ನೀವು ನಕಲಿ ರೆಂಟ್ ರೆಸಿಪ್ಟ್ ಸಲ್ಲಿಸಿದ್ರೆ ಸರ್ಕಾರಕ್ಕೆ ಗೊತ್ತಾಗುತ್ತೆ ಹುಷಾರ್..! ಇಲಾಖೆ ನೆರವಿಗೆ ಎಐ ಟೆಕ್ನಾಲಜಿ

|

Updated on: Jul 17, 2024 | 10:47 AM

Fake Rent Rent Receipts: ಐಟಿ ರಿಟರ್ನ್ ಸಲ್ಲಿಸುವ ಸಂದರ್ಭದಲ್ಲಿ ಬಹಳಷ್ಟು ತೆರಿಗೆ ಪಾವತಿದಾರರು ನಕಲಿ ರೆಂಟ್ ರೆಸಿಪ್ಟ್ಸ್ ಸಲ್ಲಿಸುತ್ತಾರೆ. ಕಟ್ಟುತ್ತಿರುವುದಕ್ಕಿಂತ ತೀರಾ ಹೆಚ್ಚಿನ ಮೊತ್ತದ ಬಾಡಿಗೆ ಹಣವನ್ನು ತೋರಿಸಿ ದಾಖಲೆ ಸೃಷ್ಟಿಸುವವರು ಹಲವರಿದ್ದಾರೆ. ನೀವು ವಾಸ್ತವವಾಗಿ ಕಟ್ಟುವ ಬಾಡಿಗೆಯು ಪ್ಯಾನ್ ಮೂಲಕ ದಾಖಲಾಗುವುದರಿಂದ ಎಐಎಸ್ ಸ್ಟೇಟ್ಮೆಂಟ್​ನಲ್ಲಿ ಅದು ನಮೂದಾಗುತ್ತದೆ. ಈ ಮೂಲಕ ಇಲಾಖೆಯ ಗಮನಕ್ಕೆ ಇದು ಹೋಗಬಹುದು.

ನೀವು ನಕಲಿ ರೆಂಟ್ ರೆಸಿಪ್ಟ್ ಸಲ್ಲಿಸಿದ್ರೆ ಸರ್ಕಾರಕ್ಕೆ ಗೊತ್ತಾಗುತ್ತೆ ಹುಷಾರ್..! ಇಲಾಖೆ ನೆರವಿಗೆ ಎಐ ಟೆಕ್ನಾಲಜಿ
ರೆಂಟ್ ರೆಸಿಪ್ಟ್
Follow us on

ನವದೆಹಲಿ, ಜುಲೈ 17: ಆದಾಯ ತೆರಿಗೆ ಉಳಿಸಲು ಅಧಿಕೃತವಾಗಿಯೇ ಹಲವು ಮಾರ್ಗಗಳಿವೆ. ಆದರೂ ಕೂಡ ನಕಲಿ ಪ್ರಮಾಣಪತ್ರ, ದಾಖಲೆಗಳನ್ನು ಕೊಟ್ಟು ತೆರಿಗೆ ಉಳಿಸಲು ಪ್ರಯತ್ನಿಸುವ ಜನರು ಹಲವರಿದ್ದಾರೆ. ಒಂದು ವರದಿ ಪ್ರಕಾರ ತೆರಿಗೆ ಉಳಿಸಲು ಜನರು ನಕಲಿ ದಾಖಲೆ ಸೃಷ್ಟಿಸುವುದು ಹೆಚ್ಚಾಗಿ ರೆಂಟ್ ರೆಸಿಪ್ಟ್ಸ್ ಎಂದು ಹೇಳಲಾಗುತ್ತದೆ. ನಕಲಿ ಬಾಡಿಗೆ ಸ್ವೀಕೃತಿ ದಾಖಲೆಗಳನ್ನು ಸಲ್ಲಿಸಿ ಒಂದಷ್ಟು ತೆರಿಗೆ ಉಳಿಸಲಾಗುತ್ತದೆ. ಈಗ ಇಂಥವನ್ನು ಪತ್ತೆ ಹೆಚ್ಚಲು ಆದಾಯ ತೆರಿಗೆ ಇಲಾಖೆ ಬಳಿ ಹೊಸ ತಂತ್ರಜ್ಞಾನ ಶಕ್ತಿ ಇದೆ. ನಕಲಿ ದಾಖಲೆಗಳನ್ನು ಈಗ ಸುಲಭವಾಗಿ ಪತ್ತೆ ಹಚ್ಚಬಲ್ಲುದು.

ರೆಂಟ್ ರೆಸಿಪ್ಟ್ ಯಾಕೆ ಬೇಕು?

ಉದ್ಯೋಗಿಯ ಸಂಬಳದಲ್ಲಿ ಎಚ್​ಆರ್​ಎ ಅಥವಾ ಹೌಸ್ ರೆಂಟ್ ಅಲೋಯನ್ಸ್ ಇದ್ದರೆ ಅಂಥವರು ಮನೆ ಬಾಡಿಗೆ ಹಣ ಪಾವತಿಯ ದಾಖಲೆಯನ್ನು ಕಂಪನಿಯ ಎಚ್​ಆರ್​ಗೆ ಸಲ್ಲಿಸಬೇಕು. ಆದಾಯ ತೆರಿಗೆಯಲ್ಲಿ ಈ ಮನೆ ಬಾಡಿಗೆಗೆ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ. ಎಚ್​ಆರ್​ಗೆ ಸಲ್ಲಿಸದೇ ಇದ್ದರೆ ತೆರಿಗೆ ಕಡಿತಗೊಳ್ಳುತ್ತದೆ. ಐಟಿ ರಿಟರ್ನ್ಸ್ ಸಲ್ಲಿಸುವಾಗ ಒಟ್ಟಿಗೆ ರೆಂಟ್ ರೆಸಿಪ್ಟ್ಸ್ ಅಪ್​ಲೋಡ್ ಮಾಡಬಹುದು. ಕಡಿತಗೊಂಡಿದ್ದ ತೆರಿಗೆ ಹಣ ರೀಫಂಡ್ ಆಗುತ್ತದೆ.

ಇದನ್ನೂ ಓದಿ: ಸಾಲ ಕಟ್ಟಲಿಲ್ಲವೆಂದರೆ ಏನೇನಾಗಬಹುದು? ನಿಮ್ಮ ಪರವಾಗಿ ಕಾನೂನು ಏನಿರುತ್ತದೆ? ಇವು ತಿಳಿದಿರಿ

ನಕಲಿ ರೆಂಟ್ ರೆಸಿಪ್ಟ್ ಅನ್ನು ಹೇಗೆ ಪತ್ತೆ ಮಾಡಲಾಗುತ್ತದೆ?

ವರ್ಷಕ್ಕೆ ಒಂದು ಲಕ್ಷ ರೂಗಿಂತ ಹೆಚ್ಚು ಬಾಡಿಗೆ ಕಟ್ಟುತ್ತಿದ್ದರೆ ಅಂಥವರು ತಮ್ಮ ಮನೆ ಮಾಲಕರ ಪ್ಯಾನ್ ನಂಬರ್ ಅನ್ನು ಒದಗಿಸಬೇಕು. ಈ ರೀತಿಯಾಗಿ ನೀವು ಮನೆ ಬಾಡಿಗೆ ಪಾವತಿಸಿರುವುದು ಎಐಎಸ್ ಅಥವಾ ಆನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ ಎಂಬ ದಾಖಲೆಯಲ್ಲಿ ನಮೂದಾಗುತ್ತದೆ.

ಹೀಗಾಗಿ, ನೀವು ಹೆಚ್ಚು ಮನೆ ಬಾಡಿಗೆ ತೋರಿಸಿ ರೆಂಟ್ ರೆಸಿಪ್ಟ್ ಸೃಷ್ಟಿಸಿ ಐಟಿಆರ್ ಸಲ್ಲಿಕೆ ವೇಳೆ ಒದಗಿಸಿದಿರಿ ಎಂದಿಟ್ಟುಕೊಳ್ಳಿ. ಆಗ ಇದರ ಮಾಹಿತಿ ಮತ್ತು ಎಐಎಸ್​ನಲ್ಲಿರುವ ಮಾಹಿತಿಯಲ್ಲಿ ವ್ಯತ್ಯಾಸ ಎದ್ದುಗಾಣುತ್ತದೆ. ಆದಾಯ ತೆರಿಗೆ ಇಲಾಖೆ ಅಳವಡಿಸಿರುವ ಎಐ ತಂತ್ರಜ್ಞಾನವು ಈ ವ್ಯತ್ಯಾಸವನ್ನು ಗುರುತಿಸಬಲ್ಲುದು. ಆಗ ಆದಾಯ ತೆರಿಗೆ ಇಲಾಖೆ ನಿಮಗೆ ನೋಟೀಸ್ ಜಾರಿ ಮಾಡಬಹುದು.

ಇದನ್ನೂ ಓದಿ: ಆಭರಣಕ್ಕೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಲೆಕ್ಕಾಚಾರ ಹೇಗಿರುತ್ತೆ? ಒಡವೆ ಖರೀದಿಸುವ ಮುನ್ನ ಈ ಸಂಗತಿ ತಿಳಿದಿರಿ

ಆದರೆ, ಒಂದು ಲಕ್ಷ ರೂವರೆಗಿನ ಮನೆ ಬಾಡಿಗೆಗೆ ನೀವು ಮಾಲೀಕರ ಪ್ಯಾನ್ ನಂಬರ್ ಕೊಡುವ ಅವಶ್ಯಕತೆ ಇರುವುದಿಲ್ಲ. ಆದಾಯ ತೆರಿಗೆ ಇಲಾಖೆ ಕೂಡ ಈ ಸಂದರ್ಭದಲ್ಲಿ ದಾಖಲೆಗಳನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಆದರೆ, ವರ್ಷಕ್ಕೆ ಒಂದು ಲಕ್ಷ ರೂಗಿಂತ ಹೆಚ್ಚಿನ ಬಾಡಿಗೆ ಹಣ ಇದ್ದಾಗ ಮಾತ್ರ ಅದು ಇಲಾಖೆ ಗಮನಕ್ಕೆ ಬರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ