆಚ್ಚು ಪ್ರಚಲಿತದಲ್ಲಿದೆ.

ಇದನ್ನೂ ಓದಿ: ಚಿನ್ನ, ನೀನೆಷ್ಟು ಚೆನ್ನ..! ಷೇರು ಮಾರುಕಟ್ಟೆಗಿಂತಲೂ ಭರ್ಜರಿ ರಿಟರ್ನ್ ಕೊಡುತ್ತಿದೆ ಸ್ವರ್ಣ

24 ಕ್ಯಾರೆಟ್ ಚಿನ್ನವನ್ನು ಹೊರತುಪಡಿಸಿ, ಉಳಿದವುಗಳಲ್ಲಿ ತಾಮ್ರ ಅಥವಾ ಬೆಳ್ಳಿಯಂತಹ ಲೋಹಗಳನ್ನು ಬೆರೆಸಲಾಗುತ್ತದೆ. ಆಭರಣಗಳು ಬಲಗೊಳ್ಳಲು ಇದನ್ನು ಮಾಡಲಾಗುತ್ತದೆ. ಬಿಐಎಸ್ ಹಾಲ್​ಮಾರ್ಕಿಂಗ್ ಚಿನ್ನದ ಗುಣಮಟ್ಟವನ್ನು ಪ್ರಮಾಣೀಕರಿಸುತ್ತದೆ. ಆದ್ದರಿಂದ, ನಾವು ಹಾಲ್‌ಮಾರ್ಕ್ ಮಾಡಿದ ಚಿನ್ನವನ್ನು ಮಾತ್ರ ಖರೀದಿಸಬೇಕು.

ಹೂಡಿಕೆಗೆ ಯಾವ ಚಿನ್ನ ಉತ್ತಮ?

ಹೂಡಿಕೆಗೆ ಯಾವ ರೀತಿಯ ಚಿನ್ನ ಉತ್ತಮ ಎಂದು ಪರಿಗಣಿಸುವಾಗ ಹಲವಾರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಚಿನ್ನದ ಶುದ್ಧತೆ ಹೆಚ್ಚಾದಷ್ಟೂ ಅದರ ಬೆಲೆಯೂ ಹೆಚ್ಚುತ್ತದೆ. ಆದ್ದರಿಂದ, ಇಂದಿನ ಶುದ್ಧ 24 ಕ್ಯಾರೆಟ್ ಚಿನ್ನದ ಬೆಲೆಯು ಕಾಲಾನಂತರದಲ್ಲಿ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ, ಇದರಿಂದಾಗಿ ಅದು ಹೆಚ್ಚಿನ ಆದಾಯವನ್ನು ನೀಡುತ್ತದೆ. 22 ಕೆ ಚಿನ್ನ ಹೂಡಿಕೆಗೆ ಅರ್ಹವಲ್ಲ ಎನ್ನುವಂತಿಲ್ಲ. ಆದರೆ, ಅದನ್ನು ಮಾರುವಾಗ ವೇಸ್ಟೇಜ್ ಅನ್ನು ಕಳೆದು ನಂತರದ ಮೌಲ್ಯದ ಹಣ ನಿಮಗೆ ಸಿಗುತ್ತದೆ. ಆದ್ದರಿಂದ 24 ಕ್ಯಾರೆಟ್ ಚಿನ್ನ ಹೂಡಿಕೆಗೆ ಹೆಚ್ಚು ಅರ್ಹ.

ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ

ಆಭರಣಗಳಿಗೆ ಯಾವುದು ಉತ್ತಮ?

ಧರಿಸಲು ಮಾಡಿದ ಆಭರಣಗಳನ್ನು 24 ಕ್ಯಾರೆಟ್‌ನಲ್ಲಿ ಮಾಡಲಾಗುವುದಿಲ್ಲ. ಅಪರಂಜಿ ಚಿನ್ನವು ತುಂಬಾ ಮೃದುವಾಗಿರುತ್ತದೆ. ಆದ್ದರಿಂದ, ನಿಕಲ್, ತಾಮ್ರ, ಬೆಳ್ಳಿಯಂತಹ ಲೋಹಗಳನ್ನು ಅದರಲ್ಲಿ ಬೆರೆಸಲಾಗುತ್ತದೆ. ಇಂತಹ ಬೇರೆ ಲೋಹಗಳನ್ನು ಹೆಚ್ಚು ಬೆರೆಸಿದಷ್ಟೂ ಚಿನ್ನದ ಶುದ್ಧತೆ ಕಡಿಮೆ ಆಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ 24 ಕ್ಯಾರೆಟ್ ಚಿನ್ನ ಹೆಚ್ಚು ಹೊಳೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ