ಸುಮ್ಮನೆ ಹಣವನ್ನು ಬ್ಯಾಂಕ್ನಲ್ಲಿ ಶೇಖರಿಸಿಡುವುದಲ್ಲ. ಈ ಉಳಿಸಿದ ಹಣವನ್ನು ಹೂಡಿಕೆಗಳ ಮೂಲಕ ಹೆಚ್ಚಿಸುವ ಪ್ರಯತ್ನಗಳಾಗಬೇಕು. ಇವತ್ತು ಬಹಳ ಸುರಕ್ಷಿತವೆನಿಸುವ ಹೂಡಿಕೆ ಆಯ್ಕೆಗಳಿವೆ. ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ನಾವು ಮಾಡುವ ಹೂಡಿಕೆ (investment) ಎಷ್ಟು ಬೆಳೆಯುತ್ತದೆ ಎಂದು ಮೊದಲೇ ಮನಗಾಣಬಹುದು. ಕೆಲ ಹೂಡಿಕೆಗಳಲ್ಲಿ ಹಣ ಆರೇಳು ವರ್ಷಕ್ಕೆ ಡಬಲ್ ಆಗಬಹುದು, ಇನ್ನೂ ಕೆಲ ಹೂಡಿಕೆಗಳಲ್ಲಿ ಹಣ ಡಬಲ್ ಆಗಲು 10 ವರ್ಷವೇ ಬೇಕಾಗಬಹುದು. ಒಂದು ಹೂಡಿಕೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತದೆ ಎಂಬುದು ಆ ಸ್ಕೀಮ್ನಲ್ಲಿ ಸಿಗುವ ವಾರ್ಷಿಕ ಬಡ್ಡಿ ಆಧಾರವಾಗಿರುತ್ತದೆ. ಈ ಬಡ್ಡಿ ಎಷ್ಟೆಂದು ತಿಳಿದರೆ ಹೂಡಿಕೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತದೆ ಎಂದು ಸುಲಭವಾಗಿ ಎಣಿಸಬಹುದು. ಅದಕ್ಕೆ ರೂಲ್ 72 ಎಂಬ ಸುಲಭ ಸೂತ್ರ ಇದೆ.
72 ನಂಬರ್ ಅನ್ನು ಬಡ್ಡಿದರದೊಂದಿಗೆ ಭಾಗಿಸಬೇಕು. ಆಗ ಸಿಗುವ ಸಂಖ್ಯೆಯು ನಿರ್ದಿಷ್ಟ ಹೂಡಿಕೆಯಲ್ಲಿ ನಮ್ಮ ಹಣ ಎಷ್ಟು ವರ್ಷಕ್ಕೆ ದ್ವಿಗುಣಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. ಉದಾಹರಣೆಗೆ ನೀವು ಶೇ. 9ರಷ್ಟು ಬಡ್ಡಿ ಕೊಡುವ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ನಲ್ಲಿ ಹಣ ಇರಿಸಿದರೆ 8 ವರ್ಷಕ್ಕೆ (72/9=8) ಹಣ ಡಬಲ್ ಆಗುತ್ತದೆ.
ಇದನ್ನೂ ಓದಿ: ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ಬಡ್ಡಿ ಶೇ. 7.4; ಅಧಿಕ ಬಡ್ಡಿ ಜೊತೆಗೆ ತೆರಿಗೆ ಲಾಭವೂ ಇದೆ ಎಂಐಎಸ್ನಲ್ಲಿ
ಇದನ್ನೂ ಓದಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಮೂಲಕ ನಿಮ್ಮ ಉಳಿತಾಯ ಹಣಕ್ಕೆ ಭರ್ಜರಿ ಲಾಭ; 5 ಕೋಟಿ ಆದಾಯ ಹೇಗೆ?
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ