ಡೀಮ್ಯಾಟ್ ಅಕೌಂಟ್ ಇಲ್ಲದೇ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಾ? ಫೋಲಿಯೋ ಮೂಲಕ ಇನ್ವೆಸ್ಟ್ ಮಾಡಬಹುದಾ?

|

Updated on: Sep 27, 2023 | 5:04 PM

How To Invest In Mutual Fund Without Demat Account: ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಡೀಮ್ಯಾಟ್ ಅಕೌಂಟ್ ಹೊಂದಿರಬೇಕು ಎಂದು ಹೇಳಲಾಗುತ್ತದೆ. ಡಿಮ್ಯಾಟ್ ಖಾತೆ ಇಲ್ಲದೇ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಿಲ್ಲವಾ? ಷೇರುಗಳ ವಹಿವಾಟು ನಡೆಸಲು ಡೀಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಬೇಕೇ ಬೇಕು. ಆದರೆ, ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಪರ್ಯಾಯ ಆಯ್ಕೆ ಇದೆ ಅದೇ ಫೋಲಿಯೋಮೆಟ್ರಿಕ್ ವಿಧಾನ.

ಡೀಮ್ಯಾಟ್ ಅಕೌಂಟ್ ಇಲ್ಲದೇ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಾ? ಫೋಲಿಯೋ ಮೂಲಕ ಇನ್ವೆಸ್ಟ್ ಮಾಡಬಹುದಾ?
ಮ್ಯೂಚುವಲ್ ಫಂಡ್
Follow us on

ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ (Mutual Fund investors) ಮಾಡುವವರ ಸಂಖ್ಯೆ ವರ್ಷವರ್ಷವೂ ಹೆಚ್ಚುತ್ತಿದೆ. ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡಲು ವ್ಯವಧಾನ ಇಲ್ಲದವರು ಮತ್ತು ಭಯ ಇರುವವರು ಮ್ಯೂಚುವಲ್ ಫಂಡ್​ನಲ್ಲಿ ಹಣ ಹಾಕುತ್ತಾರೆ. ಹೂಡಿಕೆದಾರರ ಪರವಾಗಿ ಮ್ಯೂಚುವಲ್ ಫಂಡ್​ನ ಫಂಡ್ ಮ್ಯಾನೇಜರ್​ಗಳು ಹಣವನ್ನು ವಿವಿಧ ಷೇರುಗಳು, ಬಾಂಡ್​ಗಳ ಮೇಲೆ ಹಾಕುತ್ತಾರೆ. ಎಲ್ಲೆಲ್ಲಿ ಹೂಡಿಕೆ ಮಾಡಬೇಕೆಂದು ಈ ಮ್ಯಾನೇಜರುಗಳೇ (fund managers) ನಿರ್ಧರಿಸುತ್ತಾರೆ. ಹೀಗಾಗಿ, ಹೂಡಿಕೆದಾರರಿಗೆ ತಲೆನೋವು ಕಡಿಮೆ. ಆದರೆ, ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಡೀಮ್ಯಾಟ್ ಅಕೌಂಟ್ (Demat account) ಹೊಂದಿರಬೇಕು ಎಂದು ಹೇಳಲಾಗುತ್ತದೆ. ಡಿಮ್ಯಾಟ್ ಖಾತೆ ಇಲ್ಲದೇ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಿಲ್ಲವಾ?

ಏನಿದು ಡೀಮ್ಯಾಟ್ ಅಕೌಂಟ್?

ಡೀಮೆಟೀರಿಯಲೈಸ್ಡ್ ಅಕೌಂಟ್ (Dematerialised Account) ಎನ್ನುವುದಕ್ಕೆ ಚಿಕ್ಕದಾಗಿ ಡೀಮ್ಯಾಟ್ ಎನ್ನುತ್ತಾರೆ. ನಿಮ್ಮಲ್ಲಿರುವ ಯಾವುದಾದರೂ ಸೇವಿಂಗ್ಸ್ ಅಕೌಂಟ್ ಅನ್ನೇ ಡೀಮ್ಯಾಟ್ ಖಾತೆಯಾಗಿ ಪರಿವರ್ತಿಸಿಕೊಳ್ಳಬಹುದು. ಷೇರುಗಳು, ಬಾಂಡ್​ಗಳು ಮತ್ತಿತರ ಹಣಕಾಸು ಆಸ್ತಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಈ ಡೀಮ್ಯಾಟ್ ಅಕೌಂಟ್​ನಲ್ಲಿ ಇಟ್ಟುಕೊಳ್ಳಬಹುದು.

ಷೇರುಗಳನ್ನು ಮಾರಾಟ ಮಾಡಲು ಟ್ರೇಡಿಂಗ್ ಅಕೌಂಟ್ ಬೇಕಾಗುತ್ತದೆ. ಹೆಚ್ಚಿನ ಬ್ಯಾಂಕುಗಳು ಥ್ರೀ ಇನ್ ಒನ್ ಆಯ್ಕೆ ಕೊಡುತ್ತವೆ. ಅಂದರೆ ಒಂದೇ ಖಾತೆಯಲ್ಲೇ ಸೇವಿಂಗ್ಸ್ ಅಕೌಂಟ್, ಡೀಮ್ಯಾಟ್ ಅಕೌಂಟ್ ಮತ್ತು ಟ್ರೇಡಿಂಗ್ ಅಕೌಂಟ್ ಸೌಲಭ್ಯ ಕೊಡುತ್ತವೆ.

ಇದನ್ನೂ ಓದಿ: ಹಬ್ಬದ ಸೀಸನ್ ಅಕ್ಟೋಬರ್ 2023ರಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ವಿವರ

ಡೀಮ್ಯಾಟ್ ಅಕೌಂಟ್ ಇಲ್ಲದೇ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಿಲ್ಲವಾ?

ಷೇರುಗಳ ವಹಿವಾಟು ನಡೆಸಲು ಡೀಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಬೇಕೇ ಬೇಕು. ಆದರೆ, ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಪರ್ಯಾಯ ಆಯ್ಕೆ ಇದೆ ಅದೇ ಫೋಲಿಯೋಮೆಟ್ರಿಕ್ ವಿಧಾನ. ಬಹುತೇಕ ಮ್ಯೂಚುವಲ್ ಫಂಡ್ ಸಂಸ್ಥೆಗಳು ಡೀಮ್ಯಾಟ್ ಖಾತೆ ಜೊತೆಗೆ ಫೋಲಿಯೋದ ಆಯ್ಕೆಯನ್ನೂ ಗ್ರಾಹಕರಿಗೆ ಒದಗಿಸುತ್ತವೆ. ಡೀಮ್ಯಾಟ್ ಖಾತೆ ಇಲ್ಲದೆಯೇ ಫೋಲಿಯೋಮೆಟ್ರಿಕ್ ಮೂಲಕ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು.

ಫೋಲಿಯೋ ಹೇಗೆ ಕೆಲಸ ಮಾಡುತ್ತದೆ?

ನೀವು ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಿದಾಗ ವಿಶೇಷವಾದ ಒಂದು ಫೋಲಿಯೋ ಸಂಖ್ಯೆ ಕೊಡಲಾಗುತ್ತದೆ. ಒಂದು ನಿರ್ದಿಷ್ಟ ಮ್ಯುಚುವಲ್ ಫಂಡ್ ಯೋಜನೆಗೆ ಪ್ರತ್ಯೇಕ ಫೋಲಿಯೋ ನಂಬರ್ ನೀಡಲಾಗುತ್ತದೆ. ಈ ಫೋಲಿಯೋ ಸಂಖ್ಯೆ ಬಳಸಿ ನಿಮ್ಮ ಹೂಡಿಕೆಗಳನ್ನು ಟ್ರ್ಯಾಕ್ ಮಾಡಬಹುದು. ಎಸ್​ಐಪಿಯಾದರೆ ನಿಮ್ಮ ಆವರೆಗಿನ ಹೂಡಿಕೆಗಳನ್ನು ಈ ಸಂಖ್ಯೆ ಮೂಲಕ ಕಂಡುಕೊಳ್ಳಬಹುದು.

ಇದನ್ನೂ ಓದಿ: ವೈಮಾನಿಕ ಕ್ಷೇತ್ರಕ್ಕೆ ಹೋಗುವ ಒಂದು ರೂ ಹಣದಿಂದ ಆರ್ಥಿಕತೆಗೆ 3 ಪಟ್ಟು ಲಾಭವಾ? ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವಿಶ್ಲೇಷಣೆ

ನೀವು ಮ್ಯುಚುವಲ್ ಫಂಡ್​ನ ಹೂಡಿಕೆಯನ್ನು ಹಿಂಪಡೆಯುವುದಿದ್ದರೆ ಅಥವಾ ಹೂಡಿಕೆ ಹೆಚ್ಚಿಸಿದರೆ ಅದೆಲ್ಲವೂ ಫೋಲಿಯೋ ಅಕೌಂಟ್​ನಲ್ಲಿ ದಾಖಲಾಗಿರುತ್ತದೆ.

ಡೀಮ್ಯಾಟ್ ಅಕೌಂಟ್ ಇದ್ದರೆ ಹೆಚ್ಚು ಅನುಕೂಲ

ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಡೀಮ್ಯಾಟ್ ಅಕೌಂಟ್ ಕಡ್ಡಾಯವಲ್ಲವಾದರೂ, ಅದು ಇದ್ದರೆ ಹೆಚ್ಚು ಅನುಕೂಲವಾಗುತ್ತದೆ. ನಿಮ್ಮ ಹೂಡಿಕೆಯನ್ನು ಗಮನಿಸಲು, ನಿರ್ವಹಿಸಲು ಸುಲಭ ಮಾಡಿಕೊಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ